ಆರೋಗ್ಯ

ಕೇಶಕಾಂತಿ ಜೊತೆಗೆ ಹಲವು ಸಮಸ್ಯೆ ನಿವಾರಣೆಗೆ ಈ ಹಾಗಲಕಾಯಿ ಸಹಕಾರಿ.

Pinterest LinkedIn Tumblr

bitter_goued_1

ಅಧರಕ್ಕೆ ಕಹಿ ಉದರಕ್ಕೆ ಸಿಹಿ

ಹಾಗಲಕಾಯಿ ಬರಿ ಆಹಾರವಾಗಿ ಮಾತ್ರವಲ್ಲ ಕೂದಲ ಕಾಂತಿ ಹಾಗೂ ಆರೋಗ್ಯಕರ ಕೇಶಕ್ಕಾಗಿ ಕೂಡ ಬಳಸಬಹುದು. ಇದಕ್ಕೆ ಹಾಗಲಕಾಯಿ ಜ್ಯೂಸ್ ಉತ್ತಮ ಪರಿಣಾಮ ಬೀರಬಲ್ಲದು.

ಹಾಗಲಕಾಯಿಯನ್ನು ಜಜ್ಜಿ ಅದರಿಂದ ದಪ್ಪ ರಸವನ್ನು ತೆಗೆದು ಬಾಲ ನೆರೆ ಉಂಟಾಗಿದ್ದರೆ ಅದಕ್ಕೆ ಈ ರಸವನ್ನು ಲೇಪಿಸಿ. ಒಂದೆರಡು ತಾಸು ಕಳೆದ ಬಳಿಕ ಸ್ನಾನ ಮಾಡಿ. ಪ್ರತಿ ಹತ್ತು ದಿನಕ್ಕೊಮ್ಮೆ ಈ ರೀತಿ ಮಾಡುತ್ತಿದ್ದರೆ ಬಾಲ ನೆರೆಯ ಸಮಸ್ಯೆ ಕಡಿಮೆಯಾಗುತ್ತದೆ.

ಸೀಳು ಕೂದಲಿನ ಸಮಸ್ಯೆಯಿದ್ದವರು ಹಾಗಲಕಾಯಿಯನ್ನು ಕತ್ತರಿಸಿ ನೆತ್ತಿಯ ಮೇಲೆ ಚೆನ್ನಾಗಿ ಉಜ್ಜಬೇಕು. ಜತೆಗೆ ಇದರ ರಸವನ್ನು ಕೂದಲಿಗೆ ಹಚ್ಚಬೇಕು. ಗಮನಾರ್ಹವಾದ ಫಲಿತಾಂಶಕ್ಕಾಗಿ ಈ ರೀತಿ ವಾರಕ್ಕೆರಡು ಬಾರಿ ಮಾಡಿದರೆ ಸೀಳು ಕೂದಲಿನಿಂದ ಮುಕ್ತಿ ಪಡೆಯಬಹುದು.

ಸಾಮಾನ್ಯವಾಗಿ ಕೂದಲು ಹೊಳಪು ಕಳೆದುಕೊಳ್ಳುವುದು ಸಹಜ. ಇದಕ್ಕೂ ಹಾಗಲಕಾಯಿಂದ ಪರಿಹಾರ ಇದೆ. ಹಾಗಲಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರೆಯಿರಿ. ಅದು ತಣ್ಣಗಾದ ಬಳಿಕ ಹಾಗಲಕಾಯಿಯನ್ನು ತೆಗದು ಚೆನ್ನಾಗಿ ಹಿಂಡಿ. ಆ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡರೆ ಮತ್ತೆ ಹೊಳಪನ್ನು ಪಡೆಯಬಹುದು. ವಾರಕ್ಕೆ ಒಂದು ಬಾರಿ ಅಥವಾ ವಾರಕ್ಕೆರಡು ಬಾರಿ ಈ ರೀತಿ ಮಾಡುತ್ತಿದ್ದರೆ ಕೂದಲು ಕಾಂತಿಯುಕ್ತವಾಗಿ ದಟ್ಟವಾಗಿ ಬೆಳೆಯುತ್ತದೆ.

Comments are closed.