ರಾಷ್ಟ್ರೀಯ

ಗಂಡನಿಗೆ ಅತ್ಯಾಚಾರ ಮಾಡಲು ಸಾಥ್ ನೀಡಿ ಚಿತ್ರೀಕರಿಸಿದ ಹೆಂಡತಿ ! ಮುಂದೆ ಇವರಿಬ್ಬರು ಮಾಡಿದ ಘನಂದಾರಿ ಕೆಲಸ ನೋಡಿ….

Pinterest LinkedIn Tumblr

ಲಖನೌ : ಗಂಡ ಪರ ಹೆಣ್ಣಿನ ಸಹವಾಸ ಮಾಡಿದರೆ ಯಾವ ಹೆಂಡತಿಯೂ ಅದನ್ನು ಸಹಿಸುವುದಿಲ್ಲ. ಕೊನೆ ಪಕ್ಷ ಗಂಡನಿಗೆ ಬುದ್ಧಿ ಹೇಳಲು ಆಕೆ ಪ್ರಯತ್ನಿಸುತ್ತಾಳೆ. ಆದರೆ, ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಮಾಡಲು ಗಂಡನಿಗೆ ಹೆಂಡತಿಯೇ ಸಾತ್​ ನೀಡಿದ್ದಾಳೆ! ಮುಜಾಫರ್​ನಗರದಲ್ಲಿ ನಡೆದ ಈ ಪ್ರಕರಣ ಎಲ್ಲರಿಗೂ ಆಘಾತ ಉಂಟು ಮಾಡಿದೆ.

ಮುಜಾಫರ್​ನಗರದ ನಿವಾಸಿ ಸಂಜೀವ್​ ಲೋಹಾನ್ ಈ ಪ್ರಕರಣದ ಪ್ರಮುಖ ಆರೋಪಿ. 22-23 ವರ್ಷದ ಎರಡು ಯುವತಿಯರನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆತ, ಅವರ ಮೇಲೆ ಅತ್ಯಾಚಾರವೆಸಗಿದ್ದ. ವಿಚಿತ್ರ ಎಂದರೆ, ಪತಿ ಅತ್ಯಾಚಾರ ಮಾಡುವುದನ್ನು ಆತನ ಹೆಂಡತಿ ರೀತಾ ಲೋಹಾ ಚಿತ್ರೀಕರಿಸಿದ್ದಾಳೆ.

ಈ ವಿಡಿಯೋ ಇಟ್ಟುಕೊಂಡು ಸಂತ್ರಸ್ತೆಯರಿಗೆ ರೀತಾ ಬೆದರಿಕೆ ಹಾಕಿದ್ದಾಳೆ. ಅಷ್ಟೇ ಅಲ್ಲ, ಕಳ್ಳ ಸಾಗಣೆಗೆ ಅವರನ್ನು ತಳ್ಳುವುದಾಗಿ ಹೇಳಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಂಸ್ತೆಯರು ದೂರು ದಾಖಲಿಸಿದ್ದಾರೆ.

ದೂರು ಆಧರಿಸಿ ಪೊಲೀಸರು ರೀತಾ ಹಾಗೂ ಸಂಜೀವನನ್ನು ಬಂಧಿಸಿದ್ದಾರೆ. ಸದ್ಯ ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಯುವತಿಯರಿಗೆ ಬೆದರಿಕೆ ಹಾಕಿದ ಹಿಂದಿನ ಉದ್ದೇಶ ಏನು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Comments are closed.