ಆರೋಗ್ಯ

ದೇಹದ ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಲು…. ಈ ರೀತಿ ಮಾಡಿ.

Pinterest LinkedIn Tumblr

wight_gain_food

ಅನ್ನದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು, ದೇಹದ ತೂಕ ಕೂಡ ಹೆಚ್ಚಾಗುವುದು. ಆರೋಗ್ಯದ ದೃಷ್ಟಿಯಿಂದ ಕೆಂಪಕ್ಕಿ ಅನ್ನ ತಿಂದರೆ ಮತ್ತಷ್ಟು ಒಳ್ಳೆಯದು.
* ಅಕ್ಕಿ ಬಳಸಿ ಮಾಡುವ ಇಡ್ಲಿ ಆರೋಗ್ಯಕರವಾಗಿದೆ. ಇದನ್ನು ಮಾಡುವಾಗ ತರಕಾರಿ ಹಾಕಿ ಮಾಡಿದರೆ ಮತ್ತಷ್ಟು ರುಚಿಕರವಾಗಿರುತ್ತದೆ.
* ಪನ್ನೀರ್, ಚೀಸ್ , ಚಿಕನ್ , ಮೀನು, ಹಾಲಿನ ಉತ್ಪನ್ನಗಳು, ತುಪ್ಪ ಈ ರೀತಿಯ ಆಹಾರಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
* ದಪ್ಪಗಾಗಲು ಪ್ರಯತ್ನಿಸುವವರು ಪ್ರತೀದಿನ ಚೀಸ್ ತಿಂದರೆ ಬೇಗನೆ ಫಲಿತಾಂಶ ದೊರೆಯುತ್ತದೆ.
* ಕೊಬ್ಬಿನಂಶವಿರುವ ಮೊಸರು ದೇಹದ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ಮೊಸರನ್ನ ತಿನ್ನುತ್ತಾ ಬಂದರೆ ದೇಹಕ್ಕೂ ಒಳ್ಳೆಯದು, ತೂಕವೂ ಹೆಚ್ಚುವುದು.
* ಸಣ್ಣಗಾಗಲು ಪ್ರಯತ್ನಿಸುವವರು ಗೋಧಿ ಬ್ರೆಡ್ ತಿನ್ನಬೇಕು. ದಪ್ಪಗಾಗಲು ಪ್ರಯತ್ನಿಸುವವರು ಬಿಳಿ ಬ್ರೆಡ್ ತಿನ್ನುವುದು ಒಳ್ಳೆಯದು.
* ಬಾಳೆ ಹಣ್ಣಿನಲ್ಲಿ ಅಧಿಕ ಕ್ಯಾಲೋರಿ ಅಧಿಕವಿರುವುದರಿಂದ ದೇಹದ ತೂಕ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
* ಪ್ರತೀದಿನ ಸ್ವಲ್ಪ ದ್ರಾಕ್ಷಿಯನ್ನು ನೆನೆ ಹಾಕಿ. ನಂತರ ಬೆಳಗ್ಗೆ ತಿನ್ನಿ. ಹೀಗೆ ಮಾಡಿದರೆ ತೂಕ ಹೆಚ್ಚಾಗುವಿರಿ. ದ್ರಾಕ್ಷಿ ಜೊತೆ ಸ್ವಲ್ಪ ಬಾದಾಮಿ ಕೂಡ ನೆನೆ ಹಾಕಿದರೆ ಒಳ್ಳೆಯದು.
* ದಿನಕ್ಕೆ ಎರಡು ಬಾಳೆಹಣ್ಣು ಅವಶ್ಯ. ಇದನ್ನು ನೇರವಾಗಿ ಅಥವಾ ಹಾಲಿನಲ್ಲಿ ಬೆರೆಸಿ ಸೇವಿಸಿರಿ.
* ತಿಂಡಿಗಾಗಿ ಹಣ್ಣುರಸ ಮಿಶ್ರಿತ ಹಾಲು, ಮೊಸರು ಹಾಗೂ ಕೆನೆ ಉತ್ತಮ.
* ತಾಜಾ ಹಣ್ಣಿನ ರಸ, ಒಣಗಿದ ಹಣ್ಣು(ಗೋಡಂಬಿ) ಹೆಚ್ಚು ಸೇವಿಸಿರಿ.
*ಶಕ್ತಿ ನೀಡುವ ಆಹಾರ(ಆಲೂಗಡ್ಡೆ, ಗೆಣಸು, ಅನ್ನ. ಬೆಣ್ಣೆ, ತುಪ್ಪ , ಮೊಟ್ಟೆ, ಸಿಹಿಪದಾರ್ಥ).ಮತ್ತು ತರಕಾರಿ(ಎಲೆಕೋಸು, ಹೂಕೋಸು, ಬೆಂಡೆ, ಹುರುಳಿ, ಬದನೆಕಾಯಿ,ಬೀಟ್‌ರೂಟ್)ಗಳ ಪ್ರಮಾಣ ಹೆಚ್ಚಿಸಿರಿ.
* ಮೀನು, ಮಾಂಸ, ಅವರೆ, ಬೇಳೆಕಾಳು, ಮೊಳಕೆಕಾಳು, ಆಹಾರದಲ್ಲಿರಲಿ. ದಿನನಿತ್ಯ ಬೆಳಿಗ್ಗೆ ಮೊಟ್ಟೆ ಸೇವಿಸಿರಿ.
* ರಾಗಿ, ನವಣೆಯಲ್ಲಿ ಕಬ್ಬಿಣಾಂಶ ಹೆಚ್ಚು. ಇವುಗಳನ್ನು ಸೇವಿಸಲು ಮರೆಯದಿರಿ.
* ನಿದ್ರೆ ಹೋಗುವ ವೇಳೆ ಮತ್ತು ಎದ್ದೇಳುವ ಸಮಯ ನಿಗದಿಯಾಗಿರಲಿ. ಕನಿಷ್ಠ ಆರು ಗಂಟೆ ನಿದ್ರೆ ಅವಶ್ಯ. ನಿದ್ರೆಗೆಟ್ಟು ಅಭ್ಯಾಸ ಅಥವಾ ಕೆಲಸ ಬೇಡ.
* ಐಸ್‌ಕ್ರೀಮ್ ಸೇವಿಸಿರಿ. ಏಕೆಂದರೆ ಇದೊಂದು ಪುಷ್ಟಿದಾಯಕ ಹಾಗೂ ಸುಲಭವಾಗಿ ಜೀರ್ಣವಾಗುವ ಸಂಪೂರ್ಣ ಆಹಾರ. ನೂರು ಗ್ರಾಂ ಐಸ್ ಕ್ರೀಮ್ 200 ಗ್ರಾಂ ಕ್ಯಾಲೊರಿ ಶಕ್ತಿ ನೀಡುತ್ತದೆ. ದುಬಾರಿಯಾದರೂ * ಚಿಂತೆಯಿಲ್ಲ ಉತ್ತಮ ಗುಣಮಟ್ಟದ, ಒಳ್ಳೆ ತಯಾರಕರ ಮತ್ತು ಪ್ಯಾಕಿಂಗ್ ಹೊಂದಿರುವುದನ್ನು ಸೇವಿಸಿರಿ. ಬೀದಿ ಬಳಿಯಲ್ಲಿನ ಐಸ್ ಕ್ರೀಮ್ ಅಥವಾ ಸಾಫ್ಟಿ ಬೇಡ. ಇವು ಅನಾರೋಗ್ಯಕರ.
* ವ್ಯಾಯಾಮ: ತೂಕ ಹೆಚ್ಚಿಸುವ ಮತ್ತು ಮಾಂಸಖಂಡ ಗಾತ್ರ ಹೆಚ್ಚಿಸುವ ವ್ಯಾಯಾಮ ಹೆಚ್ಚು ಮಾಡಿರಿ.

ಉದಾ: ಈಜುವುದು, ಡೆಮ್ ಬೆಲ್ಟ್, ಪೂಲ್ ಅಪ್ಸ್, ಬಾರ್ ಡಿಷ್, ಬಾಲ್ ಬೆಲ್. ವಾರದಲ್ಲಿ 4 ಗಂಟೆಯಂತೆ, 12 ವಾರ ನಿಯಮಿತ ವ್ಯಾಯಾಮ ಅವಶ್ಯ. ಭಾರ ಎತ್ತುವ ಮತ್ತು ಯಂತ್ರ ಆಧಾರಿತ ವ್ಯಾಯಾಮ ಬೇಡ.

Comments are closed.