ಆರೋಗ್ಯ

ರೆಡ್ ವೈನ್ ನ ಆರೋಗ್ಯಕಾರಿ ಲಾಭಗಳ ಬಗ್ಗೆ ಹಲವಾರು ವಿವರ ಇಲ್ಲಿದೆ..

Pinterest LinkedIn Tumblr

red_wine_medicin

ಪ್ರತಿಯೊಬ್ಬ ಮನುಷ್ಯನಿಗೆ ಆಲ್ಕೋಹಾಲ್ ಅನ್ನು ತನ್ನ ಅತ್ಯುತ್ತಮ ಗೆಳೆಯನೆಂದು ಭಾವಿಸಿದ್ದರೆ ಅಂತವರಿಗೆ ಒಂದು ಒಳ್ಳೆಯ ಸುದ್ದಿಯಿದೆ. ಮಿತಿಯಾಗಿ ರೆಡ್ ವೈನ್ ಸೇವಿಸುವುದರಿಂದ ಮೆದುಳಿನ ಆರೋಗ್ಯ ಉತ್ತಮವಾಗಿರುತ್ತದೆ. ರೆಡ್ ವೈನ್ ನ ಆರೋಗ್ಯಕಾರಿ ಲಾಭಗಳ ಬಗ್ಗೆ ಹಲವಾರು ವರದಿಗಳು ಪ್ರಕಟವಾಗಿದೆ.

ವೈನ್ ಕುಡಿಯುವುದರಿಂದ ಆಗುವ ಅನುಕೂಲಗಳನ್ನು ಹೀಗೆ ಉದಾಹರಿಸಬಹುದು:
* ಕೊಲೆಸ್ಟ್ರಾಲ್ ನಿಯಂತ್ರಣ ಶಕ್ತಿ.
* ಹೃದಯ ಹಾಗೂ ಹಲ್ಲಿನ ಆರೋಗ್ಯ ಅನುಕೂಲ[ಇದು ಹೊಸ ಮದ್ಯಪಾನಿಗಳಿಗೆ ಅನ್ವಯವಾಗುವುದಿಲ್ಲ
* ತ್ವಚೆ ಸಂರಕ್ಷಿಸಿ, ನಿಜ ವಯಸ್ಸನ್ನು ಮರೆ ಮಾಚುವಂತೆ ಮಾಡಬಹುದು.
* ಅಲ್ ಜೈಮೆರ್ ಕಾಯಿಲೆ ತೊಂದರೆ ಕಮ್ಮಿ ಮಾಡಬಹುದು.
* ಡಿಎನ್ಎ ತೊಂದರೆ ನಿಯಂತ್ರಣಕ್ಕೆ ಉಪಯೋಗ.

ಆದರೆ, ಹೆಚ್ಚಿನ ವೈನ್ ಸೇವನೆಯಿಂದ ಅಧಿಕ ರಕ್ತದೊತ್ತಡ, ಕರಳು ಬೇನೆ, ಕಿಡ್ನಿ ವೈಫಲ್ಯ, ನರ ದೌರ್ಬಲ್ಯ, ಕಾನ್ಸರ್ , ಹೃದಯಾಘಾತಕ್ಕೂ ಕಾರಣವಾಗುವುದುಂಟು.

ಡಯಾಬಿಟಿಸ್ ರೋಗಿಗಳು ವೈನ್ ಸೇವಿಸುವುದು ಒಳ್ಳೆಯದು ಎಂದು ಇತ್ತೀಚೆಗೆ ತಜ್ಞ ವೈದ್ಯರು ಕಂಡುಕೊಂಡ ಸತ್ಯ. ವೈನ್ ಸೇವನೆ ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸುತ್ತದೆ. ದೇಹಕ್ಕೆ ಅಗತ್ಯವಾದ ಗ್ಲುಕೋಸ್ ಒದಗಿಸಿ, ಇನ್ಸುಲಿನ್ ಚುಚ್ಚುಮದ್ದು ಮಾಡುವ ಕೆಲಸವನ್ನು ವೈನ್ ಮಾಡಿಬಿಡುತ್ತದೆ. ಆದರೆ, ಔಷಧಿ ರೂಪದಲ್ಲಿ ಸೇವಿಸಿದರೆ ಮಾತ್ರ ವೈನ್ ದೇಹಕ್ಕೂ ಮನಸಿಗೂ ಹಿತ ಎಂಬ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡುತ್ತಾರೆ.

ವೈನ್ ನ ಪ್ರಮುಖ ಆರೋಗ್ಯಕರ ಗುಣವೆಂದರೆ ಅದು ಪಾರ್ಶ್ವವಾಯು ತಪ್ಪಿಸುತ್ತದೆ. ಮೆದುಳಿನ ಆರೋಗ್ಯದಲ್ಲಿ ರೆಡ್ ವೈನ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳಿವೆ. ಸಂಯುಕ್ತ ರೆಸ್ವೆರಾಟ್ರೊಲ್ ಪಾರ್ಶ್ವವಾಯು ತಪ್ಪಿಸುವ ಸಾಮರ್ಥ್ಯ ಹೊಂದಿದೆ. ಈ ಸಂಯುಕ್ತವನ್ನು ಪ್ರಾಣಿಗಳಿಗೆ ನೀಡಲಾಯಿತು ಮತ್ತು ಈ ಸಂಯುಕ್ತ ನೀಡಿದ ಪ್ರಾಣಿಗಳು ಇತರ ಪ್ರಾಣಿಗಳಿಂತ ಮೆದುಳಿನ ಹಾನಿಗೊಳಗಾದದ್ದು ಕಡಿಮೆ ಎನ್ನುವುದನ್ನು ತೋರಿಸಿದೆ. ಸಂಯುಕ್ತ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಮಾಡುತ್ತದೆ ಮತ್ತು ವೇಗವಾಗಿ ಚೇತರಿಸಲು ನೆರವಾಗುತ್ತದೆ.

ಕೆಂಪು ವೈನ್ ನಲ್ಲಿರುವ ಆರೋಗ್ಯಕಾರಿ ಲಾಭಗಳು.
ದೀರ್ಘಾವಧಿ ತನಕ ಮೆದುಳಿನ ಹಾನಿಯನ್ನು ತಡೆಯುವಂತಹ ಸಾಮರ್ಥ್ಯ ರೆಡ್ ವೈನ್‌ನಲ್ಲಿದೆ. ರೆಡ್ ವೈನ್ ನಿಂದಾಗಿ ಶೇ. 40ರಷ್ಟು ಮೆದುಳಿನ ಹಾನಿಯನ್ನು ತಡೆಯಬಹುದು ಎಂದು ಸಂಶೋಧನೆಗಳು ಹೇಳಿವೆ. ಆದಾಗ್ಯೂ ಇದರ ಬಗ್ಗೆ ಪ್ರಯೋಗ ಶಾಲೆಯಲ್ಲಿ ಯಾವುದೇ ಪ್ರಯೋಗವಾಗಿಲ್ಲ ಮತ್ತು ವೈನ್ ಅಥವಾ ಆಲ್ಕೋಹಾಲ್ ನ್ನು ಮಿತವಾಗಿ ಸೇವಿಸಬೇಕೆಂದು ಸಂಶೋಧನೆಗಳು ಹೇಳಿವೆ. ಅತಿಯಾದ ಸೇವನೆ ತೊಂದರೆಯನ್ನುಂಟು ಮಾಡಬಹುದು. ರೆಡ್ ವೈನ್ ನ್ನು ಮೆದುಳಿಗೆ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಇದರಿಂದ ಮಿತವಾಗಿ ಅದನ್ನು ಕುಡಿಯಿರಿ.

Comments are closed.