ಆರೋಗ್ಯ

ಆರೋಗ್ಯವನ್ನು ಕಾಪಾಡಿಕೊಳ್ಳಲು ಗರ್ಭಿಣಿಯರು ಈ 7 ಟಿಪ್ಸ್ ಕಡ್ಡಾಯವಾಗಿ ಅನುಸರಿಸಿ…..

Pinterest LinkedIn Tumblr

pregnancy

ನವದೆಹಲಿ: ಗರ್ಭಿಣಿಯರು ಒತ್ತಡದ ಕೆಲಸಗಳ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಹೆಚ್ಚು ನೀರು ಕುಡಿಯುವುದು, ನಿಯಮಿತವಾಗಿ ಲಘು ಉಪಹಾರಗಳನ್ನು ಸೇವಿಸುವುದು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಿಮಾಲಯ ಡ್ರಗ್ ಕಂಪನಿಯ ಹಿರಿಯ ಸಂಶೋಧಕ ವಿಜ್ಞಾನಿಯಾಗಿರುವ ಪೂರ್ಣಿಮಾ ಶಂಕರ್, ಗರ್ಭಿಣಿಯರು ಒತ್ತಡದ ಕೆಲಸಗಳ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುವ 7 ಟಿಪ್ಸ್ ಗಳನ್ನು ನೀಡಿದ್ದಾರೆ.

ಸಮತೋಲನ: ಕೆಲಸ ಮಾಡುವುದಕ್ಕೆ ಅನುಗುಣವಾಗಿ ಆಹಾರ ಸೇವಿಸುವುದು ಗರ್ಭಿಣಿಯರಿಗೆ ಅತ್ಯಂತ ಮುಖ್ಯವಾದ ಅಂಶ. ಕೆಲಸ ಮಾಡುವುದಕ್ಕಿಂತ ಹೆಚ್ಚು ಆಹಾರ ಸೇವಿಸಿದರೆ ತೂಕ ಹೆಚ್ಚುತ್ತದೆ. ಅಂತೆಯೇ ಆಹಾರ ಸೇವಿಸುವುದಕ್ಕಿಂತ ಹೆಚ್ಚು ಕೆಲಸ ಮಾಡಿದರೆ ತೂಕ ನಷ್ಟ ಮತ್ತು ದಣಿವಿಗೆ ಕಾರಣವಾಗುತ್ತದೆ. ಆದ್ದರಿಂದ ಆಹಾರ ಸೇವನೆ ಹಾಗೂ ಕೆಲಸದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ.

ಆರೋಗ್ಯಕರ ಆಹಾರ, ವ್ಯಾಯಾಮ: ಗರ್ಭಧರಿಸಿದ ಅವಧಿಯಲ್ಲಿ ಆರೋಗ್ಯಕರ ಆಹಾರ ಸೇವಿಸಿ ವ್ಯಾಯಾಮ ಮಾಡುವುದು ತಾಯಂದಿರ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲಿವೆ.

ಮ್ಯಾಕ್ರೋ ನ್ಯೂಟ್ರಿಯಂಟ್ ಹಾಗೂ ಮೈಕ್ರೋನ್ಯೂಟ್ರಿಯಂಟ್ ಆಹಾರ: ದೊಡ್ಡ ಪ್ರಮಾಣದಲ್ಲಿ ಪೌಷ್ಟಿಕಗಳನ್ನು ಹೊಂದಿರುವ ಆಹಾರಗಳು ಮ್ಯಾಕ್ರೋನ್ಯೂಟ್ರಿಯಂಟ್ ಹಾಗೂ ಕಡಿಮೆ ಪ್ರಮಾಣದಲ್ಲಿ ಪೌಷ್ಟಿಕಗಳನ್ನು ಹೊಂದಿರುವ ಆಹಾರಗಳು ಮೈಕ್ರೋನ್ಯೂಟ್ರಿಯಂಟ್ ಗಳಾಗಿದ್ದು ಎರಡನ್ನೂ ಸಮತೋಲನವಾಗಿ ಸೇವಿಸುವುದು ಸೂಕ್ತ.

ಮೊಳಕೆ ಕಾಳುಗಳು, ಮೀನು, ಹಣ್ಣು ಮತ್ತು ತರಕಾರಿಗಳ ಬಳಕೆ ಅತ್ಯುತ್ತಮವಾದದ್ದು.

ಹೆಚ್ಚು ವಿಶ್ರಾಂತಿ: ಗರ್ಭಿಣಿಯರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುವುದಕ್ಕೆ ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯವಿದೆ.

ದೀರ್ಘ ಉಸಿರಾಟ: ಲಘು ಯೋಗ ಹಾಗೂ ದೀರ್ಘ ಉಸಿರಾಟ ನಡೆಸುವುದು ವಿಶ್ರಾಂತಿಗೆ ಸಹಕಾರಿಯಾಗಲಿದೆ.

ಕಡಿಮೆ ಉಪ್ಪಿನ ಬಳಕೆ: ಹೆಚ್ಚು ಉಪ್ಪು ಬಳಕೆ ರಕ್ತದೊತ್ತಡಕ್ಕೆ ಕಾರಣವಾಗುವುದರಿಂದ ಕಡಿಮೆ ಉಪ್ಪು ಬಳಸುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Comments are closed.