ಉಸಿರಿನ ದುರ್ವಾಸನೆಯು ಬಾಯಿಯಿಂದ ಹೊರಬರುವ ಒಂದು ಕೆಟ್ಟ ದುರ್ವಾಸನೆಯಾಗಿರುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಫಿಯೊರ್ ಒರಿಸ್, ಒಜೊಸ್ಟೊಮಿಯಾ ಮತ್ತು ಹಲಿಟೊಸಿಸ್ ಎಂದು ಸಹ ಕರೆಯುತ್ತಾರೆ.ಉಸಿರಿನ ದುರ್ವಾಸನೆಯು ಸಾಮಾನ್ಯವಾಗಿ ಹಲ್ಲುಗಳ ಆರೋಗ್ಯ ಮತ್ತು ವೈದ್ಯಕೀಯ ಸಮಸ್ಯೆಗಳಿಂದ ಕಾಣಿಸಿಕೊಳ್ಳುತ್ತದೆ. ಉಸಿರಿನ ದುರ್ವಾಸನೆ ಏಕೆ ಕಾಣಿಸಿಕೊಳ್ಳುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.
ಈ ಅಂಕಣದಲ್ಲಿ ನಾವು ಉಸಿರಿನ ದುರ್ವಾಸನೆಯ ಕಾರಣ ಮತ್ತು ಅದರ ನಿರ್ವಹಣೆಯ ಕುರಿತಾಗಿ ನಾವು ಚರ್ಚಿಸಿದ್ದೇವೆ.ನಿಮ್ಮ ಬಾಯಿಯಿಂದ ಹೊರಬರುವ ಉಸಿರಿನ ದುರ್ವಾಸನೆಯು ಡಿಮೀಥೈಲ್ ಸಲ್ಫೈಡ್ ಮತ್ತು ಜಲಜನಕದಂತಹ ಸಲ್ಫರ್ ಘಟಕಾಂಶಗಳನ್ನು ಒಳಗೊಂಡಿರುತ್ತದೆ. ಉಸಿರಿನ ದುರ್ವಾಸನೆಯಿಂದ ಹೊರಬರುವ 90% ಆವಿಯಲ್ಲಿ ಸಲ್ಫರ್ ಘಟಕಾಂಶಗಳೇ ಇರುತ್ತವೆ.
ಉಸಿರಿನ ದುರ್ವಾಸನೆಯ ಕುರಿತಾಗಿ ಇನ್ನೂ ಹೆಚ್ಚಿನ ಕಾರಣಗಳು ಇಂತಿವೆ:
ಪೋಸ್ಟೀರಿಯರ್ ಟಂಗ್ ಫ್ಲೋರಾ:
ಚೆನ್ನಾಗಿ ಬ್ರಷ್ ಮತ್ತು ಫ್ಲಾಸ್ ಮಾಡುವವರು ಸಹ ಉಸಿರಿನ ದುರ್ವಾಸನೆಯ ಕುರಿತಾಗಿ ದೂರುತ್ತಿರುತ್ತಾರೆ. ಆದರೆ ಇದಕ್ಕೆ ಅವರ ನಾಲಿಗೆಯ ಹಿಂಭಾಗವೇ ಸಮಸ್ಯೆಗೆ ಮೂಲವಾಗಿರುತ್ತದೆ. ನಾಲಿಗೆಯ ಪೋಸ್ಟೀರಿಯರ್ ಭಾಗವನ್ನು ಒಂದು ಡಿಸ್ಪೋಸಬಲ್ ಪ್ಲಾಸ್ಟಿಕ್ ಸ್ಪೂನ್ನಿಂದ ಕೆರೆದಾಗ, ಅದರಲ್ಲಿ ಒಂದು ಅಂಟು ಅಂಟಾದ ಪದಾರ್ಥವು ಹೊರ ಬರುತ್ತದೆ. ಅದು ಒಮ್ಮೊಮ್ಮೆ ಕೆಟ್ಟ ದುರ್ವಾಸನೆಯನ್ನು ಬೀರುತ್ತದೆ. ಇದು ನೋಡಲು ಹಳದಿ ಬಣ್ಣದಲ್ಲಿ ಇರುತ್ತದೆ. ಬಹುಶಃ ಇದು ಮೂಗಿನ ಹೊಳ್ಳೆಗಳಿಂದ ಸುರಿಯುವ ದ್ರವದಿಂದ ಉಂಟಾಗಬಹುದು. ಮೊದ ಮೊದಲು ಇದು ಕೆಟ್ಟ ದುರ್ವಾಸನೆಯನ್ನು ಬೀರುವುದಿಲ್ಲ. ಆದರೆ ಅದು ನಂತರ ಕೀಟಾಣುಗಳ ಕೊಳೆಯುವಿಕೆಯಿಂದ ದುರ್ವಾಸನೆಗೆ ತಿರುಗುತ್ತದೆ.
ಜಠರ:
ಜಠರದಲ್ಲಿ ಕಾಣಿಸಿಕೊಳ್ಳುವ ಕೆಲವೊಂದು ಗಂಭೀರ ಸ್ಥಿತಿಗಳು ಅಂದರೆ ಗ್ಯಾಸ್ಟ್ರೋ-ಈಸೊಫಜಿಯಲ್ ರಿಫ್ಲಕ್ಸ್ನಂತಹ ಸಮಸ್ಯೆಗಳು ಗ್ಯಾಸ್ಟ್ರಿಕ್ ಅಂಶಗಳಿಂದಾಗಿ ಕೆಟ್ಟ ದುರ್ವಾಸನೆಯನ್ನು ಉಂಟು ಮಾಡುತ್ತವೆ.
ಉಸಿರಿನ ದುರ್ವಾಸನೆಯನ್ನು ತಾತ್ಕಾಲಿಕವಾಗಿ ನಿವಾರಿಸಲು ಈ ಕೆಳಕಂಡ ಸ್ವಾಭಾವಿಕ ಪರಿಹಾರಗಳನ್ನು ಬಳಸಿ:
ಏಲಕ್ಕಿ
ಮೋತಿ ಸೌಂಪ್
ಜೀರಿಗೆ
ಲವಂಗ
ಚಕ್ಕೆ
ಪಾರ್ಲೆ
ಹಾಲು:
ಒಂದು ವೇಳೆ ಮಸಾಲೆ ಪದಾರ್ಥಗಳನ್ನು ತಿಂದಾಗ ನಿಮ್ಮ ಬಾಯಿಯಿಂದ ಹೊರಬರುವ ಬೆಳ್ಳುಳ್ಳಿಯ ವಾಸನೆಯಂತಹ ದುರ್ವಾಸನೆಯನ್ನು ನಿವಾರಿಸಲು, ಒಂದು ಲೋಟ ಹಾಲನ್ನು ಅಥವಾ ಕೊಬ್ಬಿನಂಶ ಅಧಿಕವಾಗಿರುವ ನೀರಿನಂತಹ ದ್ರವವನ್ನು ಸೇವಿಸಿ. ಬೆಳ್ಳುಳ್ಳಿಯನ್ನು ಸೇವಿಸುವ ಮೊದಲು ಒಂದು ಲೋಟ ಹಾಲು ಅಥವಾ ಕೊಬ್ಬಿನ ಉತ್ಪನ್ನವನ್ನು ಹೊಂದಿರುವ ದ್ರವಾಹಾರವನ್ನು ಸೇವಿಸುವುದರಿಂದ ಬಾಯಿಯಿಂದ ಹೊರಬರುವ ಬೆಳ್ಳುಳ್ಳಿಯ ವಾಸನೆಯನ್ನು ನಿವಾರಿಸಿಕೊಳ್ಳಬಹುದೆಂದು ಒಂದು ಅಧ್ಯಯನ ಸಾಭೀತು ಮಾಡಿದೆ.
ನಿಮ್ಮ ಸಂಗಾತಿಗೆ ಮುತ್ತು ನೀಡುವುದು:
ಉಸಿರಿನ ದುರ್ವಾಸನೆಯನ್ನು ನಿವಾರಿಸಿಕೊಳ್ಳಬೇಕು ಎಂದರೆ ಬಾಯಿಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳಿಗೆ ಬದಲಿಗೆ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಬಾಯಿಗೆ ಪ್ರವೇಶ ಮಾಡಲು ಅವಕಾಶ ಮಾಡಿಕೊಡ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಸಂಗಾತಿಗೆ ಮುತ್ತು ನೀಡುವುದರಿಂದ ಈ ಪರಿಹಾರವನ್ನು ಜಾರಿಗೆ ತರಬಹುದು ಎಂದು ಡಾ. ಸೀಮಂತಿನಿ ದೇಸಾಯಿ ಎಂ.ಡಿ ಸಲಹೆ ಮಾಡುತ್ತಾರೆ. ನೆದರ್ಲ್ಯಾಂಡ್ನ ಒಂದು ಅಧ್ಯಯನವು 10 ಸೆಕೆಂಡ್ಗಳ ಗಾಢ ಚುಂಬನದಿಂದ 80 ಮಿಲಿಯನ್ ಬ್ಯಾಕ್ಟೀರಿಯಾಗಳು ಬಾಯಿಂದ ಬಾಯಿಗೆ ವರ್ಗಾವಣೆಯಾಗುತ್ತವೆ ಎಂದು ತಿಳಿಸಿ