
ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆರ್ಸಿಬಿ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡಿದೆ. ಈ ಮಧ್ಯೆ ಪಂದ್ಯದ ವೇಳೆ ಪಿಚ್ ಕ್ಯಾಚ್ ಹಿಡಿದು ಕ್ಯಾಚ್ ಹಿಡಿದಂತೆ ಬಿಲ್ಡಪ್ ಕೊಟ್ಟ ರಿಷಬ್ ಪಂತ್ ರ ಉಪಟಳ ನೋಡಿ ತಂಡದ ನಾಯಕ ವಿರಾಟ್ ಕೊಹ್ಲಿ ನಕ್ಕಿರುವ ವಿಡಿಯೋ ಇದೀಗ ವೈರಲ್ ಆಗಿದೆ.
When Virat was quicker than Third Umpire https://t.co/3PMCavUbYw via @ipl
— gujjubhai (@gujjubhai17) April 28, 2019
ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಇಶಾಂತ್ ಬೌಲಿಂಗ್ ನಲ್ಲಿ ಕೊಹ್ಲಿ ಬ್ಯಾಟ್ ಬೀಸಿದ್ದು ಈ ವೇಳೆ ಚೆಂಡು ಬ್ಯಾಟ್ ಗೆ ತಗುಲಿ ಕೀಪರ್ ಕಡೆ ಹೋಯಿತು. ಈ ವೇಳೆ ರಿಷಬ್ ಪಂತ್ ಡೈವ್ ಮಾಡಿ ಕ್ಯಾಚ್ ಹಿಡಿದು ಅಪೀಲ್ ಮಾಡಿದರು. ಆದರೆ ವಿರಾಟ್ ಕೊಹ್ಲಿ ಮಾತ್ರ ಇದು ಪಿಚ್ ಕ್ಯಾಚ್ ಎಂದು ಅಲ್ಲೇ ನಿಂತರು. ಇದರಿಂದ ಅಂಪೈರ್ ಪರೀಕ್ಷಿಸಲು ಮೂರನೇ ಅಂಪೈರ್ ಗೆ ಮನವಿ ಮಾಡಿದರು.
ಅಷ್ಟರಲ್ಲಿ ಬೌಲರ್ ಇಶಾಂತ್ ಕೊಹ್ಲಿ ಬಳಿ ಔಟ್ ಎಂದು ವಾದಿಸಲು ಬಂದರು. ಆಗ ಕೊಹ್ಲಿ ಇಲ್ಲ ಅದು ಪಿಚ್ ಕ್ಯಾಚ್ ಎಂದು ಹೇಳಲು ಮುಂದಾದರೂ. ಆದರೆ ಈ ವೇಳೆ ಇಶಾಂತ್ ಸುಮ್ಮನಾಗಲ್ಲಿಲ್ಲ. ಇನ್ನು ಮೂರನೇ ಅಂಪೈರ್ ವಿಡಿಯೋ ಪರಿಶೀಲಿಸುವ ದೃಶ್ಯ ಮೈದಾನದಲ್ಲಿ ಅಳವಡಿಸಿದ್ದ ಡಿಸ್ಲೈಯಲ್ಲಿ ಮೂಡಿಬಂದಿತು. ಆಗ ಮೊದಲಿಗೆ ಚೆಂಡು ನೆಲಕ್ಕೆ ತಾಗಿ ನಂತರ ರಿಷಬ್ ಕೈಸೇರಿರುವುದು ತಿಳಿದುಬಂದು ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Comments are closed.