ಆರೋಗ್ಯ

ಮೆನಿಕ್ಯೂರ್ ಮತ್ತು ಪೆಡಿಕ್ಯೂರ್‌ ಮಾಡಿಕೊಳ್ಳಲು ಪಾರ್ಲರಿಗೆ ಹೋಗುವ ಮೊದಲು ಮಾಡಬೇಕಾದ ಸುರಕ್ಷಿತ ಸಲಹೆ

Pinterest LinkedIn Tumblr

manicure_pedicure_1

 ಮೆನಿಕ್ಯೂರ್ ಮತ್ತು ಪೆಡಿಕ್ಯೂರ್‌ ಅನ್ನು ಸರಿಯಾಗಿ ಮಾಡದೆ ಇದ್ದ ಪಕ್ಷದಲ್ಲಿ ಅದು ಹಲವಾರು ಸೋಂಕುಗಳಿಗೆ ಮತ್ತು ರೋಗಗಳಿಗೆ ಕಾರಣವಾಗುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?

ಮೆನಿಕ್ಯೂರ್ ಮತ್ತು ಪೆಡಿಕ್ಯೂರ್‌ ಕೇವಲ ನಿಮ್ಮ ಕೈ ಮತ್ತು ಪಾದಗಳಿಗೆ ಸೌಂದರ್ಯವನ್ನಷ್ಟೇ ನೀಡುವುದಿಲ್ಲ. ಅವುಗಳು ನಿಮ್ಮ ಆರೋಗ್ಯದ ಮೇಲೆ ಸಹ ಪ್ರಭಾವ ಬೀರುತ್ತದೆ. ಹಾಗಾಗಿ ನೀವು ಮೆನಿಕ್ಯೂರ್ ಮತ್ತು ಪೆಡಿಕ್ಯೂರ್‌ ಮಾಡಿಕೊಳ್ಳಲು ಪಾರ್ಲರಿಗೆ ಹೋಗುವ ಮೊದಲು ಈ ಕೆಲಕಂಡ ಸುರಕ್ಷಿತ ಸಲಹೆಗಳನ್ನು ತಪ್ಪದೆ ಗಮನಿಸಿ.

ಶುದ್ಧತೆ: ನೀವು ಭೇಟಿ ನೀಡುವ ಸೆಲೂನ್ ಸ್ವಚ್ಛವಾಗಿದೆಯೇ ಮತ್ತು ಅದರಲ್ಲಿ ಆರೋಗ್ಯಕರವಾದ ವಾತಾವರಣವನ್ನು ಕಾಪಾಡಲಾಗಿದೆ ಯೇ ಎಂದು ಗಮನಿಸಿ. ಮೆನಿಕ್ಯೂರ್ ಮಾಡಿಸುವ ಟೇಬಲ್ ಯಾವುದೇ ಕತ್ತಿರಿಸಿದ ಉಗುರುಗಳಿಂದ ಮುಕ್ತವಾಗಿರಬೇಕು ಎಂಬುದನ್ನು ಮರೆಯಬೇಡಿ. ಪೆಡಿಕ್ಯೂರ್ ಕುರ್ಚಿಗಳು ಸಹ ಕತ್ತರಿಸಿದ ಚರ್ಮದ ತುಂಡುಗಳಿಂದ ಮುಕ್ತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸಂಸ್ಕರಣೆ (ಸ್ಟೆರಿಲೈಸೇಶನ್):
ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಮಾಡುವ ಸಾಧನಗಳನ್ನು ಯಾವ ರೀತಿ ಸಂಸ್ಕರಿಸುತ್ತಾರೆ ಎಂದು ಪಾರ್ಲರ್‌ರವರನ್ನು ಕೇಳಲು ಸಂಕೋಚಪಡಬೇಡಿ. ಎಲ್ಲಾ ಸಾಧನಗಳನ್ನು ತೊಳೆಯಬೇಕು, ಸೋಂಕು ಮುಕ್ತಗೊಳಿಸಬೇಕು ಮತ್ತು ಬಳಸುವ ಮೊದಲು ಸಂಸ್ಕರಿಸ ಬೇಕಾಗುತ್ತದೆ. ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಟಬ್‌ಗಳನ್ನು ಸಹ ಬಳಸುವ ಮೊದಲು ಚೆನ್ನಾಗಿ ತೊಳೆದು, ಸೋಂಕು ಮುಕ್ತಗೊಳಿಸ ಬೇಕಾಗುತ್ತದೆ. ಒಂದು ವೇಳೆ ನೀವು ಕೊಳೆಯಾದ ಪಾರ್ಲರ್ ಮತ್ತು ಸರಿಯಾಗಿ ಸಂಸ್ಕರಣೆ ಮಾಡದ ಸಾಧನಗಳನ್ನು ಕಂಡಲ್ಲಿ, ನೀವು ಸೇವೆಯನ್ನು ಪಡೆಯಲು ಅದು ಹೇಳಿ ಮಾಡಿಸಿದ ಸ್ಥಳವಲ್ಲವೆಂದು ಪರಿಗಣಿಸಿ, ಬೇರೆ ಕಡೆಗೆ ಹೋಗಿ.

ಉಗುರಿನ ತಂತ್ರಜ್ಞಾನ (ನೇಲ್ ಟೆಕ್ನಿಷಿಯನ್):
ನಿಮ್ಮ ಉಗುರಿನ ತಂತ್ರಙ್ಞರು ನಿಮ್ಮ ಉಗುರುಗಳನ್ನು ಸ್ವಚ್ಛಗೊಳಿಸಲು ಅಗತ್ಯವಾದ ಅನುಭವವನ್ನು ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆಕೆಯು ತನ್ನ ಸೇವೆಯನ್ನು ಆರಂಭಿಸುವ ಮೊದಲು ತನ್ನ ಕೈಗಳನ್ನು ಮೊದಲು ತೊಳೆದುಕೊಳ್ಳುತ್ತಾರೆಯೇ ಎಂಬುದನ್ನು ಗಮನಿಸಿ. ನಿಮ್ಮ ಉಗುರುಗಳು, ತ್ವಚೆ, ಪಾದಗಳು ಮತ್ತು ತ್ವಚೆಯ ಹೊರಪೊರೆಯು ಮೃದುವಾಗಲು ನಿಮ್ಮ ಕೈ ಮತ್ತು ಪಾದಗಳನ್ನು ಚೆನ್ನಾಗಿ ನೆನೆಸಿ. ನಿಮ್ಮ ಉಗುರಿನ ತಂತ್ರಜ್ಞಾನ ಯು ತಾಳ್ಮೆಯಿಂದ ತನ್ನ ಸೇವೆಯನ್ನು ನೀಡಬೇಕಾಗುತ್ತದೆ.

ಶೇವಿಂಗ್:
ನೀವು ನಿಮ್ಮ ಕಾಲಿನ ಕೆಳ ಭಾಗವನ್ನು ಮತ್ತು ಕೈಗಳನ್ನು ಪೆಡಿಕ್ಯೂರ್ ಮತ್ತು ಮೆನಿಕ್ಯೂರ್ ಮಾಡಿಕೊಳ್ಳುವ ಮೊದಲು ಶೇವಿಂಗ್ ಮಾಡಿಕೊಳ್ಳಬಾರದು. ಒಂದು ವೇಳೆ ನೀವು ಶೇವಿಂಗ್ ಮಾಡಿಕೊಳ್ಳುವಾಗ ತ್ವಚೆಯನ್ನು ಕತ್ತರಿಸಿಕೊಂಡಲ್ಲಿ, ಪೆಡಿಕ್ಯೂರ್ ಮತ್ತು ಮೆನಿಕ್ಯೂರ್ ಮಾಡಿಸಿಕೊಳ್ಳುವಾಗ ಸುಲಭವಾಗಿ ಸೋಂಕಿಗೆ ತುತ್ತಾಗುತ್ತೀರಿ.

ಹೊರ ತ್ವಚೆಯನ್ನು ತಳ್ಳುವುದು:
ನಿಮ್ಮ ಉಗುರಿನ ತಙ್ಞೆಗೆ ಉಗುರಿನ ಹೊರ ತ್ವಚೆಯನ್ನು ಬಲವಾಗಿ ಒಳಕ್ಕೆ ತಳ್ಳದಂತೆ ತಿಳಿಸಿ. ಉಗುರುಗಳನ್ನು ಚೆನ್ನಾಗಿ ನೆನೆಸಿದ ಮೇಲೆ ಅವುಗಳನ್ನು ಮೃದುವಾಗಿ ಒಳಕ್ಕೆ ತಳ್ಳಬಹುದು.

ನಿಮ್ಮ ಸ್ವಂತದಾದ ಸಾಧನಗಳನ್ನು ಖರೀದಿಸಿ:
ಒಂದು ವೇಳೆ ನೀವು ನಿಯಮಿತವಾಗಿ ಮೆನಿಕ್ಯೂರ್ ಮತ್ತು ಪೆಡಿಕ್ಯೂರ್‌ಗಳನ್ನು ಮಾಡಿಕೊಳ್ಳುವವರಾಗಿದ್ದಲ್ಲಿ, ನಿಮಗಾಗಿ ಒಂದು ಉಪಕರಣಗಳ ಸೆಟ್ ಅನ್ನು ಖರೀದಿಸಿ ಇಟ್ಟುಕೊಳ್ಳಿ. ಇದನ್ನು ನೀವು ಪ್ರತಿಬಾರಿ ಪಾರ್ಲರಿಗೆ ಹೋಗುವಾಗ ತೆಗೆದುಕೊಂಡು ಹೋಗಿ.

ಟವೆಲ್‌ಗಳನ್ನು ಮತ್ತು ಸ್ಪಾಂಜ್‌ಗಳನ್ನು ಸ್ವಚ್ಛಗೊಳಿಸಿ:
ಪ್ರತಿಯೊಬ್ಬ ಗಿರಾಕಿಗೂ ಸ್ವಚ್ಛವಾದ ಮತ್ತು ತಾಜಾ ಆದ ಟವೆಲ್‌ಗಳನ್ನು ಬಳಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಉತ್ಪನ್ನಗಳ ಬಳಕೆಯ ತಂತ್ರ:
ಲೋಷನ್‌ಗಳು, ಕ್ರೀಮ್‌ಗಳು, ಎಣ್ಣೆಗಳು, ಮಾಸ್ಕ್ ಮತ್ತು ಸ್ಕ್ರಬ್‌ಗಳನ್ನು ಅವುಗಳು ಕಲುಷಿತಗೊಳ್ಳದಂತೆ ಬಳಸಬೇಕಾಗುತ್ತದೆ. ಕೊಳೆಯಾದ ಕೈಗಳನ್ನು ಬಾಟಲಿ ಅಥವಾ ಕ್ರೀಮ್ ಕಂಟೇನರ್‌ಗಳೊಳಗೆ ಹಾಕಬಾರದು. ಅದರ ಬದಲಿಗೆ ಒಂದು ಸ್ವಚ್ಛವಾದ ಸ್ಪ್ಯಾಚುಲಾವನ್ನು ಉತ್ಪನ್ನಗಳನ್ನು ತೆಗೆಯಲು ಬಳಸಬಹುದು. ಅಪ್ಲಿಕೇಟರ್ ಬಾಟಲಿ ಅಥವಾ ಡ್ರಾಪರ್ ಅನ್ನು ಸಹ ಇವುಗಳಿಗೆ ಬಳಸಬಹುದು.

ಸಂಗ್ರಹ:
ಒಂದು ಸ್ವಚ್ಛವಾದ ಡ್ರಾಯೆರಿನಲ್ಲಿ ನಿಮ್ಮ ಉಪಕರಣಗಳನ್ನು ಸ್ವಚ್ಛ ಮತ್ತು ಸಂಸ್ಕರಣೆಗೊಳಿಸಿ ಇರಿಸಿ. ಇವುಗಳನ್ನು ಯಾವುದೇ ಕಾರಣ ಕ್ಕೂ ಕೊಳೆಯಾದ ಅಥವಾ ಬಳಸಲಾದ ಸಾಧನಗಳ ಜೊತೆಗೆ ಬೆರೆಸಬೇಡಿ. ಈ ಸುರಕ್ಷಿತವಾದ ಮತ್ತು ಸ್ವಚ್ಛತೆಯ ಸಲಹೆಗಳನ್ನು ಪಾಲಿಸುವ ಮೂಲಕ ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಮಾಡಿಕೊಳ್ಳುವಾಗ ಜರಗಬಹುದಾದ ಅಚಾತುರ್ಯಗಳನ್ನು ತಡೆಯಿರಿ ಮತ್ತು ನಿಮ್ಮ ಸೌಂದರ್ಯವನ್ನು ಇನ್ನಷ್ಟು ಆರೋಗ್ಯ ಪೂರ್ಣವಾಗಿ ಹೆಚ್ಚಿಸಿಕೊಳ್ಳಿ.

Comments are closed.