ಆರೋಗ್ಯ

ಆಯುರ್ವೇದದ ಪಂಚಕರ್ಮ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ

Pinterest LinkedIn Tumblr

pancha_karmma_1

 ಪುರಾಣ ವೇದಗಳಲ್ಲಿ ಅರೋಗ್ಯ ಚಿಕಿತ್ಸೆಯ ಕುರಿತಾದ ಒಂದು ಅಧ್ಯಾಯನ ಭಾಗವೇ ಆಯುರ್ವೇದ . ಇದು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದ ಚಿಕಿತ್ಸಾ ಪದ್ದತಿಯಾಗಿದೆ. ದೇಹ, ಮತ್ತು ಮನಸ್ಸಿನ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಮತ್ತು ಕಾಯಿಲೆಗಳಿಂದ ದೂರವಿಡಲು ಆಯುರ್ವೇದ ಚಿಕಿತ್ಸೆ ನೆರವಾಗುತ್ತದೆ.ಆಯುರ್ವೇದದ ಪ್ರಕಾರ ಮನುಷ್ಯನ ಮನಸ್ಸೇ ಅನಾರೋಗ್ಯದ ಕೇಂದ್ರ ಬಿಂದುವಾಗಿದ್ದು, ಮನಸ್ಸಿನ ಅರೋಗ್ಯ ಎಷ್ಟು ಹದಗೆಡುವುದೋ ಅಷ್ಟೇ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸು ಉತ್ತಮವಾದಲ್ಲಿ ದೇಹವು ಉತ್ತಮವಾಗಿರುತ್ತೆ.

ಯೋಗಕ್ಷೇಮದ ನಿರ್ವಹಣೆಯ ಚೌಕಟ್ಟಿನ ಒಳಗೆ ಸ್ವಯಂ ಕಲಿಕೆ ಮತ್ತು ಹೊಂದಾಣಿಕೆಯ ದೃಷ್ಟಿಕೋನ ಮತ್ತು ಸಮನ್ವಯತೆ ಕೇಂದ್ರೀಕೃತವಾಗಿರುತ್ತದೆ. ಅದರಿಂದಲೇ ಆಧುನಿಕ ಜಗತ್ತಿನಲ್ಲಿ ಆಯುರ್ವೇದವನ್ನು ವಿಜ್ಞಾನವಾಗಿ,ಚಿಕಿತ್ಸಾ ವಿಭಾಗವಾಗಿ ಪರಿಗಣಿಸಲಾಗಿದೆ.

pancha_karmma_2

ಆಯುರ್ವೇದ ತನ್ನ ಗುಣಮಟ್ಟವನ್ನು ಹಿಂದಿನ ಕಾಲದಿಂದಲೂ ವ್ಯವಸ್ಥಿತವಾಗಿ ನಿರ್ವಹಿಸುತ್ತಲೇ ಬಂದಿದೆ . ಯೋಗಕ್ಷೇಮವನ್ನು ದೈಹಿಕ, ಮಾನಸಿಕ ಮತ್ತು ಪಾರಮಾರ್ಥಿಕ ಮಟ್ಟದಲ್ಲಿ ಕಾಯ್ದುಕೊಳ್ಳುವದೇ . ಆಯುರ್ವೇದದ ಪ್ರಮುಖ ಉದ್ದೇಶ. ಯೋಗಕ್ಷೇಮವು ಎಲ್ಲಾ ಶಕ್ತಿಗಳ ಒಪ್ಪಂದದೊಂದಿಗೆ ದೇಹವನ್ನು ಅನುಸರಿಸಿ ದೈಹಿಕ, ಮಾನಸಿಕ ಮತ್ತು ಆತ್ಮದ ಮಟ್ಟದಲ್ಲಿ ಚಿಕಿತ್ಸೆ ನಿರ್ವಹಿಸುವುದಾಗಿದೆ. ಪಾಶ್ಚಿಮಾತ್ಯ ಪದ್ದತಿಯ ಪ್ರಕಾರ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧದ ಮೂಲಕ ರೋಗವನ್ನು ಚಿಕಿತ್ಸಿಸಲಾಗುತ್ತದೆ ಆದರೆ ಆಯುರ್ವೇದ ವಿಚಾರದಲ್ಲಿ ಹಾಗಲ್ಲ.

ಇಲ್ಲಿ ಚಿಕಿತ್ಸೆಯ ಜೊತೆ ಜೊತೆಗೆ ಯೋಗಕ್ಷೇಮವನ್ನು ನೋಡಿಕೊಳ್ಳುವ ಹಲವು ಮಾರ್ಗಸೂಚಿಗಳನ್ನು ಸಂಯೋಜಿಸುತ್ತದೆ. ಆದ್ದರಿಂದಲೇ ಆಯುರ್ವೇದದ ವ್ಯಾಪ್ತಿಯು ವಿಸ್ತಾರವಾಗಿದ್ದು ಆಹಾರ, ಜೀವನ ಶೈಲಿ, ಜೀವನದ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ಅನಾರೋಗ್ಯಕ್ಕೆ ಪೂರಕವಾದ ಸಮಸ್ಯೆಗಳಿಗೆ ಪರಹಾರ ಕಂಡುಕೊಳ್ಳುವುದು ಮತ್ತು ಅದಕ್ಕೆ ಸೂಕ್ತವಾದ ಪ್ರಕೃತಿ ದತ್ತ ಔಷಧಿಗಳ ಮೂಲಕ ಚಿಕಿತ್ಸೆ ನೀಡುವ ಪರಿಕಲ್ಪನೆಯನ್ನು ತಲತಲಾಂತರದಿಂದ ತನ್ನ ಅಸ್ತಿತ್ವದಲ್ಲಿ ಸ್ವತಂತ್ರ್ಯವಾಗಿ ನಿಭಾಯಿಸುತ್ತಾ ಬಂದಿದೆ.

ಆಯುರ್ವೇದದಲ್ಲಿ ಒಂದು ವ್ಯಕ್ತಿ ಮನುಷ್ಯನ ಮನಸ್ಸನ್ನು ಪ್ರಕೃತಿಯ ಅಂಶವೆಂದು ಮತ್ತು ದೇಹವನ್ನು ಇಡೀ ಬ್ರಹ್ಮಾಂಡವೆಂದು ಪರಿಗಣಿಸಲಾಗುತ್ತದೆ. ಮನಸ್ಸಿನ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವ ಮೂಲಕ ದೇಹದ ಆರೋಗ್ಯವನ್ನು ಕಾಪಾಡಲುಪ್ರೇರೇಪಿಸುತ್ತದೆ. ಆಯುರ್ವೇದ ತನ್ನ ಚಿಕಿತ್ಸಾ ವಿಧಾನದಲ್ಲಿ ಮನಸ್ಸು ಮತ್ತು ಆತ್ಮ ಎಂಬ 2 ವಿಭಾಗವಾಗಿ ವರ್ಗೀಕರಿಸಿ ಸಮನಾಗಿ ಚಿಕಿತ್ಸೆ ನೀಡುತ್ತದೆ.
ಇದು ಅಂಕಣ ಸಂಚಿಕೆಯಾಗಿದ್ದು ಇದರಲ್ಲಿ ಆಯುರ್ವೇದ ಮತ್ತು ಅದಕ್ಕೆ ಸಂಬಂಧಿತ ವಿಷಯಗಳನ್ನು ಹಲವು ಭಾಗಗಳಲ್ಲಿ ತಿಳಿಸುವ ಪ್ರಯತ್ನ ಮಾಡಲಾಗಿದೆ.

1..ಪಂಚಕರ್ಮ ಚಿಕಿತ್ಸಾ ಪದ್ದತಿಗಳು: ಐದು ವಿಧದ ಚಿಕಿತ್ಸೆಯ ಮೂಲಕ ಆರೋಗ್ಯವನ್ನು ಕಾಪಾಡುವುದು ಮತ್ತು ದೇಹವನ್ನು ರಕ್ಷಣೆ ಮಾಡುವುದೇ ಪಂಚಕರ್ಮ ಚಿಕಿತ್ಸೆಯ ಮೂಲ ಉದ್ದೇಶ. ಇದು ಆಯುರ್ವೇದ ಚಿಕಿತ್ಸಾ ವಿಧಾನದಲ್ಲಿ ಮೂಲ ಮತ್ತು ಪ್ರಮುಖ ಅಂಶವಾಗಿದೆ.

2. ಸ್ವೇಧನಂ ಚಿಕಿತ್ಸ: ಆಯುರ್ವೇದದಲ್ಲಿ ಇದು ಒಂದು ದೊಡ್ಡ ಚಿಕಿತ್ಸೆಯಾಗಿದೆ. ಔಷಧೀಕೃತ ಹಬೆ (steam)ಯ ಮೂಲಕ ಚಿಕಿತ್ಸೆಯನ್ನು ನಿರ್ವಹಿಸಲಾಗುತ್ತದೆ ಅಮೂಲ್ಯ ಗಿಡಮೂಲಿಕೆಗಳ ಎಲೆಗಳು ಮತ್ತು ಗಿಡಮೂಲಿಕೆಗಳನ್ನು ನೀರಿನಲ್ಲಿ ಬೇಯಿಸಿ ಆ ಮೂಲಕ ಉತ್ಪತಿಯಾಗುವ ಔಷಧೀಕೃತ ಆವಿಯನ್ನು ಸಣ್ಣ ಕೊಠಡಿ ಆಕಾರದ ಗೂಡಿನಲ್ಲಿ ಬಿಡಲಾಗುತ್ತದೆ.

3. ಅಭಯಾಂಗ: ಅಭಯಾಂಗ ಎಂದರೆ ಎಣ್ಣೆಯ ಮಜ್ಜನ , ಅಥವಾ ಗಿಡಮೂಲಿಕೆಯ ಎಣ್ಣೆಯಿಂದ ಇಡೀ ದೇಹವನ್ನು ಮಸಾಜ್ ಮಾಡುವ ಪ್ರಕ್ರಿಯೆಯಾಗಿದೆ. ದೇಹದ ಚೈತನ್ಯವನ್ನು ಹೆಚ್ಚಿಸುತ್ತದೆ. ಅದರ ಜೊತೆಗೆ ರಕ್ತ ಸಂಚಾರವನ್ನು ಸುಧಾರಿಸುವುದರ ಜೊತೆಗೆ ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ.

4.ವಾಸ್ತಿ ಕರ್ಮ: ಪಂಚಕರ್ಮ ಚಿಕಿತ್ಸೆಗಳಲ್ಲಿ ವಾಸ್ತಿ ಕರ್ಮ ಕೂಡ ಒಂದು. ಮುಖ್ಯವಾಗಿ ವಾತ ದೋಷವನ್ನು ನಿವಾರಿಸುವಲ್ಲಿ ಇದು ಸಹಕಾರಿಯಾಗಿದೆ. ಗಿಡ ಮೂಲಿಕೆಗಳು, ತುಪ್ಪ, ಎಣ್ಣೆ ಇತ್ಯಾದಿಗಳನ್ನು ಬಳಸಿ ಕುತಿಗೆಯ ಭಾಗದಿಂದ ತೋಳುಗಳ ಮೇಲೆ ಮಸಾಜ್ ಮಾಡಲಾಗುತ್ತದೆ . ಈ ಚಿಕಿತ್ಸಾ ವಿಧಾನದಿಂದ ಸೈನಸ್,ಮೈಗ್ರೇನ್, ಶೀತ ಮತ್ತು ನೆಗಡಿಯನ್ನು ತಡೆಯಬಹದು

5.ವಿರೇಚನ ಕರ್ಮ: ಆಯುರ್ವೇದ ಚಿಕಿತ್ಸೆಯ ಮತ್ತೊಂದು ಭಾಗವಾಗಿದೆ. ಇದು ದೇಹದ ಪಿತ್ತಕೋಶದಲ್ಲಿ ಉದ್ಭವಿಸುವ ಸಮಸ್ಯೆಯನ್ನು ನಿವಾರಿಸುತ್ತದೆ. ಡಯಾಬಿಟಿಸ್, ಅಸ್ಥಮಾ, ಚರ್ಮರೋಗ, ಅಜೀರ್ಣ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯಾಗಿದೆ.

6. ನಾಸ್ಯ: ನಾಸ್ಯಕರ್ಮ ಎಂದರೆ ಅಂಗಗಳ ಚಟುವಟಿಕೆ ಹೆಚ್ಚಿಸಲು ಮತ್ತು ತಲೆಯಾ ಭಾಗದಲ್ಲಿ ಉಂಟಾಗುವ ವಿವಿಧ (urdhwanga) ರೋಗಗಳನ್ನು ತಡೆಯುವುದಾಗಿದೆ. ನಾಸ್ಯ ಕರ್ಮದ ಮೂಲಕ ಕಣ್ಣು , ಕಿವಿ, ಮತ್ತು ಮೂಗಿನ ಸಮಸ್ಯೆಯನ್ನು ನಿವಾರಿಸಬಹುದು.

7.ತೈಲ ಧಾರಾ: ಪಾರ್ಶ್ವ ವಾಯು ಸಮಸ್ಯೆ ,ಲೈಂಗಿಕ ದೌರ್ಬಲ್ಯ, ದೇಹದ ನೋವುಗಳಿಗೆ ತೈಲ ಧಾರಾ ಬಲಸಲಾಗುತ್ತದೆ. ತೈಲ ಧಾರಾ ದಿಂದ ದೇಹದ ಚರ್ಮ ಕಾಂತಿ ಯುಕ್ತವಾಗುವುದಷ್ಟೇ ಅಲ್ಲದೆ ಆಯಾಸ ಮತ್ತು ಅಲಾಸ್ಯವನ್ನು ತಡೆಯಬಹುದು

8.ಮರ್ಮ ಚಿಕಿತ್ಸಾ: ಸಂಧಿವಾತ, ಜಂಟಿ ಮತ್ತು ಸ್ನಾಯು ನೋವು, ಹಲವು ಬೇನೆಗಳಿಗೆ ಈ ಚಿಕಿತ್ಸೆ ಬಹಳ ಪರಿಣಾಮಕಾರಿಯಾಗಿದೆ , ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ಮುಟ್ಟಿನ, ಬಂಜೆತನ ಮತ್ತು ನರ ದೌರ್ಬಲ್ಯ ನಂತಹ ಲೈಂಗಿಕ ಕಾಯಿಲೆಗಳಿಗೆ ಉಪಶಮನವಾಗಿದೆ.

9.ಔಷಧ ಎಳೆಗಳ ಒಳಗೊಂಡ ಚಿಕಿತ್ಸೆ: ಔಷಧೀಯ ಎಲೆಗಳನ್ನು ಬೇವಿನ ಅಥವಾ ಹರಳೆಣ್ಣೆ ಜೊತೆಗೆ ಹುರಿದು ಔಷಧೀಕೃತ ತೈಲ ಮಾಡಲಾಗುತ್ತದೆ. ಇದರಲ್ಲಿ ನಿಂಬೆ ತುಣುಕುಗಳನ್ನು ಮತ್ತು ತೆಂಗನ್ನು ಸೇರಿಸಲಾಗುತ್ತದೆ. ನಂತರ ಶುಬ್ರ ಬಟ್ಟೆಯಲ್ಲಿಟ್ಟು ಗೊಂಚಲಾಕಾರದಲ್ಲಿ ಕಟ್ಟಿ ಔಷಧೀಕೃತ ತೈಲ ಮುಳುಗಿಸಿ ದೇಹದ ಮೇಲೆ ಮಸಾಜ್ ಮಾಡಲಾಗುತ್ತದೆ. ತದ ನಂತರ ಮಸ್ಲಿನ್ ಬಟ್ಟೆಯಲ್ಲಿ ಔಷಧೀಕೃತ ಪುಡಿಯನ್ನು ಹಾಕಿ ಸಣ್ಣ ಗೊಂಚಲಿನಾಕಾರದಲ್ಲಿ ಕಟ್ಟಿ ದೇಹದ ಮೇಲೆ ಮಸಾಜ್ ಮಾಡಲಾಗುತ್ತದೆ. ಸ್ನಾಯು ನೋವು, ಸಂಧಿ ಊತ ಮೈ ಕೈ ನೋವುಗಳನ್ನು ಇದು ಶಮನಗೊಳಿಸುತ್ತದೆ.

10.ಧಾರಾ:ಕೇರಳೀಯ ಆಯುರ್ವೇದ ಚಿಕಿತ್ಸಾ ಪದ್ದತಿಗಳಲ್ಲಿ ವಿಭಿನ್ನ ಮತ್ತು ವಿಶೇಷ ವಾದ ಚಿಕಿತ್ಸೆಯಾಗಿದೆ. ಔಷಧಿ ಎಳೆಗಳ ಬೆಚ್ಚಗಿನ ಎಣ್ಣೆ / ಗಿಡಮೂಲಿಕೆ ಕಷಾಯ / ಔಷಧೀಯ ಹಾಲು / ಮಜ್ಜಿಗೆ ಯನ್ನು ನಿರಂತರವಾದ ಧಾರೆಯಾಗಿ 45 ರಿಂದ 90 ನಿಮಿಷಗಳ ಕಾಲ ಹಣೆಯ ಮೇಲೆ ಸುರಿಯಲಾಗುತ್ತದೆ. ಅಗತ್ಯ ಬದಲಾವಣೆಗಳೊಂದಿಗೆ, ದೋಷ ಸ್ಥಿತಿಯನ್ನು ಪರಿಶೀಲಿಸಿ ಅದಕ್ಕೆ ಸೂಕ್ತ ಪ್ರಕಾರ ದ್ರವ ಬದಲಾಯಿಸುವ ಮೂಲಕ ಧಾರಾ ಚಿಕಿತ್ಸೆಯನ್ನು ನೆರವೇರಿಸಲಾಗುತ್ತದೆ.

11.ವಾಮನ ಚಿಕಿತ್ಸಾ: ಪಂಚ ಕರ್ಮ ಚಿಕಿತ್ಸಾ ವಿಧಾನದಲ್ಲಿ ಪ್ರಮುಖವಾದ ಚಿಕಿತ್ಸೆಯಾಗಿದೆ.ಅತಿಸಾರ ಬೇದಿ, ಜಠರ ಸಮಸ್ಯೆಗಳನ್ನು ಇದು ಬಗೆಹರಿಸುತ್ತದೆ. ವಾಮನ ಚಿಕಿತ್ಸೆಯನ್ನು ಸೂಕ್ತ ವಿಧಾನದಲ್ಲಿ ತಜ್ಞರ ಉಪಸ್ತಿತಿಯಲ್ಲಿ ಮಾತ್ರ ನಡೆಸಲು ಸಾಧ್ಯ. ವಾಮನ ಚಿಕಿತ್ಸೆಯಿಂದ ಬಹಳಷ್ಟು ಲಾಭ ಪಡೆಯಬಹುದು.

12.ಸ್ನೇಹನಂ ಚಿಕಿತ್ಸಾ: ” ಸ್ನೇಹಾನಂ ಸ್ನೇಹ ವಿಶ್ಯಾಂದ ಮಾರ್ದವ ಕಳೆದ ಕಾರಣಂ” ಎಂದು ಸ್ನೇಹಾನಂ ಚಿಕಿತ್ಸೆಯನ್ನು ಸಂಸ್ಕೃತದಲ್ಲಿ ವ್ಯಾಖ್ಯಾನಿಸಲಾಗಿದೆ . ಔಷಧ ಮತ್ತು ಚಿಕಿತ್ಸೆಯ ಮೂಲಕ ದೇಹದ ಎಲ್ಲಾ ಭಾಗವನ್ನು ನಯಗೊಳಿಸುವುದು ಎಂದರ್ಥ. ದೇಹದಲ್ಲಿನ ಟಾಕ್ಸಿನ್ ಅನ್ನು ಹೊರಹಾಕಿ ದೈಹಿಕ ಪ್ರಕ್ರಿಯೆಯನ್ನು ಹೆಚ್ಚಿಸುವುದೇ ಇದರ ಮೂಲ ಉದ್ದೇಶ . ಇದು ಸ್ವೇದನಾ ಚಿಕಿತ್ಸೆಯ ಒಂದು ಪ್ರಕಾರ ವಾಗಿದೆ.

13. ಬಸ್ತಿ ಚಿಕಿತ್ಸಾ: ಬಸ್ತಿ ಮೂಲತಃ ಆಯುರ್ವೇದ ಪದವಾಗಿದೆ . ಸೊಂಟದ ಕೆಳಗಿನ ಭಾಗವಾದ ಮೂತ್ರ ಕೋಶ ಅಥವಾ ಮೂತ್ರ ಸ್ವೀಕರಿಸುವ ಅಂಗಕ್ಕೆ ಬಸ್ತಿ ಎಂದು ಕರೆಯಲಾಗುತ್ತದೆ . ಆಯುರ್ವೇದ ಚಿಕಿತ್ಸಾ ವಿಧಾನದಲ್ಲಿ ಅತ್ಯಂತ ಶ್ರೇಷ್ಠ ಚಿಕಿತ್ಸಾ ಭಾಗವೆಂದು ಇದನ್ನು ಪರಿಗಣಿಸಲಾಗಿದೆ. ದೀರ್ಘಕಾಲದ ನರ ದೌರ್ಬಲ್ಯ ಸಮಸ್ಯೆಗಳು, ಬೆನ್ನಿನ ನೋವಿಗೆ ಇದು ಪರಿಣಾಮಕಾರಿಯಾದ ಚಿಕಿತ್ಸೆ ಯಾಗಿದೆ

14. ರಕ್ತ ಮೋಕ್ಷಾ ಚಿಕಿತ್ಸಾ: ರಕ್ತದ ಶುದ್ಧೀಕರಣಕ್ಕೆ ಪ್ರಯೋಗಿಸಲಾಗುವ ಸಾಂಪ್ರದಾಯಿಕ ಆಯುರ್ವೇದ ವಿಧಾನ. ದೇಹಕ್ಕೆ ಸಮಸ್ಯೆ ಒಡ್ಡುವಂತಹ ಟಾಕ್ಸಿನ್ ಗಳು ಕರಳಿನ ಭಾದಲ್ಲಿ ಮತ್ತು ರಕ್ತ ಕಣಗಳಲ್ಲಿ ಹೇರಳವಾಗಿರುತ್ತದೆ . ಇದು ವಿಷಯುಕ್ತ ರಕ್ತ ಕಣಗಳನ್ನು ದೇಹದಿಂದ ಹೊರಹಾಕಿ ಗಿಡಮೂಲಿಕೆಯ ಕಷಾಯದ ಸೇವನೆಯ ಮೂಲಕ ರಕ್ತ ಶುದ್ಧೀರಿಸಲಾಗುತ್ತದೆ. ದೇಹದಲ್ಲಿ ರಕ್ತ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟುವುದೆ ಇದರ ಮೂಲ ಉದ್ದೇಶ.

Comments are closed.