ಉಪ್ಪಿಗೂ ನಿಮ್ಮ ಹೃದಯದ ಆರೋಗ್ಯಕ್ಕೂ ಸಂಬಂಧವಿದೆ. ಹಾಗೆ ಕಿಡ್ನಿ ಜೊತೆಗೂ! ಉಪ್ಪನ್ನು ಕಡಿಮೆ ತಿಂದಷ್ಟು ನಿಮ್ಮ ಹೃದಯ ಮತ್ತು ಕಿಡ್ನಿ ಎರಡೂ ಆರೋಗ್ಯಯುತವಾಗಿ ಕಾರ್ಯನಿರ್ವಹಿಸುತ್ತವೆ. ನೆದರ್ಲೆಂಡ್ ವಿವಿಯೊಂದರ ಸಂಶೋಧನೆಯಲ್ಲಿ ಇದು ಸಾಬೀತಾಗಿದ್ದು, ಸೋಡಿಯಂನ ಹಾನಿಯ ಬಗ್ಗೆ ಅದು ವಿಸ್ತೃತವಾಗಿ ಅಧ್ಯಯನಿಸಿದೆ. ಹೃದ್ರೋಗ ಮತ್ತು ಕಿಡ್ನಿ ವೈಫಲ್ಯಕ್ಕೆ ತುತ್ತಾದ ರೋಗಿಗಳ ಆಹಾರಕ್ರಮ ವಿಚಾರಿಸಿದಾಗ, ‘ಅಧಿಕ ಉಪ್ಪು ಸೇವನೆ’ಯ ಉತ್ತರವನ್ನು ಹಲವರು ನೀಡಿದ್ದರು! ಉಪ್ಪು ತಿಂದಷ್ಟು ಬುದ್ಧಿವಂತರಾಗುತ್ತಾರೆಂಬ ತಪ್ಪುಕಲ್ಪನೆಯನ್ನೂ ಇದು ಶುದ್ಧ ಸುಳ್ಳೆಂದು ಹೇಳಿದೆ. ಇನ್ನಾದ್ರೂ ಗೊತ್ತಾಯ್ತಲ್ಲ, ಎಷ್ಟು ಉಪ್ಪು ತಿನ್ನಬೇಕೂಂತ!
ಆರೋಗ್ಯ
Comments are closed.