ಆರೋಗ್ಯ

ಪೂರ್ವಿಕರ ಮನೆ ಮೆಡಿಸಿನ್ ಒಮ್ಮೆ ಟ್ರೈ ಮಾಡಿ- ಕಲೆ ಮುಕ್ತ ತ್ವಚೆ ಪಡೆಯುವುದಂತೂ ಗ್ಯಾರಂಟಿ.

Pinterest LinkedIn Tumblr

mark_removal_skin

ಪ್ರತಿಯೊಬ್ಬ ಹೆಣ್ಣುಮಕ್ಕಳು ಸುಂದರವಾದ, ಕಲೆ ಮುಕ್ತ ತ್ವಚೆ ನಮ್ಮದಾಗಬೇಕೆಂಬುದು ಬಯಸುತ್ತಾರೆ. ಆದರೆ ಇಂದಿನ ಬ್ಯೂಸಿ ಶೆಡ್ಯೂಲ್ ನಿಂದಾಗಿ, ಪರಿಸರ ಮಾಲಿನ್ಯದಿಂದಾಗಿ, ಸೂರ್ಯ ಸೂಸುವ ವಿಕಿರಣಗಳಿಂದಾಗಿ ಆರೋಗ್ಯಕರ ತ್ವಚೆಯನ್ನು ಹೊಂದುವುದು ಕಷ್ಟವಾಗಿದೆ. ಅಷ್ಟೇ ಅಲ್ಲ, ಮೊಡವೆಗಳು, ಟ್ಯಾನಿಂಗ್, ಬ್ಲಾಕ್ ಹೆಡ್ಸ್ ಇತರೆ ತೊಂದರೆಗಳು ಇನ್ನಿಲ್ಲದಂತೆ ಕಾಡಲು ಶುರುವಾಗುತ್ತವೆ. ಇದನ್ನೆಲ್ಲಾ ಗಮನಿಸಿದ ಸ್ಕಿನ್ ಕೇರ್ ಇಂಡಸ್ಟ್ರಿಗಳು ಎಂತೆಂತಹ ಕ್ರೀಮ್ ಗಳನ್ನು, ಫೇಸ್ ವಾಶ್ ಗಳನ್ನು ಮಾರುಕಟ್ಟೆಗೆ ಬಿಟ್ಟಿಲ್ಲ, ಆದರೆ ಇದಾವುದರಿಂದಲೂ ಅಂತಹ ಪರಿಣಾಮ ಕಂಡುಕೊಳ್ಳಲು ಸಾಧ್ಯವಾಗಿಲ್ಲ ನಮ್ಮ ಮಹಿಳೆಯರಿಗೆ.

ಆದರೆ ಬಿಡುವಿನ ವೇಳೆಯಲ್ಲಿ, ನಮ್ಮ ಮನೆಯಲ್ಲೇ ಕುಳಿತು, ಮನೆಯಲ್ಲೇ ಸಿಗುವ ವಸ್ತುಗಳಿಂದ ಕೆಲವು ಫೇಸ್ ಪ್ಯಾಕ್ ಗಳನ್ನು ತಯಾರಿಸಿ ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗಿ ಹೊಳೆಯುವುದಲ್ಲದೆ, ಆರೋಗ್ಯಕರವಾಗಿರುತ್ತದೆ. ಇದು ಹಿಂದಿನಿಂದಲೂ ನಮ್ಮ ಪೂರ್ವಿಕರು ಮಾಡಿಕೊಂಡು ಬಂದಿರುವ ಮನೆ ಮೆಡಿಸಿನ್. ಒಮ್ಮೆ ನೀವೂ ಟ್ರೈ ಮಾಡಿದರೆ ಕಲೆ ಮುಕ್ತ ತ್ವಚೆ ಪಡೆಯುವುದಂತೂ ಗ್ಯಾರಂಟಿ.

ಬೇಕಾಗುವ ಸಾಮಗ್ರಿಗಳು : ಸ್ವಲ್ಪ ಬೇವಿನ ಎಲೆ ಅಥವಾ ಬೇವಿನ ಪೌಡರ್, ಒಂದು ಟೇಬಲ್ ಸ್ಪೂನ್ ಕಡಲೆ ಹಿಟ್ಟು, ಒಂದು ಟೀ ಸ್ಪೂನ್ ಮೊಸರು

ಫೇಸ್ ಪ್ಯಾಕ್ ವಿಧಾನ:
ಒಂದು ಬೌಲ್ ನಲ್ಲಿ ಮೊಸರು, ಕಡಲೆಹಿಟ್ಟು ಹಾಕಿ ಮಿಶ್ರಣ ಮಾಡಿ ಪೇಸ್ಟ್ ರೀತಿ ಮಾಡಿಟ್ಟುಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡ ಬೇವಿನ ಎಲೆ ಅಥವಾ ಬೇವಿನ ಪೌಡರ್ ಅನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ಫೇಸ್ ಪ್ಯಾಕ್ ರೆಡಿಯಾಗುತ್ತದೆ. ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಒಣಗಿದ ಮೇಲೆ ತಣ್ಣೀರಿನಲ್ಲಿ ಮುಖ ತೊಳೆಯಿರಿ.

ಫಲಿತಾಂಶ : ಇದರಲ್ಲಿರುವ ಮೊಸರಿನ ಅಂಶ ತ್ವಚೆಯನ್ನು ಮೃದುವಾಗಿಸುತ್ತದೆ. ಜೊತೆಗೆ ಬೇವಿನ ಎಲೆ ಹಾಗೂ ಕಡಲೆಹಿಟ್ಟು ಉಪಯೋಗಿಸುವುದರಿಂದ ತ್ವಚೆಯ ಒಳಗೆ ಅಡಗಿರುವ ಕೊಳೆ ಸಂಪೂರ್ಣವಾಗಿ ಹೋಗಿ, ಮುಖದ ಮೇಲೆ ನಾನಾ ಕಾರಣಗಳಿಂದ ಉಳಿದುಕೊಂಡಿರುವ ಕಲೆಗಳು ಮಾಯವಾಗುತ್ತದೆ. ಮತ್ತೆ ಮೊಡವೆಗಳು ಉಂಟಾಗುವುದಿಲ್ಲ. ಕನಿಷ್ಟವೆಂದರೂ ಈ ಫೇಸ್ ಪ್ಯಾಕ್ ಅನ್ನು ವಾರದಲ್ಲಿ 2-3 ಬಾರಿಯಾದರೂ ಉಪಯೋಗಿಸಬೇಕು.

ಬೇಕಾಗುವ ಸಾಮಗ್ರಿಗಳು : 4-5 ಬಾದಾಮಿ, ಒಂದು ಟೀ ಸ್ಪೂನ್ ಜೇನುತುಪ್ಪ, 4-5 ಕೇಸರಿ ದಳ, ಒಂದು ಟೀ ಸ್ಪೂನ್ ನಿಂಬೆಹಣ್ಣಿನ ರಸ

ಫೇಸ್ ಪ್ಯಾಕ್ ವಿಧಾನ
ರಾತ್ರಿ ಹಾಲು ಅಥವಾ ನೀರಿನಲ್ಲಿ ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ಪೇಸ್ಟ್ ಮಾಡಿಟ್ಟುಕೊಳ್ಳಿ. ಅರ್ಧಗಂಟೆಗಳ ಕಾಲ ಬೆಚ್ಚಗಿನ ಹಾಲಿನಲ್ಲಿ ಕೇಸರಿ ದಳವನ್ನು ನೆನೆಸಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಈಗ ಒಂದು ಬೌಲ್ ನಲ್ಲಿ ಬಾದಾಮಿ ಪೇಸ್ಟ್, ಕೇಸರಿ ದಳದ ಪೇಸ್ಟ್, ನಿಂಬೆಹಣ್ಣಿನ ರಸ, ಜೇನುತುಪ್ಪ ಸೇರಿಸಿದರೆ ಫೇಸ್ ಪ್ಯಾಕ್ ರೆಡಿಯಾಗುತ್ತದೆ. ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಒಣಗಿದ ಮೇಲೆ ತಣ್ಣೀರಿನಲ್ಲಿ ಮುಖ ತೊಳೆಯಿರಿ.

ಫಲಿತಾಂಶ : ಇದರಲ್ಲಿರುವ ಕೇಸರಿಯ ಅಂಶ ತ್ವಚೆಯನ್ನು ಬೆಳ್ಳಗಾಗಿಸುತ್ತದೆ. ಕಲೆಗಳನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಜೇನುತುಪ್ಪ ತ್ವಚೆಯನ್ನು ಕೋಮಲವಾಗಿಸುತ್ತದೆ, ಬಿಗಿಗೊಳಿಸುತ್ತದೆ. ಬಾದಾಮಿ ಮತ್ತು ನಿಂಬೆಹಣ್ಣಿನ ರಸ ಇದು ಡೆಡ್ ಸ್ಕಿನ್ (ಅನಗತ್ಯ ಜೀವಕೋಶ) ಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಇದರಿಂದ ಮುಖದ ಚರ್ಮ ಕಾಂತಿಯುತವಾಗಿ ಮತ್ತು ತಾಜಾತನದಿಂದ ಕೂಡಿರುತ್ತದೆ.

ಬೇಕಾಗುವ ಸಾಮಗ್ರಿಗಳು : ಒಂದು ಕಳಿತ ಬಾಳೆಹಣ್ಣು, ಮೊಸರು- 1 ಟೇಬಲ್ ಸ್ಪೂನ್, ಜೇನುತುಪ್ಪ- 1 ಟೀ ಸ್ಪೂನ್, ನಿಂಬೆಹಣ್ಣಿನ ರಸ- 1 ಟೀ ಸ್ಪೂನ್.

ಫೇಸ್ ಪ್ಯಾಕ್ ವಿಧಾನ:
ಒಂದು ಬೌಲ್ ನಲ್ಲಿ ಕಳಿತ ಬಾಳೆಹಣ್ಣು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಮೊಸರು ಸೇರಿಸಿ. ಸ್ವಲ್ಪ ಸಮಯದ ನಂತರ ಜೇನುತುಪ್ಪ ಹಾಗೂ ನಿಂಬೆಹಣ್ಣಿನ ರಸ ಸೇರಿಸಿದರೆ ಫೇಸ್ ಪ್ಯಾಕ್ ರೆಡಿಯಾಗುತ್ತದೆ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ, ಒಣಗಿದ ಮೇಲೆ ಮುಖ ತೊಳೆಯಿರಿ.

ಫಲಿತಾಂಶ : ನಿಂಬೆಹಣ್ಣು ‘ನ್ಯಾಚುರಲ್ ಬ್ಲೀಚಿಂಗ್ ಏಜೆಂಟ್’ ಆದ್ದರಿಂದ ತ್ವಚೆ ಕ್ಲಿಯರ್ ಆಗಿರುವಂತೆ ನೋಡಿಕೊಳ್ಳುತ್ತದೆ. ಬಾಳೆಹಣ್ಣು ಮುಖದ ಅಂದವನ್ನು ಇಮ್ಮಡಿಗೊಳಿಸುತ್ತದೆ. ಇನ್ನು ಮೊಸರು ಮೊಯಿಶ್ಚರೈಸಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ.

Comments are closed.