ಮಂಗಳೂರು: ಪ್ರತಿಯೊಂದು ಜನರ ಜೀವನ ದಿನನಿತ್ಯದ ಜಂಜಾಟದಲ್ಲಿ ಆರೋಗ್ಯದ ಕಡೆ ಗಮನ ಹರಿಸೋಕೆ ಸಮಯವೇ ಸಿಗೋದಿಲ್ಲ. ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಕಾಳಜಿನೇ ಇರೋದಿಲ್ಲ. ಇನ್ನು ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡೋರಿಗೆ ಗೊತ್ತಿರದೇ ದಿನೇ ದಿನೇ ಬೊಜ್ಜು ಸೇರಿಕೊಳ್ಳುತ್ತದೆ. ನಮಗೆ ತಿಳಿದು ತಿಳಿಯದೇ ಕೂತು ಕೂತಲ್ಲೇ ತೂಕ ಜಾಸ್ತಿಯಾಗಿರುತ್ತದೆ.
ಆದ್ರೆ ಒಂದು ದಿನ ನಮ್ಮ ಸ್ನೇಹಿತರೋ ಮತ್ಯಾರೋ ಹೇಳಿದಾಗ ಅದು ನಮ್ಮ ಗಮನಕ್ಕೆ ಬರುತ್ತದೆ. ಬಯಸದೇ ಬಂದ ಭಾಗ್ಯ ಹೊಟ್ಟೆಯನ್ನು ಕರಗಿಸಲು ಆಗ ಏನೆಲ್ಲಾ ಕಸರತ್ತು ಮಾಡೋಕೆ ಹೋಗ್ತೀವಿ. ಜಿಮ್ ಹೊಗ್ತೀವಿ, ವ್ಯಾಯಾಮ ಮಾಡ್ತೀವಿ, ವಾಕಿಂಗು, ಜಾಗಿಂಗು ಹೀಗೆ ಏನೆಲ್ಲಾ ಮಾಡಿದ್ರು ಅವೆಲ್ಲಾ ನಾಲ್ಕೇ ದಿನಕ್ಕೆ ಬೇಜಾರಾಗಿ ಹೋಗುತ್ವೆ. ಇದ್ರ ಜೊತೆಗೆ ಮಾರುಕಟ್ಟೆಯಲ್ಲಿ ಸಿಗೋ ಔಷಧಿಗಳಿಗೂ ಮಾರು ಹೋಗ್ತಿವಿ. ಆದ್ರೆ ಅವು ಯಾವೂ ಕೆಲವೊಂದು ಬಾರಿ ಪರಿಣಾಮಕಾರಿಯಾಗಿ ಕೆಲಸ ಮಾಡೋದಿಲ್ಲ.
ಯಾವುದೇ ವ್ಯಾಯಾಮ ಇಲ್ಲದೇ, ಅಷ್ಟು ಶ್ರಮವಿಲ್ಲದೇ ಬೊಜ್ಜು ಕರಗಿಸೋಕೆ ನಮ್ಮ ಬಳಿ ಒಂದು ಉಪಾಯವಿದೆ. ಅದನ್ನು ನಿಮಗೂ ಹೇಳ್ತಿವಿ ಕೇಳಿ. ನಾವು ಹೇಳೋ ಈ ಜ್ಯೂಸ್‍ನ ದಿನವೂ ಚಾಚೂ ತಪ್ಪದೇ ಕುಡಿದ್ರೆ ಆದಷ್ಟು ಬೇಗ ನಿಮಗೆ ಒಂದು ಒಳ್ಳೆ ರಿಸಲ್ಟ್ ಸಿಗುತ್ತದೆ. ಅದು ಬೆಳಿಗ್ಗೆ ಉಪಹಾರಕ್ಕು ಮುಂಚೆ ಮತ್ತು ರಾತ್ರಿ ಊಟದ ಮುಂಚೆ ಕುಡಿಯಬೇಕು. ದೇಹದಲ್ಲಿ ಬೊಜ್ಜು ಕರಗಿ ಹೊಟ್ಟೆ ಸಪೂರ ಆಗುತ್ತದೆ. ಜೊತೆಗೆ ಹೊಟ್ಟೆಯ ಸುತ್ತಳತೆ ಸಹ ಕಡಿಮೆಯಾಗುತ್ತದೆ. ಈ ಜ್ಯೂಸ್‍ನ ಊಟದ ಮುಂಚೆ ಕುಡುದ್ರೆ ಏಳೇ ದಿನದಲ್ಲಿ ಏನಿಲ್ಲಾ ಅಂದ್ರು 4 ಕೇಜಿ ತೂಕ ಇಳಿಸಬಹುದು.
ಜ್ಯೂಸ್ ಮಾಡುವ ವಿಧಾನ ಮತ್ತು ಅದಕ್ಕೆ ಬೇಕಾಗುವ ಪದಾರ್ಥಗಳು:
1 ಗ್ಲಾಸ್ ನೀರು
ಸಣ್ಣ ಗಾತ್ರದ ಸೌತೆಕಾಯಿ
ಒಂದು ನಿಂಬೆಹಣ್ಣು
ಒಂದು ಟೀ ಚಮಚ ಶುಂಠಿ ಪುಡಿ
10-12 ಪುದಿನಾ ಎಲೆಗಳು
ಮಾಡುವ ವಿಧಾನ: ಮೊದಲಿಗೆ ಸೌತೆಕಾಯಿಯನ್ನು ಕತ್ತರಿಸಿಕೊಳ್ಳಿ, ಪಾತ್ರೆಗೆ ನೀರು, ಕತ್ತರಿಸಿದ ಸೌತೆಕಾಯಿ, ನಿಂಬೆ ಹಣ್ಣಿನ ರಸ, , ಶುಂಠಿ ಪುಡಿ, ಪುದಿನಾ ಎಲೆಗಳನ್ನು ಹಾಕಿ ಮಿಕ್ಸ್ ಮಾಡಿ, ಇದನ್ನು ರಾತ್ರಿಯಿಡೀ ಫ್ರಿಜ್‍ನಲ್ಲಿ ಹಾಗೆ ಇಡಿ. ಮರುದಿನ ಬೆಳಿಗ್ಗೆ ಅದನ್ನು ಕುದುಸಿ, ಸೋಸಿ ಕುಡಿಯಿರಿ. ಉಪಹಾರಕ್ಕೂ ಮುನ್ನ ಒಂದು ಗ್ಲಾಸ್ ಈ ಜ್ಯೂಸ್ ಅನ್ನು ಕುಡಿಯಿರಿ. ಹಾಗೆಯೇ ರಾತ್ರಿ ಊಟಕ್ಕೂ ಮುನ್ನ ಕೂಡ ಇದೇ ಜ್ಯೂಸ್ ಅನ್ನು ಕುಡಿಯಿರಿ. ಆಮೇಲೆ ನೊಡಿ ಚಮತ್ಕಾರ.

Comments are closed.