ಆರೋಗ್ಯ

ನಮ್ಮ ಚರ್ಮದ ಮೇಲೆ ಅಹಾರ ವಿಹಾರಗಳು ಯಾವ ರೀತಿ ಪ್ರಭಾವ ಬೀರುವುದು ..ಗೋತ್ತೆ?

Pinterest LinkedIn Tumblr

skin_mark_body

 ಕಹಿಬೇವಿನ ಸೊಪ್ಪು ತಂದು ಅದನ್ನು ಅರೆದು ಸ್ವಲ್ಪ ಅರಸಿನ ಹುಡಿ ಬೆರೆಸಿ ಚೆನಾಗಿ ಮೈಗೆ ಉಜ್ಜಬೇಕು. ಹತ್ತು ನಿಮಿಷ ಬಿಟ್ಟು ಸ್ನಾನ ಮಾಡಬೇಕು. ಇದರಿಂದ ಮೈಯಲ್ಲಿರುವ ಕಜ್ಜಿಯ ಕ್ರಿಮಿಗಳು ನಾಶವಾಗಿ ಕಜ್ಜಿ ಅಥವಾ ತುರಿಕೆ ನಿಲ್ಲುತ್ತದೆ. ತುರಿಕೆ, ಕಜ್ಜಿ ಇಲ್ಲದವರು ಕೂಡ ಸ್ನಾನದ ನೀರಿನಲ್ಲಿ ಸ್ವಲ್ಪ ಕಹಿಬೇವಿನ ಸೊಪ್ಪು ಹಾಕಿ ನೀರು ಬಿಸಿ ಆದ ಮೇಲೆ ಸ್ನಾನ ಮಾಡಿದಲ್ಲಿ ಚರ್ಮ ರೋಗಗಳು ಬರುವುದಿಲ್ಲ. ಚರ್ಮ ರೋಗ ಇಲ್ಲದವರೂ ಆಗಾಗ ಈರೀತಿ ಮಾಡಬೆಕು. ಕಹಿಬೇವಿನ ರಸಕ್ಕೆ ಒಂದು ಅಥವಾ ಎರಡು ಹನಿ ತೆಂಗಿನಎಣ್ಣೆ ಬೆರೆಸಿ ಮುಖಕ್ಕೆ ಚೆನ್ನಾಗಿ ತಿಕ್ಕುವುದರಿಂದ ಮೊಡವೆಯ ಬಾಧೆ ಇರುವುದಿಲ್ಲ..

ಸ್ಕಿನ್ ಅಳರ್ಜೆ ಇದ್ದರೆ ಲೋಳೆಸರದ ಒಂದು ಕಡ್ಡಿ ಉಪ್ಪು ಅರಿಶಿನದೊಂದಿಗೆ ಕುದಿಸಿ ..ನಂತರ ಬರುವ ಲೋಳೆಯೆನ್ನು ಚೆನ್ನಾಗಿ ತಿಕ್ಕಿ ಹದಿನೈದು ನಿಮಿಷ ಬಿಟ್ಟು ಸ್ನಾನ ಮಾಡಿ ..4 ದಿನ ಮಾಡಿನೋಡಿ ಪೂರ್ಣ ಗುಣಹೊಂದಬಹುದು…ಚರ್ಮರೋಗ ಇರುವವರು ಮೈಯಿಗೆ ಸಾಬೂನು ಹಚ್ಚಬಾರದು. ಕಡಲೆ ಹಿಟ್ಟು ಅಥವಾ ಹೆಸರುಕಾಳಿನ ಹಿಟ್ಟು ಹಚ್ಚಿ ಸ್ನಾನ ಮಾಡಬೇಕು.

ಬಿಸಿ ನೀರಿನ ಸ್ನಾನ ಉತ್ತಮ. ಋತುಮಾನಗಳಿಗೆ ತಕ್ಕಂತೆ ಉಡುಪನ್ನು ಧರಿಸಿದರೆ, ಚರ್ಮದ ಆರೋಗ್ಯ ಕಾಪಾಡಲು ಉತ್ತಮ. ಅಹಾರ ವಿಹಾರಗಳು ನಿಮ್ಮ ಚರ್ಮದ ಮೇಲೆ ಪ್ರಭಾವ ಬೀರದಿರಲಿ.
ಆಲೂಗಡ್ಡೆಯನ್ನು ನಿಂಬೆ ರಸದಲ್ಲಿ ನುಣ್ಣಗೆ ಅರೆದು ಚರ್ಮದ ಮೇಲೆ ಲೇಪಿಸಿದರೆ ತುರಿ ಕಜ್ಜಿ ನಿವಾರಣೆಯಾಗುವುದು. ಮೆಂತೆಕಾಳನ್ನು ಹಸುವಿನ ತುಪ್ಪದಲ್ಲಿ ಹುರಿದು ನಿತ್ಯ ಎರಡು ಚಮಚ ಬಿಸಿನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. 45 ದಿನಗಳಿಂದ 3 ತಿಂಗಳೊಳಗೆ ತೊನ್ನು ಸೇರಿದಂತೆ ಚರ್ಮರೋಗಗಳೆಲ್ಲವೂ ಮಾಯವಾಗುತ್ತದೆ. ಈ ಸಂದರ್ಭ ಟೊಮೆಯೋ, ಬದನೆ ಸೇವಿಸಬಾರದು. ಉಪ್ಪು, ಹುಳಿ, ಖಾರ ಕಡಿಮೆ ಮಾಡಬೇಕು.

ಒಣ ಚರ್ಮವಿದ್ದರೆ, ಅರಿಶಿನ ಪುಡಿಯನ್ನು ಸ್ವಲ್ಪ ಹಾಲು ಹಾಗೂ ಎಳ್ಳೆಣ್ಣೆಯೊಂದಿಗೆ ಬೆರೆಸಿ ಮೈಗೆ ಲೇಪಿಸಿ 15 ನಿಮಿಷದ ಬಳಿಕ ಸ್ನಾನ ಮಾಡಿದರೆ, ಚರ್ಮ ಮೃದುವಾಗಿ ಹೊಳಪು ಪಡೆಯುತ್ತದೆ.

ತ್ವಚೆ ಅಲರ್ಜಿಗೆ ಮನೆ ಮದ್ದು:
* ಎಣ್ಣೆ ಹಚ್ಚುವುದು: ತೆಂಗಿನಎಣ್ಣೆಯನ್ನು ಬಿಸಿ ಮಾಡಿ ಮೈಗೆ ಹಚ್ಚಿ ಒಂದು ರಾತ್ರಿ ಬಿಡಬೇಕು.ನಂತರ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಈ ರೀತಿ ಎಣ್ಣೆ ಹಚ್ಚಿದಾಗ ಕಾಟನ್ ಬಟ್ಟೆ… ಧರಿಸುವುದು ಒಳ್ಳೆಯದು.
* ನಿಂಬೆ ರಸ ಮತ್ತು ತೆಂಗಿನಎಣ್ಣೆ: ನಿಂಬೆ ರಸ ಮತ್ತು ತೆಂಗಿನೆಣ್ಣೆಯನ್ನು ಮಿಶ್ರ ಮಾಡಿ ರಾತ್ರಿಯಲ್ಲಿ ಮೈಗೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಬೇಕು. ಈ ರೀತಿ ಮಾಡುತ್ತಿದ್ದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು
* ಕಹಿ ಬೇವಿನ ಪೇಸ್ಟ್: ಕಹಿ ಬೇವಿನ ಎಲೆಯನ್ನು ಅರೆದು ಮೈಗೆ ಹಚ್ಚಿ ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಅಲರ್ಜಿ ಇದ್ದರೂ, ಇಲ್ಲದಿದ್ದರೂ ಕಹಿ ಬೇವಿನ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕುವುದು ಒಳ್ಳೆಯದು.
* ಗಸೆಗಸೆ ಮತ್ತು ನಿಂಬೆ ರಸ: ಅಲರ್ಜಿಯಿಂದ ಉಂಟಾಗಿರುವ ಗಾಯವನ್ನು ಒಣಗಿಸಲು ಗಸೆಗಸೆಯನ್ನು ಅರೆದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ಅಲರ್ಜಿಯಿಂದ ಉಂಟಾದ ಗಾಯಕ್ಕೆ ಹಚ್ಚುವುದು ಒಳ್ಳೆಯದು.
*ತಣ್ಣೀರು ಸ್ನಾನ: ತ್ವಚೆ ಅಲರ್ಜಿ ಉಂಟಾಗಿದ್ದರೆ ಬಿಸಿ ನೀರಿನಲ್ಲಿ ಸ್ನಾನ ಮಾಡದಿರುವುದು ಒಳ್ಳೆಯದು. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಗಾಯದ ಉರಿ ಹೆಚ್ಚಾಗುತ್ತದೆ.ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಲರ್ಜಿ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.

ಚರ್ಮ ರೋಗಗಳಿಗೆ “ಹಿತ್ತಲ ಮದ್ದು” :
> ಟೊಮೇಟೊ ಅರೆದು ಮುಖಕ್ಕೆ ಹಚ್ಚಿ ಮೃದುವಾಗಿ ಮಾಲಿಷು ಮಾಡಬೇಕು. ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು . ಇದರಿಂದ ಮುಖದ ಮೇಲಿರುವ ಕಪ್ಪು ಕಲೆಗಳು ಮಾಯವಾಗಿ ಚರ್ಮ ನುಣುಪಾಗಿ ಕಾಂತಿಯುತವಾಗುತ್ತದೆ.
> ಟೊಮೇಟೊ ಹಣ್ಣಿನ ಶುದ್ಧ ರಸವನ್ನು ಸೇವಿಸುವುದರಿಂದ ರಕ್ತ ಶುದ್ಧಿಯಾಗಿ ಚರ್ಮ ರೋಗಗಳು ಗುಣವಾಗುತ್ತವೆ.
> ತೆಂಗಿನ ಎಣ್ಣೆ, ಹರಳೆಣ್ಣೆ & ಹಾಲು ಮಿಶ್ರಣ ಮಾಡಿ ಚಳಿಗಾಲದಲ್ಲಿ ಮೈಗೆ ಹಚ್ಚಿದರೆ ಚರ್ಮವು ಒಣಗುವುದಿಲ್ಲ ಮತ್ತು ಒಡೆಯುವುದಿಲ್ಲ.
> ಒಣದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಅವುಗಳನ್ನ್ನು ಕಿವುಚಿ ರಸ ತೆಗೆದು ಆ ರಸವನ್ನು 40 ದಿನಗಳವರೆಗೆ ಸೇವಿಸಿದರೆ ದೀರ್ಘಕಾಲದಿಂದ ಇದ್ದ ಚರ್ಮರೋಗ ಗುಣವಾಗುವುದು.
> ನಿಂಬೆ ಹಣ್ಣಿನ ರಸದ ಜೊತೆ ಗುಲಾಬಿ ನೀರು, ಜೇನುತುಪ್ಪ, ಗ್ಲಿಸೆರಿನ್ ಸಮ ಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಪ್ರತಿದಿನ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತೊಳೆದು ಕೊಳ್ಳುವುದರಿಂದ ಮುಖದ ಮೇಲಿನ ಕಪ್ಪು ಚುಕ್ಕಿಗಳು ಮೊಡವೆಗಳು, ಗೆರೆಗಳು, ಸುಕ್ಕುಗಳು ಮಾಯವಾಗಿ ಚರ್ಮ ಕಾಂತಿಯುಕ್ತವಾಗುತ್ತದೆ .
> ಮೈಲಿಬೇನೆ , ಸಿಡುಬು ಪ್ರಾರಂಭವಾದ ಕ್ಷಣದಲ್ಲಿ ನಿಂಬೆ ರಸದಲ್ಲಿ ಬೆಲ್ಲ ಸೇರಿಸಿ ಸೇವಿಸುವುದರಿಂದ ಬೇಗ ಗುಣವಾಗುತ್ತದೆ & ಜ್ವರದ ತಾಪವು ಇಳಿಯುತ್ತದೆ.
> ನಿಂಬೆ ರಸವನ್ನು ತೆಂಗಿನಎಣ್ಣೆಯಲ್ಲಿ ಸೇರಿಸಿ ಮಾಲಿಶ್ ಮಾಡುವುದರಿಂದ ಚರ್ಮದ ತುರಿಕೆ ಕಡಿಮೆ ಆಗುತ್ತದೆ.
> ದಿನ ನಿತ್ಯ ಮದ್ಯಾನ್ನ 250gm ನಷ್ಟು ಸೀಬೆ ಹಣ್ಣನ್ನು ಸೇವಿಸುವುದರಿಂದ ಹುಣ್ಣು , ಕಜ್ಜಿ , ತುರಿಕೆಗಳು ಕಡಿಮೆಯಾಗುತ್ತವೆ. ಹೊಟ್ಟೆಯ ಉಷ್ಣ ಕಡಿಮೆ ಆಗುತ್ತದೆ. ರಕ್ತ ಶುದ್ಧವಾಗುತ್ತದೆ.
> ಹಲಸಿನ ಎಲೆಯನ್ನು ಬಿಸಿಮಾಡಿ ಕುರು, ಗಡ್ಡೆ ಮುಂತಾದುವುಗಳ ಮೇಲೆ ಕಟ್ಟಿದರೆ ಅವು ಬೇಗ ಒಡೆಯುತ್ತವೆ.
> ಹುಣಿಸೆಯ ಬೀಜವನ್ನು ನಿಂಬೆ ರಸದಲ್ಲಿ ಅರೆದು ತುರಿಕೆ, ಕಜ್ಜಿಗೆ ಹಚ್ಚಿದರೆ ಗುಣವಾಗುತ್ತವೆ.
> ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ ಅದನ್ನು ನೀರಿನಲ್ಲಿ ಕಲೆಸಿ ಮೊಡವೆಗಳಿಗೆ ಹಚ್ಚಿದರೆ ಮೊಡವೆಗಳು ಕಡಿಮೆ ಆಗುತ್ತವೆ.
> ಕಿತ್ತಳೆ ಹಣ್ಣಿನ ಒಣಸಿಪ್ಪೆಯನ್ನು ಚೂರ್ಣ ಮಾಡಿ ಇಟ್ಟುಕೊಂಡು ಬೇಕಾದಾಗ ಎಣ್ಣೆಯಲ್ಲಿ ಕಲೆಸಿ ದಿನಾ ಹಚ್ಚುವುದರಿಂದ ಹುಳುಕಡ್ಡಿ, ಇಸುಬು, ತುರಿ, ಗಜಕರ್ಣ ಮುಂತಾದ ಚರ್ಮರೋಗಗಳು ಗುಣವಾಗುತ್ತವೆ.
> ಕಿತ್ತಳೆ ಹಣ್ಣಿನ ಹಸಿ ಸಿಪ್ಪೆಹಿಂದ ಮುಖವನ್ನು ಚನ್ನಾಗಿ ಉಜ್ಜಿಕೊಂಡು ತೊಳೆಯುವುದರಿಂದ ಕಪ್ಪು ಕಲೆಗಳು ನಿವಾರಣೆಯಾಗಿ ಕಾಂತಿಯುತವಾಗುತ್ತದೆ.
> ಅನಾನಸ್ ಹಣ್ಣಿನ ರಸವನ್ನು ಕಜ್ಜಿ, ತುರಿಕೆ ಇದ್ದಲ್ಲಿ ಹಚ್ಚಿ ತಿಕ್ಕಿದರೆ ವಾಸಿಯಾಗುತ್ತವೆ.
> ಖರ್ಬೂಜ ಹಣ್ಣನ್ನು ಕ್ರಮವಾಗಿ ಸೇವಿಸುತ್ತ ಬಂದರೆ ಚರ್ಮರೋಗದಿಂದ ಮುಕ್ತಿ ಪಡೆಯಬಹುದು.
> ಖರ್ಬೂಜ ಹಣ್ಣಿನ ರಸವನ್ನು ಪ್ರತಿದಿನ 2 ಲೋಟಗಳಷ್ಟು ಸೇವಿಸಿದರೆ ಕಜ್ಜಿ, ಗಜಕರ್ಣ ಮೊದಲಾದ ಚರ್ಮರೋಗಗಳು ಗುಣವಾಗುತವೆ.
> ಖರ್ಬೂಜ ಹಣ್ಣಿನ ಬೀಜದ ಚೂರ್ಣ or ಕಶಾಯವು ಚರ್ಮರೋಗಕ್ಕೆ ಒಳ್ಳೆಯದು.
> ಬಾಳೆಹಣ್ಣಿನ ಸಿಪ್ಪೆಯನ್ನು ನಿಂಬೆ ಹಣ್ಣಿನ ರಸದಲ್ಲಿ ಅರೆದು ಹಚ್ಚುವುದರಿಂದ ಕಜ್ಜಿ, ತುರಿಕೆ ಗುಣವಾಗುತ್ತವೆ.
> ನೆನೆಸಿದ ಬಾಧಮಿಯನ್ನು ಸಿಪ್ಪೆ ತೆಗೆದು ಹಾಲಲ್ಲಿ ತೇದು ಮುಖಕ್ಕೆ ಹಚ್ಚಿದರೆ ಚರ್ಮ ಕಾಂತಿಯುತವಗುತ್ತದೆ. & ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳು (Dark circles) ಮಾಯವಾಗುತ್ತವೆ.
> ಬಾಧಾಮಿ ತೈಲವನ್ನು ತುಟಿಗೆ ಹಚ್ಚಿದರೆ ತುಟಿ ಒಡೆಯುವುದಿಲ್ಲ.
> ಪ್ರತಿದಿನ 4-5 ಬಾಧಮಿ ತಿನ್ನುವುದರಿಂದ ತುಟಿಗಳು ಒಡೆಯುವುದಿಲ್ಲ.
> ಭೋರೆ ಹಣ್ಣುಗಳನ್ನು ಒಣಗಿಸಿ ಸುತ್ತು ಭೂದಿಮಾದಿ . ಆ ಭೂದಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಮೊಡವೆಗಳಿಗೆ (Pimples) ಹಚ್ಚುತ್ತಾ ಬಂದರೆ ಮೊಡವೆಗಳು ಗುಣವಾಗುವುವು.
> ಮಾವಿನ ಹಣ್ಣನ್ನು ದಿನ ನಿತ್ಯವೂ ಊಟದ ನಂತರ ಸೇವಿಸಿದರೆ ದೇಹದ ಬಣ್ಣ ಉತ್ತಮಗೊಳ್ಳುತ್ತದೆ.
> ಮಾವಿನ ಹಣ್ಣಿನ ರಸವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಚರ್ಮಕ್ಕೆ ಹೊಳಪು ಮೂಡುತ್ತದೆ.
> ಮೋಸಂಬಿ ರಸವನ್ನು ಮುಖಕ್ಕೆ ತಿಕ್ಕಿ ೩೦ ನಿಮಿಷ ಬಳಿಕ ತೊಳೆದರೆ ಮುಖದ ಚರ್ಮ ಕಾಂತಿಯುತವಾಗುತ್ತದೆ.
> ಸೇಬಿನ ತಿರುಳನ್ನು ಮುಖಕ್ಕೆ ಲೇಪಿಸಿದರೆ ಮೊಡವೆ & ಕಲೆಗಳು ಮಾಯವಾಗಿ ಚರ್ಮ ಹೊಳೆಯುತ್ತದೆ.
> ಹುಳಿ ಸೇಬಿನ ರಸವನ್ನು ಚರ್ಮದ ಮೇಲೆ ಬೋಕ್ಕೆಗಳಿದ್ದರೆ ಹಚ್ಚಿದರೆ ಬೊಕ್ಕೆಗಳು ಒಣಗಿ ಬೀಳುತ್ತವೆ.
> ಬೇವಿನ ಎಣ್ಣೆಯನ್ನು ರೋಗಗ್ರಸ್ತ ಚರ್ಮದಮೇಲೆ ಹಚ್ಚಿ ಮಾಲಿಸು ಮಾಡುವುದರಿಂದ ಚರ್ಮ ರೋಗಗಳು ನಿವಾರಣೆಯಾಗುತ್ತದೆ.
> ಆಲುಗೆಡ್ಡೆಯನ್ನು ನಿಂಬೆ ರಸದಲ್ಲಿ ನುಣ್ಣಗೆ ಆರೆದು ಚರ್ಮದ ಮೇಲೆ ಲೇಪಿಸಿದರೆ ತುರಿ ಕಜ್ಜಿ ನಿವಾರಣೆಯಾಗುವುದು.
> ಅರಿಶಿನದ ಪುಡಿಯನ್ನು ಜೆನುತುಪ್ಪದ್ದಲ್ಲಿ ರಂಗಳಿಸಿ ವ್ಯಾದಿ ಪೀಡಿತ ಚರ್ಮದ ಮೇಲೆ ಹಚ್ಚುವುದರಿಂದ ಸಕಲ ಚರ್ಮ ವ್ಯಾದಿಗಳು ಗುಣವಾಗುತ್ತದೆ.
> ಚರ್ಮದ ಸಮಸ್ಯೆಗಳಿಗೆ ಟೊಮೆಟೊ ರಾಮಬಾಣ. ಇದನ್ನು ನುಣ್ಣಗೆ ಮಿಕ್ಸಿಯಲ್ಲಿ ಅರೆದು, ರಸವನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಮಾಲಿಷ್‌ ಮಾಡಿ. ಅದು ಸ್ವಲ್ಪ ಒಣ­ಗು­ತ್ತಿದ್ದಂತೆ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಇದು ನಿಮ್ಮ ತ್ವಚೆ­ಯನ್ನು ಚಳಿಗಾಲದಿಂದ ರಕ್ಷಿಸುವುದು ಮಾತ್ರವಲ್ಲದೆ, ಮುಖದ ಮೇಲಿರುವ ಕಪ್ಪು ಕಲೆಗಳು ಮಾಯವಾಗಿ ಚರ್ಮ ನುಣುಪಾಗಿ ಕಾಂತಿಯುತ ಆಗುವಂತೆ ಮಾಡುತ್ತದೆ.
> ತೊನ್ನು ಸೇರಿದಂತೆ ಚರ್ಮ ರೋಗ ಇರುವವರು ಮೆಂತ್ಯದ ಕಾಳನ್ನು ಹಸುವಿನ ತುಪ್ಪದಲ್ಲಿ ಹುರಿದು ನಿತ್ಯ ಎರಡು ಚಮಚ ಬಿಸಿನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಸಂದರ್ಭದಲ್ಲಿ ಟೊಮೆಟೊ, ಬದನೆಕಾಯಿ ತ್ಯಜಿಸಿ, ಉಪ್ಪು, ಹುಳಿ, ಖಾರ ಕಡಿಮೆ ಮಾಡಬೇಕು.
> ಲೋಳೆಸರದ ಒಂದು ಕಡ್ಡಿಯನ್ನು ಉಪ್ಪು ಮತ್ತು ಅರಿಶಿನದೊಂದಿಗೆ ಕುದಿಸಿ. ಲೋಳೆಯನ್ನು ಚೆನ್ನಾಗಿ ತಿಕ್ಕಿ 15 ನಿಮಿಷ ಬಿಟ್ಟು ಸ್ನಾನ ಮಾಡಿ. ಇದರಿಂದ ಚರ್ಮ ವ್ಯಾಧಿ ಹತೋಟಿಗೆ ಬರುತ್ತದೆ.

ಹುಳುಕಡ್ಡಿ, ಇಸುಬು, ತುರಿ, ಗಜಕರ್ಣ :
* ಕಿತ್ತಳೆ ಹಣ್ಣಿನ ಒಣಸಿಪ್ಪೆಯನ್ನು ಚೂರ್ಣ ಮಾಡಿ ಇಟ್ಟುಕೊಂಡು ಬೇಕಾದಾಗ ಎಣ್ಣೆಯಲ್ಲಿ ಕಲೆಸಿ ದಿನಾ ಹಚ್ಚುವುದರಿಂದ ಹುಳುಕಡ್ಡಿ, ಇಸುಬು, ತುರಿ, ಗಜಕರ್ಣ ಮುಂತಾದ ಚರ್ಮರೋಗಗಳು ಗುಣವಾಗುತ್ತವೆ.
* ತುಳಸಿರಸ, ನಿಂಬೆರಸವನ್ನು ಕಲೆಸಿ ಲೇಪಿಸಿದರೆ ಹುಳುಕಡ್ಡಿ ಕಡಿಮೆಯಾಗುತ್ತದೆ.
* ಚರ್ಮರೋಗಕ್ಕೆ (ಇಸಬು,ಗಜಕರ್ಣಕ್ಕೆ) ತುಳಸಿಯ ಎಲೆಯನ್ನು ಉಪ್ಪಿನೊಂದಿಗೆ ಬೆರೆಸಿ ಅರೆದು ಲೇಪಿಸಬೇಕು, ತುಳಸಿ ಕಷಾಯ ಕುಡಿಯಬೇಕು.
* ತುಳಸಿ ಗಿಡದ ಕಾಂಡದಿಂದ ಹುಳುಕಡ್ಡಿಯ ಭಾಗವನ್ನು ಚೆನ್ನಾಗಿ ಕೆರೆದು, ಅನಂತರ ತುಳಸಿ ಸೊಪ್ಪಿನ ಕಷಾಯದಿಂದ ಆ ಭಾಗವನ್ನು ಚೆನ್ನಾಗಿ ತೊಳೆಯಬೇಕು. ಇದಾದ ಮೇಲೆ ತುಳಸಿ ಸೊಪ್ಪನ್ನು ಚೆನ್ನಾಗಿ ಅರೆದು ಹುಳುಕಡ್ಡಿಯ ಮೇಲೆ ಲೇಪಿಸಿ.
* ತೊನ್ನು ಸೇರಿದಂತೆ ಚರ್ಮ ರೋಗ ಇರುವವರು ಮೆಂತ್ಯದ ಕಾಳನ್ನು ಹಸುವಿನ ತುಪ್ಪದಲ್ಲಿ ಹುರಿದು ನಿತ್ಯ ಎರಡು ಚಮಚ ಬಿಸಿನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಸಂದರ್ಭದಲ್ಲಿ ಟೊಮೆಟೊ, ಬದನೆಕಾಯಿ ತ್ಯಜಿಸಿ, ಉಪ್ಪು, ಹುಳಿ, ಖಾರ ಕಡಿಮೆ ಮಾಡಬೇಕು.
* ಖರ್ಬೂಜ ಹಣ್ಣಿನ ರಸವನ್ನು ಪ್ರತಿದಿನ 2 ಲೋಟಗಳಷ್ಟು ಸೇವಿಸಿದರೆ ಕಜ್ಜಿ, ಗಜಕರ್ಣ ಮೊದಲಾದ ಚರ್ಮರೋಗಗಳು ಗುಣವಾಗುತವೆ.
* ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನುತುಪ್ಪ ಸವರುವುದರಿಂದ ಗುಣವಾಗುವುದು.
* ಇಸುಬು ರೋಗದಿಂದ ಬಳಲುತ್ತಿರುವವರು ಬೇವಿನ ಎಲೆಮತ್ತು ಗೋರಂಟಿ ಎಲೆಗಳನ್ನು ಸ್ವಲ್ಪ ನೀರಿನಲ್ಲಿ ಸೇರಿಸಿ, ಕುದಿಸಿ,ನೀರಿನಂಶವೆಲ್ಲ ಹೋದ ನಂತರ ಸ್ವಲ್ಪ ಅರೆದು ಹೋಂಗೆ ಎಣ್ಣೆ ಸೇರಿಸಿ ಲೇಪಿಸಬೇಕು.
* ಎರಡು ಚಮಚ ಅರಿಶಿನಪುಡಿ, ಎರಡು ಚಮಚ ಬೇವಿನ ಎಳೆಯ ರಸವನ್ನು ಒಂದು ಚಮಚ ಒಳ್ಳೆಣ್ಣೆ ಯಲ್ಲಿ ಕಲಸಿ ಹಚ್ಚಿದರೆ ಹುಳುಕಡ್ಡಿ, ಇಸುಬು, ತುರಿ, ಗಜಕರ್ಣ ಮುಂತಾದ ಚರ್ಮರೋಗಗಳು ಗುಣವಾಗುತ್ತವೆ.
* ಆಗ ತಾನೆ ಕಿತ್ತು ತಂದ ಬೇವಿನ ಎಲೆಗಳನ್ನು ಮೊಸರಿನಲ್ಲಿ ಆರೆದು ಹುಳುಕಡ್ಡಿಯ ಮೇಲೆ ಲೇಪಿಸುವುದರಿಂದ ಕೆಲವೆ ದಿನಗಳಲ್ಲಿ ಗುಣ ಕಂಡುಬರುವುದು.

pigmation_skin

ಬಂಗು (Pigmentation):
ಈ ಸಮಸ್ಯೆಯು ವಿಟಮಿನ್ ಸಿ ಕೊರತೆಯಿಂದ ಉಂಟಾಗುತ್ತದೆ.
– ಕಬ್ಬಿನ ರಸವನ್ನು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ಬಳಿಕ ಸ್ವಚ್ಛ ಗೊಳಿಸಿ ಕೊಳ್ಳಿ
-ಕಿತ್ತಳೆ ಹಣ್ಣಿನ ರಸವನ್ನು ಅರ್ಧ ಗಂಟೆ ಲೇಪಿಸಿ.
-ಕಿತ್ತಳೆ ಸಿಪ್ಪೆಯ ಪುಡಿ ಅಂಗಡಿಗಳಲ್ಲಿ ದೊರಕುತ್ತದೆ. ಆ ಪುಡಿಗೆ ಮೊಸರು ಸೇರಿಸಿ, ಆ ಪ್ಯಾಕ್ ಅರ್ಧ ಗಂಟೆ ಅಗತ್ಯ ಇರುವ ಸ್ಥಳಕ್ಕೆ ಲೇಪಿಸಿ. ಅದನ್ನು ಉಗುರು ಬೆಚ್ಚಗಿರುವ ನೀರನ್ನು ಬಳಸಿ ಸ್ವಚ್ಚಗೊಳಿಸಿ.
-ಆದಷ್ಟು ಹೊರಗೆ ಹೋಗುವಾಗ ಸೂರ್ಯನ ಕಿರಣಗಳು ಪಿಗ್ಮೆಂಟೇಷನ್ ಇರುವ ಜಾಗದಲ್ಲಿ ಬೀಳದಂತೆ ಎಚ್ಚರ ವಹಿಸಿ.
– ಎಕ್ಕದ ಬೇರನ್ನು ನಿಂಬೇರಸದಲ್ಲಿ ತೇದು ಅದಕ್ಕೆ ಸ್ವಲ್ಪ ಪುನುಗು ಸೇರಿಸಿ ಲೇಪಿಸಿ ಮೃದುವಾಗಿ ಹಚ್ಚಿಕೊಳ್ಳಬೇಕು.
-ಮದರಂಗಿ ರಸಕ್ಕೆ ಸ್ವಲ್ಪ ಅರಿಶಿನ ಪುಡಿ ಮತ್ತು ನಿಂಬೆರಸ ಸೇರಿಸಿ ಹಚ್ಚಬೇಕು.
– ಮುಖವನ್ನು ತೊಳೆದು ಕೊಂಡು ಉತ್ತಮ ಕಂಪನಿಯ ಮಾಯಿಶ್ಚರೈಸರ್ ಲೇಪಿಸಿ .

Comments are closed.