ಆರೋಗ್ಯ

ಅರ್ಯುವೇದದ ಪ್ರಕಾರ ಯಾವ ಅಕ್ಕಿಯನ್ನು ಯಾವಾಗ ತಿನ್ನಬೇಕು?

Pinterest LinkedIn Tumblr

red_white_rice

ಮಂಗಳೂರು: ಈಗೀಗ ಅನ್ನ ಬೆಳ್ಳಗಿರದೆ ಹೋದ್ರೆ ಬಡವರು ಅನ್ನ್ಕೊಳೋದು ಕಡಿಮೆ ಕೆಂಪಕ್ಕಿಯಿಂದ ಒಳ್ಳೆ ಆರೋಗ್ಯ ಅಂತ ಜನರಿಗೆ ಅರ್ಥ ಅಗ್ತಿದೆ.ಕೆಂಪಕ್ಕೀಲಿ ಮಿಟಮಿನ್ ಬಿ ಮತ್ತು ನಾರಿನಾಂಶ ಜಾಸ್ತಿ ಇರುತ್ತೆ, ಇದು ಆರೋಗ್ಯಕ್ಕೆ ತುಂಬ ಒಳ್ಳೆದು. ಸಕ್ಕರೆ ಖಾಯಿಲೆ ಕೊಲೆಸ್ಟ್ರಾಲ್ ಏರುಪೇರು… ಇವೆಲ್ಲಾ ಏನೂ ಆಗಲ್ಲ ಅಂತ ಜನ ಕೆಂಪಕ್ಕಿ ಜಾಸ್ತಿ ತಿಂತಿದ್ದಾರೆ. ಕೆಲವರು ಬಿಳಿ ಅಕ್ಕಿ ಬರೀ ತೂಕ ಹೆಚ್ಚಿಸುತ್ತೆ. ಅದ್ರಲ್ಲಿ ಏನೂ ಹುರುಳಿಲ್ಲ ಅಂತ ತಿನ್ನೋದೇ ಬಿಟ್ಟಿದ್ದಾರೆ.

ಚಳಿಗಾಲದಲ್ಲಿ ಕೆಂಪಕ್ಕಿ ತಿನ್ನಬೇಕು, ಬೇಸಿಗೇಲಿ ಬಿಳಿ ಅಕ್ಕಿ ತಿನ್ನಬೇಕು. ಯಾಕ್ ಹೀಗೆ? ಚಳಿಗಾಲದಲ್ಲಿ ಹಸಿವು ಜಾಸ್ತಿ, ಹಾಗೇ ತಿಂದಿದ್ದು ಚೆನ್ನಾಗಿ ಅರಗೂ ಅರಗುತ್ತೆ. ಜೀರ್ಣಶಕ್ತಿ ಆಗ ಕೆಂಪಕ್ಕಿ ತಿಂದ್ರೆ ಚೆನ್ನಾಗಿ ಅರಗತ್ತೆ. ಹಾಗೇ ಬೇಸಿಗೇಲಿ ಜಾಸ್ತಿ ತಿನ್ನಬೇಕು ಅನ್ನಿಸಲ್ಲ. ತಿಂದಿದ್ದು ಆದಷ್ಟೂ ಹಗುರವಾಗಿರಬೇಕು. ಹಸಿವು ಕೂಡ ಕಡಿಮೆ, ಬೇಸಿಗೇಲಿ ಅಥವಾ ನಿಮ್ಗೆ ಹುಷಾರ್ ತಪ್ಪಿದಾಗ ಬಿಳಿ ಅಕ್ಕಿ ತಿಂದ್ರೆ ಒಳ್ಳೆದು. ಚೆನ್ನಾಗಿ ಅರಗತ್ತೆ ಗಮನಿಸಿ ಇದು ಸಾಮಾನ್ಯವಾಗಿ ಎಲ್ಲರಿಗೂ ಸೇರಿ ಹೇಳಿರೋ ಮಾತು.

ನಿಮ್ಮ ನಿಮ್ಮ ಆರೋಗ್ಯಸ್ಥಿತಿ ಹೇಗಿದೇಯೋ ಅದರ ಪ್ರಕಾರ ನಿಮಗೆ ಯಾವ್ಯ್ದು ಸರಿ ಅಂತ ನೀವೇ ಕಂಡುಕೊಳ್ಳೊದು ಒಳ್ಲೆದು ಅಂದಹಾಗೆ, ನಿಮಗೆ ಕೆಂಪಕ್ಕೀನೇ ತಿನ್ನಬೇಕು ಅನ್ನೋ ಆಸೆ ಇದ್ದರೆ ಅರ್ದ ಗಂಟೆ ನೀರಲ್ಲಿ ನೆನೆಸಿ ಅಮೇಲೆ ಅನ್ನ ಮಾಡ್ಕೊಂಡು ತಿನ್ನಿ

Comments are closed.