ರಾಷ್ಟ್ರೀಯ

ರಿಲಯನ್ಸ್ 4ಜಿ ಲೈಫ್(4G Lyf) ಫೋನ್ ಸ್ಫೋಟ; ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಪೋಸ್ಟ್

Pinterest LinkedIn Tumblr

phone

ನವದೆಹಲಿ: ರಿಲಯನ್ಸ್ 4ಜಿ ಲೈಫ್(4G Lyf) ಫೋನ್ ಸ್ಫೋಟಗೊಂಡಿದೆ ಎಂದು ವ್ಯಕ್ತಿಯೊರ್ವ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದಾನೆ.

ರಿಲಯನ್ಸ್ ಜಿಯೋ 4G Lyf ಫೋನ್ ಬಳಸುತ್ತಿದ್ದಾಗ ಸ್ಫೋಟಗೊಂಡಿದೆ ಎಂದು ತನ್ವೀರ್ ಸಾದೀಕ್ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಫೋಟೋ ಸಮೇತ ಟ್ವೀಟ್ ಮಾಡಿದ್ದು, ಅದರಡಿ ಜಿಯೋ ಸ್ಮಾರ್ಟ್ ಫೋನ್ ಬಳಸುತ್ತಿರುವವರೂ ಬಹಳ ಜಾಗೃತವಾಗಿರಿ ಎಂದು ಸೂಚಿಸಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಸಂಸ್ಥೆಯ ವಕ್ತಾರರೊಬ್ಬರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಗ್ರಾಹಕರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ. ಹೀಗಾಗಿ ಪ್ರಕರಣದ ತನಿಖೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

Comments are closed.