ಆರೋಗ್ಯ

ಶಿಶುಹಲ್ಲುಗಳ ರೋಗ ಪರಿಸ್ಥಿತಿಗೆ ಕಾರಣ ಹಾಗೂ ಚಿಕಿತ್ಸೆ

Pinterest LinkedIn Tumblr

baby_teeth_pic

ಮಕ್ಕಳಲ್ಲಿ ಹಲ್ಲುಗಳು ಪ್ರಾಯಕ್ಕೆ ಅನುಗುಣವಾದ, ನಿಗದಿತ ಕ್ರಮದಂತೆ ಬಾಯಿಯಲ್ಲಿ ಹುಟ್ಟಿಕೊಳ್ಳುತ್ತವೆ. ಮಗುವು ಜನಿಸಿ 6 ತಿಂಗಳಿನಿಂದ ಒಂದು ವರ್ಷದ ಅವಧಿಯ ಒಳಗೆ ಮೊದಲ ಹಲ್ಲು ಕಾಣಿಸಿಕೊಳ್ಳುತ್ತದೆ. ಆದರೆ ಕೆಲವೊಂದು ಮಗುವು ಹುಟ್ಟುವಾಗಲೆ ಅಥವಾ ಮೊದಲ ತಿಂಗಳಲ್ಲೇ ಒಂದೆರೆಡು ಹಲ್ಲುಗಳು ಮೂಡಿರುವ ಸಾಧ್ಯತೆಯೂ ಇದೆ. ಸಹಜ ಸಮಯಕ್ಕಿಂತ ಮೊದಲೆ ಹುಟ್ಟುವ ಇಂತಹ ಹಲ್ಲುಗಳಿಗೆ ಜನ್ಮಜಾತ ಹಲ್ಲುಗಳು, ಭ್ರೂಣದ ಹಲ್ಲುಗಳು, ಪ್ರಿಡೆಸಿಡ್ನೂವಲ್‌ ಹಲ್ಲುಗಳು ಮತ್ತು ಡೆಂಟೀಯಾ ಪ್ರಿಕಾಕ್ಸ್‌ ಎಂದು ಹೆಸರು. ಇದನ್ನು ಹೆಚ್ಚು ಸ್ಪಷ್ಟವಾಗಿ ಹೇಳುವುದಾದರೆ, ಮಗುವು ಜನಿಸುವಾಗಲೇ ಹಲ್ಲುಗಳಿದ್ದರೆ ಅದಕ್ಕೆ ಜನ್ಮಜಾತ ಹಲ್ಲುಗಳು ಎಂದು ಕರೆಯುತ್ತಾರೆ, ಮಗುವು ಜನಿಸಿದ ಮೊದಲ 30 ದಿನಗಳ ಜೀವಿತಾವಧಿಯಲ್ಲಿ ಬಾಯಿಯಲ್ಲಿ ಕಾಣಿಸಿಕೊಳ್ಳುವ ಹಲ್ಲುಗಳಿಗೆ ನವಜಾತ ಶಿಶು ಹಲ್ಲುಗಳು ಎಂಬ ಹೆಸರಿನಿಂದ ಕರೆಯುತ್ತಾರೆ.

ವ್ಯಾಪಕತೆ:
ಸಾಮಾನ್ಯವಾಗಿ ನವಜಾತ ಶಿಶು ಹಲ್ಲುಗಳಿಗಿಂತಲೂ, ಜನ್ಮಜಾತ ಹಲ್ಲುಗಳು ಕಾಣಿಸಿಕೊಳ್ಳುವ ಸಾಧ್ಯತೆ ಮೂರು ಪಟ್ಟು ಹೆಚ್ಚು. ಜನ್ಮಜಾತ ಮತ್ತು ನವಜಾತ ಹಲ್ಲುಗಳ ಪ್ರಕರಣ ಸಾಧ್ಯತೆಗಳು 1:2000 ರಿಂದ 1:3,500 ರಷ್ಟು ವ್ಯಾಪಕವಾಗಿದೆ ಎಂದು ಹೇಳಬಹುದು. ಲಿಂಗವನ್ನು ಆಧರಿಸಿ ನೋಡುವಾಗ ಪ್ರಚಲಿತ ಅಂಕಿ ಅಂಶಗಳಲ್ಲಿ ಯಾವ ವ್ಯತ್ಯಾಸವೂ ಕಂಡು ಬರುವುದಿಲ್ಲ. ಆದರೆ ಕೆಲವು ಲೇಖಕರು ಇದು ಹೆಣ್ಣು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ಗುರುತಿಸಿದ್ದಾರೆ. 66% ಹೆಣ್ಣು ಮಕ್ಕಳಿಗೆ ಎದುರಾಗಿ 31% ಗಂಡು ಮಕ್ಕಳಲ್ಲಿ ಈ ರೀತಿ ಹಲ್ಲು ಕಾಣಿಸಿಕೊಳ್ಳುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಕೆಳದವಡೆಯ ಬಾಚಿಹಾಲ್ಲುಗಳ ಜಾಗದಲ್ಲಿ ಈ ಹಲ್ಲುಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಮತ್ತು ಅನಂತರ ಮೇಲ್ದವಡೆಯ ಬಾಚಿ ಹಲ್ಲುಗಳ ಭಾಗದಲ್ಲಿ, ಕೆಳದವಡೆಯ ಕೋರೆಹಲ್ಲು ಮೇಲ್ದವಡೆಯ ಕೋರೆಹಲ್ಲುಗಳಲ್ಲಿ ಅಥವಾ ದವಡೆ ಹಲ್ಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಜನ್ಮಜಾತ ಅಥವಾ ನವಜಾತ ಶಿಶು ಕೋರೆಹಲ್ಲುಗಳು ತುಂಬಾ ವಿರಳ.

ರೋಗ ಪರಿಸ್ಥಿತಿಗೆ ಕಾರಣ: 1% – 10% ನಷ್ಟು ಜನ್ಮಜಾತ ಮತ್ತು ನವಜಾತ ಶಿಶು ಹಲ್ಲುಗಳು ಹೆಚ್ಚುವರಿ ಹಲ್ಲುಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. 90% ಗಿಂತಲೂ ಹೆಚ್ಚಿನ ಸಂದರ್ಭಗಳಲ್ಲಿ ಅವು ಅವಧಿಗೆ ಮೊದಲೇ ಕಾಣಿಸಿಕೊಂಡ ಹಾಲು ಹಲ್ಲುಗಳಾಗಿರುತ್ತವೆ.

ಈ ರೀತಿ ಜನ್ಮಜಾತ ಅಥವಾ ನವಜಾತ ಶಿಶು ಹಲ್ಲುಗಳು ಕಾಣಿಸಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದಿಲ್ಲ. ಆನುವಂಶಿಕ ಡಾಮಿನೆಂಟ್‌ ಆಟೋಸೋಮಲ್‌ ಲಕ್ಷಣದ ಕಾರಣದಿಂದಾಗಿಯೂ ಸಹ ಹಲ್ಲು ಕಾಣಿಸಿಕೊಂಡಿರಬಹುದು. ಪಿಟ್ಯುಟರಿ, ಥೈರಾಯಿಡ್‌ ಮತ್ತು ಜನನ ಗ್ರಂಥಿಗಳಂತಹ ನಿರ್ನಾಳ ಗ್ರಂಥಿಗಳಲ್ಲಿ ಉಂಟಾಗುವ ಅಡಚಣೆಯೂ ಸಹ ಈ ಪರಿಸ್ಥಿತಿಗೆ ಒಂದು ಪ್ರಮುಖ ಕಾರಣ ಎಂದು ಭಾವಿಸಲಾಗುತ್ತಿದೆ. ಮತ್ತೂಂದು ವಾಖ್ಯಾನದ ಪ್ರಕಾರ ಹೆಚ್ಚುವರಿ ಮೂಳೆಯ ಮರುಹೀರಿಕೆ, ಜನ್ಮಜಾತ ಅಥವಾ ನವಜಾತ ಶಿಶು ಹಲ್ಲುಗಳ ರೂಪದಲ್ಲಿ, ಅವಧಿ ಪೂರ್ವ ಹಲ್ಲುಗಳ ಹುಟ್ಟುವಿಕೆಗೆ ಕಾರಣ ಎಂಬ ಭಾವನೆ ಇದೆ. ತಾಯಿಯ ಅನಾರೋಗ್ಯ, ನಿರ್ನಾಳ ಗ್ರಂಥಿಗಳ ತೊಂದರೆಗಳು, ಗರ್ಭಧಾರಣೆಯ ಅವಧಿಯ ಜ್ವರ ಮತ್ತು ದೀರ್ಘ‌ಕಾಲಿಕ ಸಿಫಿಲಿಸ್‌ ಇವು, ಜನ್ಮಜಾತ ಅಥವಾ ನವಜಾತ ಶಿಶು ಹಲ್ಲುಗಳು ಕಾಣಿಸಿಕೊಳ್ಳಲು ಇರುವ ಪೂರಕ ಅಂಶಗಳು ಎಂಬುದಾಗಿ ಕೆಲವು ಬರಹಗಳು ಹೇಳುತ್ತವೆ.

ಪರಿಸ್ಥಿತಿಗೆ ಕಾರಣವಾಗುವ ವಾತಾವರಣದ ಅಂಶಗಳು:
ವಾತಾವರಣದ ಪ್ರಭಾವ: ನವಜಾತ ಶಿಶುಗಳಲ್ಲಿ ಹಲ್ಲುಗಳು ಕಾಣಿಸಿಕೊಳ್ಳಲು ವಾತಾವರಣದ ಪ್ರಭಾವವೂ ಸಹ ಬಹುಮುಖ್ಯ ಪಾತ್ರವನ್ನು ವಹಿಸಬಹುದು. ಪಾಲಿಕ್ಲೋರಿನೇಟೆಡ್‌ ಬೈಫಿನೈಲ್‌ಗ‌ಳು ಪಾಲಿಕ್ಲೋರಿನೇಟೆಡ್‌ ಬೈ ಬೆನೊ-ಟ-ಡೈಆಕ್ಸಿನ್‌ಗಳು ಮತ್ತು ಡೈಬೆನೊಫ್ಯೂರಾನ್‌ಗಳು ಜನ್ಮಜಾತ ಹಲ್ಲುಗಳು ಹುಟ್ಟಲು ಕಾರಣ ಎಂದುಕೊಳ್ಳಲಾಗುತ್ತಿದೆ. ವಿಷಕಾರಕ ಪಾಲಿಹ್ಯಾಲೋಜಿನೇಟೆಡ್‌ ಆರೋಮ್ಯಾಟಿಕ್‌ ಹೈಡ್ರೋಕಾರ್ಬನ್‌ಗಳಾದ ಕಇಆ, ಕಇಈಈ ಮತ್ತು ಕಇಈಊಗಳನ್ನು ಜನ್ಮಜಾತ ಹಲ್ಲುಗಳು ಮೂಡಲು ಇರುವ ಏಕೈಕ ಪರಿಸರದ ಕಾರಣ ಎಂದುಕೊಳ್ಳಲಾಗುತ್ತಿದೆ. ಇವು ಅತ್ಯಂತ ದೊಡ್ಡ ರೀತಿಯ ಪರಿಸರದ ಮಾಲಿನ್ಯಕಾರಕಗಳು. ಅವು ಹೊಕ್ಕುಳ ಬಳ್ಳಿಯನ್ನು ದಾಟಿ ಹೋಗುತ್ತವೆ ಅಲ್ಲದೆ ತಾಯಿಯ ಮೊಲೆಹಾಲಿನಿಂದಲೂ ಮಗುವಿನ ಕೊಬ್ಬು ಅಂಗಾಂಶದಲ್ಲಿ ಸೇರಿಕೊಂಡು ಜನ್ಮಜಾತ ಹಲ್ಲುಗಳ ಹುಟ್ಟುವಿಕೆಗೆ ಕಾರಣವಾಗುತ್ತವೆ.

ಸಂಬಂಧಿತ ರೋಗಪರಿಸ್ಥಿತಿಗಳು:
ಜನ್ಮಜಾತ ಹಲ್ಲುಗಳು ಮತ್ತು ನವಜಾತ ಶಿಶು ಗಳ ಹಲ್ಲುಗಳಿಗೂ ಕೆಲವು ಕಾಯಿಲೆಗಳಿಗೂ ಸಂಬಂಧ ಇದೆ. ಅಂತಹ ರೋಗಸ್ಥಿತಿಗಳು ಎಂದರೆ,
ಎಲ್ಲಿಸ್‌–ವಾನ್‌ ಕ್ರಿವೆಲ್ಡ್‌ (ಕಾಂಡ್ರೋಎಕ್ಟೋಡರ್ಮಲ್‌ ಡಿಸ್ಪಾಸಿಯಾ),
ಜನ್ಮಜಾತ ಪ್ಯಾಚಿಯೋನೈಚಿಯಾ,
ರುಬಿನ್ಸನ್-ಟೈಬಿ,ಸ್ಟೀಟೋಸಿಸ್ಟೋಮಾ ಮಲ್ಟಿಪ್ಲೆಕ್ಸ್‌,
ಪಿಯರೆ-ರಾಬಿನ್‌
ಸೈಕ್ಲೋಪಿಯಾ
ಪಾಲಿಸ್ಟರ್‌-ಹಾಲ್‌
ಶಾಟ್ರಿಬ್‌-ಪಾಲಿಡಾಕ್ಟೆ„ಲಿ (ಟೈಪ್‌ ಐಐ )
ಸೀಳುದುಟಿ- ಸೀಳುಗಳು,

ರೋಗ ಲಕ್ಷಣಗಳು:
ಜನ್ಮಜಾತ ಅಥವಾ ನವಜಾತ ಶಿಶು ಹಲ್ಲುಗಳು ಸಾಮಾನ್ಯವಾಗಿ ಬೇರೆ ಬೇರೆ ಆಕಾರ ಮತ್ತು ಗಾತ್ರಗಳಲ್ಲಿ ಅಂದರೆ ಸಣ್ಣದಾಗಿ, ಮೊನಚಾಗಿ, ಮತ್ತು ಸಹಜ ಹಲ್ಲಿನ ರೀತಿಯಲ್ಲಿ ಇರುವುದಿದೆ. ವಿಕಸನದ ಪ್ರಮಾಣವನ್ನು ಅವಲಂಬಿಸಿಕೊಂಡು ಹಲ್ಲುಗಳ ಆಕಾರ ವ್ಯತ್ಯಾಸಗೊಳ್ಳುವುದಿದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಆ ಹಲ್ಲುಗಳು ಸಡಿಲವಾಗಿರುತ್ತವೆ, ಸಣ್ಣದಾಗಿರುತ್ತವೆ ಮತ್ತು ಮಾಸಲು ಬಣ್ಣದವುಗಳಾಗಿರುತ್ತವೆ ಮತ್ತು ದೋಷಪೂರಿತ ಸಂರಚನೆಯುಳ್ಳವುಗಳಾಗಿರುತ್ತವೆ.

ಈ ಹಲ್ಲುಗಳು ಪೂರ್ತಿ ಬೆಳವಣಿಗೆಯನ್ನು ಹೊಂದಿರದ ಸಣ್ಣ ಬೇರಿನಂತಹ ರಚನೆಯನ್ನು ಹೊಂದಿರುತ್ತವೆ. ಹೆಚ್ಚಿನ ನವಜಾತ ಶಿಶು ಹಲ್ಲುಗಳು ಕಂದು-ಹಳದಿ/ಬಿಳಿ-ಅಪಾರದರ್ಶಕ ಬಣ್ಣದಿಂದ ಕೂಡಿರುತ್ತವೆ. ಅನೇಕ ಸಂದರ್ಭ ಗಳಲ್ಲಿ ಈ ಹಲ್ಲುಗಳ ಬೇರಿನ ಬೆಳವಣಿಗೆಯು ಅಪೂರ್ಣವಾಗಿರುತ್ತದೆ ಅಥವಾ ನ್ಯೂನತೆಯುಳ್ಳದ್ದಾಗಿದ್ದು, ಅವು ಬಾಯಿಯ ಶ್ಲೇಷ್ಮ ಪದರಕ್ಕೆ ಅಂಟಿಕೊಂಡಿರುತ್ತವೆ.

ತೊಂದರೆಗಳು;
ಹಲ್ಲುಗಳ ಬದಿಗಳ ಮೊನಚಾದ ತುದಿಗಳಿಂದಾಗಿ, ನಾಲಿಗೆಯ ಕೆಳ ಪದರದಲ್ಲಿ ಹುಣ್ಣುಗಳಾಗುವುದು ಇದು ನವಜಾತ/ಜನ್ಮಜಾತ ಹಲ್ಲುಗಳಿಂದಾಗಿ ಉಂಟಾಗುವ ಬಹುಮುಖ್ಯ ತೊಂದರೆ. ಇಂತಹ ಪರಿಸ್ಥಿತಿಗೆ ರಿಗಾ-ಫೆಡೆ ಡಿಸೀಸ್‌ ಎಂದು ಕರೆಯುತ್ತಾರೆ. ನವಜಾತ/ಜನ್ಮಜಾತ ಹಲ್ಲುಗಳ ಕಾರಣದಿಂದಾಗಿ ಉಂಟಾಗಬಹುದಾದ ಬಹುಮುಖ್ಯ ಆತಂಕ ಮತ್ತು ತೊಂದರೆ ಅಂದರೆ, ಹಲ್ಲು ಶ್ವಾಸನಾಳಕ್ಕೆ ಹೋಗಬಹುದಾದ ಸಾಧ್ಯತೆ ಅಥವಾ ನುಂಗಿ ಹೋಗಬಹುದಾದ ಸಾಧ್ಯತೆ. ಮಗುವು ಹಾಲನ್ನು ಚೀಪುವಾಗ ಅಡಚಣೆ ಆಗುವುದು, ನೋವಾಗುವುದು ಈ ಪರಿಸ್ಥಿತಿಯಲ್ಲಿ ಉಂಟಾಗುವ ಸಾಮಾನ್ಯ ತೊಂದರೆಗಳು.

ಚಿಕಿತ್ಸೆ:
ಒಂದುವೇಳೆ ಮೂಡಿರುವ ಹಲ್ಲುಗಳು ಅಲುಗಾಡುತ್ತಿದ್ದರೆ, ಅವು ಹಾಲೂಡಿಸಲು ತೊಂದರೆಯನ್ನು ಉಂಟು ಮಾಡಬಹುದು ಅಥವಾ ಆ ಹಲ್ಲುಗಳ ಕಾರಣದಿಂದಾಗಿ ಮಗುವಿನ ನಾಲಗೆಯ ಕೆಳಪದರದಲ್ಲಿ ಹುಣ್ಣುಗಳಾಗಬಹುದು ಮತ್ತು ಅವನ್ನು ಕೀಳುವಂತಹ ಪ್ರಸಂಗ ಬರಬಹುದು. ರೋಗ ಪತ್ತೆ ಮಾಡಲು ತೆಗೆಯಲಾದ ರೇಡಿಯೋಗ್ರಾಫ್ನಲ್ಲಿ, ಅದು ಅವಧಿಗೆ ಮುನ್ನವೇ ಮೂಡಿದ ಹಾಲುಹಲ್ಲು ಎಂಬುದಾಗಿ ಖಚಿತವಾದ ಅನಂತರ ಮಾತ್ರವೆ ಹಲ್ಲನ್ನು ಉಳಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಗುವುದು.

ಒಂದು ವೇಳೆ ಹಲ್ಲನ್ನು ಕೀಳುವುದೇ ಚಿಕಿತ್ಸೆಯ ಆಯ್ಕೆ ಎಂದಾದರೆ, ಈ ಪ್ರಕ್ರಿಯೆಯು ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ ಯಾಕೆಂದರೆ, ಈ ಹಲ್ಲನ್ನು ಇಕ್ಕಳದಲ್ಲಿ ಕೀಳಲಾಗುತ್ತದೆ. ಜನ್ಮಜಾತ ಮತ್ತು ನವಜಾತ ಶಿಶುಗಳ ಹಲ್ಲುಗಳನ್ನು ಕೀಳುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ರಕ್ತಸ್ರಾವವನ್ನು ತಡೆಗಟ್ಟುವುದಕ್ಕಾಗಿ ಮಗುವಿಗೆ ಹತ್ತು ದಿನ ತುಂಬುವವರೆಗೆ ಹಲ್ಲು ಕೀಳುವುದನ್ನು ತಪ್ಪಿಸಲಾಗುತ್ತದೆ ಮತ್ತು ಹಲ್ಲನ್ನು ಕೀಳುವುದಕ್ಕೆ ಮಗುವಿನ ಸಾಮಾನ್ಯ ಆರೋಗ್ಯ ಪರಿಸ್ಥಿತಿಯನ್ನು ಪರಿಗಣಿಸಿ, ಒಸಡಿಗೆ ಅನಾವಶ್ಯಕವಾಗಿ ಹಾನಿಯಾಗುವುದನ್ನು ತಪ್ಪಿಸಲು ಮತ್ತು ಹಲ್ಲನ್ನು ಕೀಳುವ ಸಮಯದಲ್ಲಿ ನುಂಗಿ ಹೋಗದಂತೆ ಎಚ್ಚರಿಕೆ ವಹಿಸುತ್ತಾರೆ ಮತ್ತು ಹಲ್ಲನ್ನು ಕೀಳುವುದಕ್ಕೆ ಮೊದಲು ವಿಟಾಮಿನ್‌-ಕೆಯನ್ನು ನೀಡಲಾಗುತ್ತದೆ. ಮಗುವಿಗೆ ಜನನ ಆದ ಕೂಡಲೆ ವಿಟಾಮಿನ್‌-ಕೆಯನ್ನು ನೀಡುವುದು ಕಡ್ಡಾಯ. ಒಂದು ವೇಳೆ ಕೊಟ್ಟಿಲ್ಲದಿದ್ದರೆ, ರಕ್ತಸ್ರಾವದ ತೊಂದರೆಗಳನ್ನು ತಡೆಯಲು, ಮಗುವಿನ ಆಂತ‌ ಸ್ನಾಯುವಿಗೆ ವಿಟಾಮಿನ್‌-ಕೆ ಯನ್ನು ಚುಚ್ಚಬೇಕು. ಹಲ್ಲನ್ನು ಕೀಳಿಸಿದ ಕೂಡಲೇ ಮಗುವಿಗೆ ಹಾಲೂಡಿಸುವುದನ್ನು ಸಹಜವಾಗಿ ಮುಂದುವರಿಸಬಹುದು. ಮಗುವಿಗೆ ಹಾಲೂಡಿಸುವಾಗ ತಾಯಿಯ ಸ್ತನಗಳಿಗೆ ಗಾಯವಾಗುವುದನ್ನು ತಡೆಯಲು ಹಲ್ಲುಗಳನ್ನು ಕೊಂಚ ನಯಗೊಳಿಸಬಹುದು.

ನವಜಾತ ಶಿಶು ಹಲ್ಲುಗಳು ಅಥವಾ ಜನ್ಮಜಾತ ಹಲ್ಲುಗಳು ಇರುವ ಶಿಶುಗಳ, ಬಾಯಿ, ಹಲ್ಲುಗಳನ್ನು ದಂತವೈದ್ಯರಿಂದ ಕ್ರಮವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಆವಶ್ಯಕ. ಪ್ರತಿ ಬಾರಿ ಮಗುವಿಗೆ ಹಾಲೂಡಿಸಿದ ಬಳಿಕ ಅಥವಾ ದಿನಕ್ಕೆ ಕನಿಷ್ಠ ಎರಡು ಬಾರಿ, ನವಜಾತ ಶಿಶುವಿನ ಎರಡೂ ಒಸಡುಗಳನ್ನು ನಯವಾದ ಬಟ್ಟೆಯಿಂದ ಸ್ವತ್ಛಗೊಳಿಸಬೇಕು.

Comments are closed.