ಕ್ರೀಡೆ

ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲುವು; ನಂ.1 ಪಟ್ಟಕ್ಕೇರಿದ ವಿರಾಟ್ ಪಡೆ

Pinterest LinkedIn Tumblr

ind

ಕೋಲ್ಕತ: ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ 178 ರನ್ ಬೃಹತ್ ಅಂತರದ ಗೆಲುವು ಸಾಧಿಸಿದ ವಿರಾಟ್ ಕೋಹ್ಲಿ ಪಡೆ ಪ್ರಸ್ತುತ ಸರಣಿಯನ್ನು 2-0 ಅಂತರದಲ್ಲಿ ಗೆದ್ದು ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಸ್ಥಾನಕ್ಕೇರಿದೆ.

ಈ ಮೂಲಕ ಭಾರತ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಭಾರತ ಈ ಜಯದೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ನಂ. 1 ಪಟ್ಟಕ್ಕೆ ಏರಿದೆ. ಪಾಕಿಸ್ತಾನವನ್ನು 2 ಸ್ಥಾನಕ್ಕೆ ನೂಕಿದೆ.

ind1

228 ಕ್ಕೆ 8 ವಿಕೆಟ್ನಿಂದ ನಾಲ್ಕನೇ ದಿನದಾಟ ಆರಂಭಿಸಿದ ಭಾರತ ವೃದ್ಧಿಮಾನ್ ಸಾಹಾ (58*) ಗಳಿಸಿದ ಅಜೇಯ ಅರ್ಧಶತಕದ ಬಲದಿಂದ 263 ರನ್ ಗಳಿಸಿ ಆಲೌಟಾಯಿತು. ಆ ಮೂಲಕ ನ್ಯೂಜಿಲೆಂಡ್ಗೆ 376 ರನ್ ಗುರಿ ನೀಡಿತು. ಬೃಹತ್ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ನ ಆರಂಭಿಕ ಆಟಗಾರರು ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಆದರೆ ಭಾರತೀಯ ಬೌಲರ್ಗಳ ಅತ್ಯುತ್ತಮ ಪ್ರದರ್ಶನದಿಂದ ನ್ಯೂಜಿಲೆಂಡ್ 197 ರನ್ಗಳಿಗೆ ಆಲೌಟಾಗುವ ಮೂಲಕ ಸೋಲು ಒಪ್ಪಿಕೊಂಡಿತು.

ಭಾರತದ ಪರ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಶಮಿ, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದರು. ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಅರ್ಧಶತಕದೊಂದಿಗೆ ಅಜೇಯ(54, 58) ಆಟವಾಡಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ  ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನಿಂಗ್ಸ್ 316 ಕ್ಕೆ ಆಲೌಟ್

ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 204 ಕ್ಕೆ ಆಲೌಟ್

ಭಾರತ ಎರಡನೇ ಇನಿಂಗ್ಸ್ 76.5 ಓವರ್ಗಳಲ್ಲಿ 263 ಕ್ಕೆ ಆಲೌಟ್ (ರೋಹಿತ್ ಶರ್ಮಾ 82, ವೃದ್ಧಮಾನ್ ಸಾಹಾ 58*, ಕೊಹ್ಲಿ 45, ಬೋಲ್ಟ್ 38 ಕ್ಕೆ 3)

ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ 81.1 ಓವರ್ಗಳಲ್ಲಿ 197 ಕ್ಕೆ ಆಲೌಟ್ (ಲ್ಯಾಥಮ್ 74, ರೋಂಚಿ 32, ಶಮಿ 46 ಕ್ಕೆ 3, ಜಡೇಜಾ 41 ಕ್ಕೆ 3, ಅಶ್ವಿನ್ 82 ಕ್ಕೆ 3)

Comments are closed.