ಕರ್ನಾಟಕ

ಕಾವೇರಿ ವಿಚಾರವಾಗಿ ತನ್ನ ಆದೇಶ ನಿರಾಕರಿಸುತ್ತಿರುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್: ನೀರು ಬಿಡುವ ಕುರಿತು ಮುಂದೆ ನೀಡಿದ ಸೂಚನೆ ಏನು…?

Pinterest LinkedIn Tumblr

suprim

ನವದೆಹಲಿ: ಕಾವೇರಿ ವಿಚಾರವಾಗಿ ನಾವು ನೀಡುತ್ತಿರುವ ಆದೇಶಗಳನ್ನು ನಿರಾಕರಿಸುವುದನ್ನು ನಿಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.

ಕಾವೇರಿ ವಿಚಾರ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸತತ ಆದೇಶದ ಹೊರತಾಗಿಯೂ ನ್ಯಾಯಾಲಯದ ಆದೇಶವನ್ನು ನಿರಾಕರಿಸುತ್ತಿರುವ ಕರ್ನಾಟಕದ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ತಮಿಳುನಾಡಿಗೆ ನೀರು ಬಿಡುವ ಕುರಿತು ಸೂಕ್ತ ತೀರ್ಮಾನ ಕೈಗೊಂಡು ನಾಳೆ ಮಧ್ಯಾಹ್ನ 2 ಗಂಟೆಯೊಳಗೆ ನ್ಯಾಯಾಲಯಕ್ಕೆ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಇದೇ ವೇಳೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಸಾಧ್ಯವೆಂದು ಹೇಳಿರುವ ಕೇಂದ್ರ ಸರ್ಕಾರದ ಅರ್ಜಿ ಕೂಡ ಇಂದೇ ವಿಚಾರಣೆಗೆ ಬರುವ ಸಾಧ್ಯತೆ ಇದ್ದು, ಕಳೆದ ಸೆ.30ರಂದು ನಿರ್ವಹಣಾ ಮಂಡಳಿ ರಚಿಸುವುದಾಗಿ ಹೇಳಿದ್ದ ಅಟಾರ್ನಿ ಜನರಲ್ ಮುಕಲ್ ರೋಹ್ಟಗಿ ಅವರು ಇಂದು ಕೇಂದ್ರ ಸರ್ಕಾರದ ಪರವಾಗಿ ಅಫಿಡವಿಟ್ ಸಲ್ಲಿಸಿದ್ದು, ಸುಪ್ರೀಂ ಆದೇಶದಂತೆ ನಿರ್ವಹಣಾ ಮಂಡಳಿ ರಚನೆ ಸಾಧ್ಯವಿಲ್ಲ. ನಿರ್ವಹಣಾ ಮಂಡಳಿ ರಚನೆ ಜವಾಬ್ದಾರಿ ಸಂಸತ್ತಿನ ಕರ್ತವ್ಯವಾಗಿದ್ದು, ಉಭಯ ಸದನಗಳ ಅನುಮೋದನೆ ಪಡೆದು ನಿರ್ವಹಣಾ ಮಂಡಳಿ ರಚಿಸಬೇಕಿದೆ ಎಂದು ಹೇಳಿದೆ.

Comments are closed.