ಕರಾವಳಿ

ಉಡುಪಿ: ಜಿಲ್ಲೆಯ 49 ಪ್ರಕರಣಗಳ 28,97,720 ಮೌಲ್ಯದ ಸೊತ್ತು ಹಸ್ತಾಂತರಿಸಿದ ಎಸ್ಪಿ

Pinterest LinkedIn Tumblr

ಉಡುಪಿ: 2016ರ ಜನವರಿಯಿಂದ ಜುಲೈ ತನಕ ಉಡುಪಿ ಜಿಲ್ಲೆಯಲ್ಲಿ ನಡೆದ ಕಳವು ಪ್ರಕರಣದ ಸೊತ್ತುಗಳನ್ನು ಸ್ವಾಧೀನಪಡಿಸಿ ವಾರೀಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಉಡುಪಿ ಜಿಲ್ಲೆಯ ಡಿ.ಆರ್. ಕಚೇರಿಯಲ್ಲಿ ನಡೆಯಿತು.

udupi_theft-case_property-handover-2 udupi_theft-case_property-handover-6 udupi_theft-case_property-handover-4 udupi_theft-case_property-handover-7 udupi_theft-case_property-handover-1 udupi_theft-case_property-handover-3 udupi_theft-case_property-handover-5

7 ತಿಂಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 69 ಪ್ರಕರಣಗಳು ದಾಖಲಾಗಿದ್ದು 1,01,70,692 ಗಳನ್ನು ಕಳವು ಮಾಡಲಾಗಿದೆ. ಈ ಪೈಕಿ ೪೯ ಪ್ರಕರಣಗಳಲ್ಲಿ 49,012,20 ಸೊತ್ತುಗಳ ಪತ್ತೆ ಮಾಡಲಾಗಿದ್ದು ಇಂದು 28,97,720 ರೂ ಮೌಲ್ಯದ ಸೊತ್ತುಗಳನ್ನು ವಾರೀಸುದಾದರಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಟಿ ಬಾಲಕೃಷ್ಣ ಹಸ್ತಾಂತರಿಸಿದರು. ಉಡುಪಿ ಉಪ ವಿಭಾಗದಲ್ಲಿ 36,06,600 ಲಕ್ಷ ರೂ ಮೌಲ್ಯದ ಸೊತ್ತು ಕಳವಾಗಿದ್ದು ಅದರಲ್ಲಿ 20,25,020 ಲಕ್ಷ ರೂ ಮೌಲ್ಯದ ಕಳವು ಪತ್ತೆ ಮಾಡಲಾಗಿದೆ.

ಕುಂದಾಪುರ ವಿಭಾಗದಲ್ಲಿ 23,46,592 ಲಕ್ಷ ರೂ ಮೌಲ್ಯದ ಸೊತ್ತು ಕಳವು ಮಾಡಲಾಗಿದ್ದು ಇದರಲ್ಲಿ 16,53,000 ಮೌಲ್ಯದ ಸೊತ್ತು ಪತ್ತೆ ಮಾಡಲಾಗಿದೆ.

ಇನ್ನು ಕಾರ್ಕಳ ವಿಭಾಗದಲ್ಲಿ 42,17,600 ಲಕ್ಶ ಮೌಲ್ಯದ ಸೊತ್ತು ಕಳವಾಗಿದ್ದು ಇದರಲ್ಲಿ 12,23,200 ಲಕ್ಷ ಮೌಲ್ಯದ ಸೊತ್ತು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾ ಎಸ್.ಪಿ. ಕೆ.ಟಿ ಬಾಲಕೃಷ್ಣ ಮಾಹಿತಿ ನೀಡಿದರು.

Comments are closed.