ಆರೋಗ್ಯ

ಸದೃಡ ಆರೋಗ್ಯಕ್ಕಾಗಿ ಮೂಸಂಬಿ ಜ್ಯೂಸ್

Pinterest LinkedIn Tumblr

sweetlime_juice_pic

ಆರೋಗ್ಯ ಸಲಹೆ : ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ಹೆಚ್ಚಿನವರಿಗೆ ಕಾಳಜಿಯ ವಿಷಯವಾಗಿದ್ದು, ಇನ್ನು ಕೆಲವರಿಗೆ ಹಣ ದೋಚುವ ಒಂದು ಅವಕಾಶವೂ ಆಗಿದೆ! ಆದರೆ ದುಬಾರಿ ಬೆಲೆಯ ತೂಕವಿಳಿಸುವ ಮಳಿಗೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಸುಲಭ ಆಹಾರಗಳ ಮೂಲಕವೂ ಸಾಧಿಸಬಹುದು.ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಗಟ್ಟಿ ಮನಸ್ಸು ಮಾತ್ರ. ಇನ್ನುಳಿದದ್ದು ಕಿತ್ತಳೆ, ಲಿಂಬೆ ಅಥವಾ ಮೂಸಂಬಿಯ ಜ್ಯೂಸ್ ಮಾತ್ರ.

ಶೀಘ್ರವಾಗಿ ತೂಕವಿಳಿಸಲು ಲಿಂಬೆ ಅತ್ಯುತ್ತಮವಾದರೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹಕ್ಕೆ ಇತರೆಡೆ ಹಾನಿ ಎಸಗುವ ಕಾರಣ ಇದರ ಬಳಿಕದ ಮೂಸಂಬಿ ಜ್ಯೂಸ್ ಉತ್ತಮ ಆಯ್ಕೆಯಾಗಿದೆ. ಮೂಸಂಬಿ ಜ್ಯೂಸ್ ಸುಲಭವಾಗಿ ಜೀರ್ಣಗೊಳ್ಳುವ ಕಾರಣ ರೋಗಿಗಳಿಗೆ ಕುಡಿಯಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಅದ್ಭುತ ಜ್ಯೂಸ್! ದಿನಕ್ಕೆರಡು ಲೋಟ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ದ್ರವ, ವಿಟಮಿನ್ ಸಿ ದೊರಕುವ ಮೂಲಕ ದೇಹಕ್ಕೆ ಪೋಷಣೆ ಲಭಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಕಾಮಾಲೆ ರೋಗವನ್ನು ನಿವಾರಿಸುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಎಲ್ಲಾ ಕೆಲಸಗಳಿಗೆ ಮೂಸಂಬಿ ಜ್ಯೂಸ್ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಬಳಸುವುದೇ ತೂಕ ಇಳಿಸುವ ರಹಸ್ಯವಾಗಿದೆ.

ತಲೆಕೂದಲಿನ ಆರೈಕೆಗೆ ಮೂಸ೦ಬಿ ಹಣ್ಣಿನ ರಸವು ಪರಿಣಾಮಕಾರಿಯಾಗಿದ್ದು, ದೇಹದ ತೂಕವನ್ನು ಸುಲಭವಾಗಿ ಮತ್ತು ಆರೋಗ್ಯಕರವಾಗಿ ಇಳಿಸಲು ನಿತ್ಯವೂ ಕೆಲವು ಹನಿ ಸೇರಿಸಿದ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

Write A Comment