ಯುಎಇ: ಯುನೈಟೆಡ್ ಅರಬ್ ಎಮಿರೇಟ್ಸ್ನ (ಸಂಯುಕ್ತ ಅರಬ್ ಸಂಸ್ಥಾನ) ರಾಸ್ ಅಲ್ ಖೈಮಾದಲ್ಲಿರುವ ರಾಕ್ ಕರ್ನಾಟಕ ಸಂಘ ಯುಎಇ (RAK Karnataka Sangha UAE) ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು ನ.21 ಶನಿವಾರ 4 ಗಂಟೆಗೆ ರಾಸ್ ಅಲ್ ಖೈಮಾ ಅಲ್ ನಖೀಲ್ನ ಇಂಡಿಯನ್ ಅಸೋಸಿಯೇಶನ್ ಹಾಲ್ನಲ್ಲಿ ಎಸ್.ಜಾನಕಿ ಸ್ಮರಣೆಯಲ್ಲಿ ‘ಕರ್ನಾಟಕ ರಾಜ್ಯೋತ್ಸವ’ ಆಚರಣೆ ಸಂಭ್ರಮದಲ್ಲಿ ಜೀ ಕನ್ನಡ ಸರಿಗಮಪ ಖ್ಯಾತಿಯ ರಜಿಯಾ ಹಾಗೂ ಇತರ ಹಲವು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ರಜಿಯಾ ಅವರಿಂದ ಗಾನಾಮೃತ ಹಾಗೂ ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ಅವರಿಂದ ಗಾನ ಲಹರಿ ನಡೆಯಲಿದೆ.

ಈ ಕಾರ್ಯಕ್ರದಲ್ಲಿ ‘ರಾಷ್ಟ್ರಕವಿ ಕುವೆಂಪು ರತ್ನ ಪ್ರಶಸ್ತಿ’-2026ನ್ನು ತುಂಬೆ ಗ್ರೂಫ್ ಆಫ್ ಯುಎಇ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯಿದ್ದೀನ್ ಅವರಿಗೆ ಪ್ರದಾನಿಸಲಾಗುತ್ತದೆ. ಜಾನಕಿ ಅಮ್ಮನವರ ನಮನ ಕಾರ್ಯಕ್ರಮವೂ ನಡೆಯಲಿದೆ. ರಾಕ್ ಕರ್ನಾಟಕ ಸಂಘ ಗಲ್ಫ್ ಸಾಧಕರು ಅವಾರ್ಡ್-2026ನ್ನು ಯುಎಇ ಸಮಾಜಸೇವಕಿ ಛಾಯಾದೇವಿ ಕೃಷ್ಣಮೂರ್ತಿ, ರಾಕ್ ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ರಮೇಶ್ ರಂಗಪ್ಪ ಅವರಿಗೆ ಪ್ರದಾನಿಸಲಾಗುತ್ತದೆ.
Comments are closed.