ದುಬೈ: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ದುಬೈ ಯುಎಇ ಇದರ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜಾ ವೃತ, ದುಬೈಯ ಸ್ಪ್ರಿಂಗ್ ಡೇಲ್ ಸಭಾಂಗಣದಲ್ಲಿ ಅತ್ಯಂತ ವೈಭವದಿಂದ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.

ಅತ್ಯಾಕರ್ಷಕ ಪುಷ್ಪಲಂಕಾರದ ಮಂಟಪದಲ್ಲಿ ತಾಯಿ ವರಮಹಾಲಕ್ಷ್ಮಿಯ ಕಲಶ ಪ್ರತಿಷ್ಟಾಪನೆಯೊಂದಿಗೆ ಆರಂಭಗೊಂಡ ಪೂಜೆ, ಶ್ರೀ ರಾಜರಾಜೇಶ್ವರಿ ಭಜನಾ ವೃಂದ ಯುಎಇ ಯ ಸದಸ್ಯರ ಭಕ್ತಿಭಾವದ ಭಜನೆ ಸಂಕೀರ್ತನೆ ಸೇರಿದ ಭಕ್ತ ಸಮೂಹಕ್ಕೆ ಭಕ್ತಿ ತನ್ಮಯದ ಲೋಕವನ್ನು ಸೃಷ್ಟಿ ಮಾಡಿತು.
ಶ್ರೀ ರಘು ಭಟ್ ಇವರ ಪೌರಾಹಿತ್ಯದ ಸಾರಾತ್ಯದಲ್ಲಿ, ಪೂಜೆಯಲ್ಲಿ ಪಾಲ್ಗೊಂಡ ನೂರಾರು ಸುಮಂಗಲಿಯರಿಂದ ಶ್ರೀ ವರಮಹಾಲಕ್ಷ್ಮಿ ತಾಯಿಗೆ ಸಾಮೂಹಿಕ ಕುಂಕುಮಾರ್ಚನೆ ಸೇವೆ ನೆರವೇರಿತು.
ನಂತರ ಪುಟಾಣಿ ಮಕ್ಕಳಿಂದ, ಯುವಕ ಯುವತಿಯರಿಂದ ಹಾಗೂ ಸುಮಂಗಲಿಯರಿಂದ ನಡೆದ ಆಕರ್ಷಕ ಕುಣಿತ ಭಜನೆ ಸೇರಿದ ಸಮಸ್ತ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಮಹಾಮಂಗಳಾರತಿಯ ನಂತರ, ಶ್ರೀ ವರಮಹಾಲಕ್ಷ್ಮಿ ಪೂಜೆಯ ಸಲುವಾಗಿ ನಡೆದ ಸನಾತನ ಧಾರ್ಮಿಕತೆಯ ವಿಷಯದಲ್ಲಿ ನಡೆದ ವಿವಿಧ ಪೌರಾಣಿಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗ, ಗೌರವಾನ್ವಿತ ಅಥಿತಿಗಳು ಬಹುಮಾನ ವಿತರಿಸಿ ಗೌರವಿಸಿದರು.
ಸೇರಿದ ಸಮಸ್ತ ಭಕ್ತಭಿಮಾನಿಗಳಿಗೆ ತೀರ್ಥಪ್ರಸಾದ ಹಾಗೂ ಮಹಾಪ್ರಸಾದವನ್ನು ವಿತರಿಸಲಾಯಿತು.
Comments are closed.