UAE

‘ದುಬೈ ಯಕ್ಷೋತ್ಸವ-2024’ದಲ್ಲಿ ಕಟೀಲು ತಾಯಿ ಆರಾಧನೆ ‘ದಾಶರಥಿ ದರ್ಶನ’ ಕನ್ನಡ ಪೌರಾಣಿಕ ಯಕ್ಷಗಾನಕ್ಕೆ ಕ್ಷಣಗಣನೆ

Pinterest LinkedIn Tumblr

ದುಬೈ: ಇದೇ ಬರುವ 2024 ಜೂನ್ 9, ಆದಿತ್ಯವಾರ ದಂದು ನಡೆಯಲಿರುವ ವೈಭವದ *ದುಬಾಯಿ ಯಕ್ಷೋತ್ಸವಕ್ಕೆ – ಯುಎಇ ಯ ಹೆಮ್ಮೆಯ ಕಲಾ ಪ್ರಸರಣದ ಸಂಸ್ಥೆ- “2024 ರ ಯಕ್ಷಧ್ರುವ ಪಟ್ಲ ಕಲಾ ಪ್ರಶಸ್ತಿ” ವಿಜೇತ ಸಂಸ್ಥೆ *ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ.* ಅಚ್ಚುಕಟ್ಟಾದ ವ್ಯವಸ್ಥೆ – ಕಾರ್ಯಕರ್ತರ- ಕಾರ್ಯಕಾರಿ ಸಮಿತಿಗಳ ಪೂರ್ವತಯಾರಿ ಸಭೆಗಳನ್ನು ಈಗಾಗಲೆ ಮುಗಿಸಿಕೊಂಡಿದೆ.

ಯಕ್ಷ ಶ್ರೀ ರಕ್ಷ ಗೌರವ ಪ್ರಶಸ್ತಿ 2024 -ಈ ಬಾರಿಯ “ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ” ಪುತಸ್ಕೃತರು ಸ್ಥಳೀಯ ಹಿರಿಯ ಕಲಾವಿದರಾದ ವೆಂಕಟೇಶ ಶಾಸ್ತ್ರಿ ಪುತ್ತಿಗೆಯವರು, ಯಕ್ಷಧ್ರುವ ಪಟ್ಲ ಘಟಕದ ಪ್ರದಾನ ಸಂಚಾಲಕರಾದ ಶಶಿಧರ ಶೆಟ್ಟಿ ಬರೋಡ, ಮತ್ತು ಯುಎಇ ಯ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲು, ಯಕ್ಷಗಾನ ಅಭ್ಯಾಸ ಕೇಂದ್ರ ನಿರ್ಧರಿಸಿಕೊಂಡಿದೆ.

“ದಾಶರಥಿ ದರ್ಶನ” ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನ – ಯಕ್ಷಗಾನ ಅಭ್ಯಾಸ ಕೇಂದ್ರ, ಯುಎಇಯ ಬಾಲ-ಯುವ- ಪರಿಣತ-ಪ್ರೌಢ ಕಲಾವಿದರ ಸಹಿತ ಅಪಾರ ಜನಮನ್ನಣೆ – ಯುವಜನಾಂಗದ ಆಕರ್ಷಣೆಯ ಕೇಂದ್ರಬಿಂದುವೆನಿಸಿದ ಯಕ್ಷಧ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ಸಿರಿಕಂಠದ ಗಾನಸಾರಥ್ಯ, ಮಹಿಳಾ ಭಾಗವತರಲ್ಲಿ ಅಗ್ರಶ್ರೇಣಿಯಲ್ಲಿರುವ ಶ್ರೀಮತಿ ಭವ್ಯಶ್ರೀ ಹರೀಶ್ ಕುಲ್ಕುಂದರವರ ಗಾನಸುಧೆ, ಜೊತೆಗೆ ತಂಡದ ಯುವ ಭಾಗವತ ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಯುವ ಪ್ರಖ್ಯಾತ ಮದ್ದಳೆಗಾರರಾದ ಶ್ರೀ ಮಯೂರ ನಾಯ್ಗ, ಶ್ರೀ ಸವಿನಯ ನೆಲ್ಲಿತೀರ್ಥರ ಸಾಂಗತ್ಯದೊಂದಿಗೆ ಅಭೂತಪೂರ್ವ ಪ್ರದರ್ಶನಕ್ಕೆ ಸರ್ವ ಸಿದ್ಧತೆಗಳೂ ನಡೆದಿವೆ. ಶ್ರೀಮತಿ ಭವ್ಯಶ್ರೀಯವರ ಸುಕುಮಾರ ಅಗಸ್ತ್ಯ ಕುಲ್ಕುಂದ ಚಕ್ರತಾಳದಲ್ಲಿ ಕಾಣಿಸಿಕೊಳ್ಳುವ ಹುರುಪಿನಲ್ಲಿದ್ದಾರೆ. ಅಲ್ಲದೆ ಆಕರ್ಷಕ ವರ್ಣ – ವಸ್ತ್ರಾಲಂಕಾರ, ಝಗಮಗಿಸುವ ವೇಷಭೂಷಣಗಳೊಂದಿಗೆ ಪ್ರಸಾಧನ ಕಲೆಯಲ್ಲಿ ಸಿದ್ಧಹಸ್ತರಾದ, ಕಿನ್ನಿಗೋಳಿ ಮೋಹಿನೀ ಕಲಾ ಸಂಪದದ ಕಲಾವಿದರಾದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ, ಮನೋಜ್ ಶೆಟ್ಟಿಗಾರ್ ಹಳೆಯಂಗಡಿ ಮೊದಲಾದವರು ಈಗಾಗಲೇ ದುಬಾಯಿ ತಲುಪಿ ಭರದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಕಾರ್ಯಕರ್ತರ ಬಳಗದಲ್ಲಿರುವ ಎಕ್ಸ್ ಪರ್ಟ್ ಸೆಟ್ಟಿಂಗ್ ಕಲಾವಿದರು ವೈಭವದ ಸೆಟ್ಟಿಂಗ್ ಗಳ ಸಿದ್ಧತೆಯನ್ನು ಪೂರ್ಣಗೊಳಿಸಿದ್ದಾರೆ. ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ ಶೆಟ್ಟಿ ಕೊಟ್ಟಿಂಜರವರ ನೇತೃತ್ವದಲ್ಲಿ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಶರತ್ ಕುಡ್ಲರವರ ನಿರ್ದೇಶನದಲ್ಲಿ, ಕೇಂದ್ರದ ಎಲ್ಲಾ ಹಿರಿಯ -ಕಿರಿಯ ಕಲಾವಿದರು ಪೂರ್ಣ ಪ್ರಮಾಣದ ಪ್ರದರ್ಶನಕ್ಕೆ ಸರ್ವಸಿದ್ಧತೆಯಲ್ಲಿದ್ದಾರೆ, ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಭ್ಯಾಸ ಕೇಂದ್ರದ ಮೀಡಿಯ-ಪ್ರಚಾರಗಳ ಸಂಯೋಜಕರಾದ ಗಿರೀಶ್ ನಾರಾಯಣ್ ಕಾಟಿಪಳ್ಳರವರು ತಿಳಿಸಿದ್ದಾರೆ.

ಕಾರ್ಯಕ್ರಮ ನಡೆಯುವ ಸ್ಥಳ, ದುಬೈಯ ಶೇಖ್ ರಷೀದ್ ಸಭಾಂಗಣ, ದುಬಾಯಿಯ ಕೇಂದ್ರ ಸ್ಥಾನವಾದ ಕರಮ – ಊದ್ ಮೇತಾ ಮೆಟ್ರೋ ಸ್ಟೇಶನ್ ಪಕ್ಕದಲ್ಲಿದೆ, ಮೆಟ್ರೋ, ಬಸ್ಸು, ದುಬಾಯಿಯ ಎಲ್ಲಾ ಕಡೆಗೂ ಸುಲಭ ವಾಹನದ ವ್ಯವಸ್ಥೆ ಇರುವ, 1500 ಆಸನಗಳನ್ನು ಹೊಂದಿರುವ ಏಕಮಾತ್ರ ಸುಸಜ್ಜಿತ ಸಭಾಂಗಣವಿದು. ಈಗಾಗಲೇ ಕೆಲವೇ ಕೆಲವು ಟಿಕೆಟ್ ಗಳು ಮಾತ್ರ ಬಾಕಿ ಇರುವುದರಿಂದ “ದುಬಾಯಿ ಯಕ್ಷೋತ್ಸವ 2024- ದಾಶರಥಿ ದರ್ಶನ” ದ ಸಂಭ್ರಮವನ್ನು ನೋಡಲಿಚ್ಚಿಸುವವರು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು. 0507083537, 0529157825, 0553912535

ವೇಳಾಪಟ್ಟಿ:
ಅಪರಾಹ್ನ 2.00 ಕ್ಕೆ ಸರಿಯಾಗಿ ಗೇಟ್ ಓಪನ್
2.00 ಕ್ಕೆ ಸರಿಯಾಗಿ ಚೌಕಿ ಪೂಜೆ
2.15 ಕ್ಕೆ ಸರಿಯಾಗಿ ಪೂರ್ವರಂಗ ಆರಂಭ
2.35 ಕ್ಕೆ ಸರಿಯಾಗಿ ದೀಪ ಪ್ರಜ್ವಲನೆ
2.45ಕ್ಕೆ ಪ್ರಸಂಗಾರಂಭ – ವಿಶೇಷ ಸೆಟ್ಟಿಂಗ್ ಸಹಿತ
5.45ಕ್ಕೆ ಚುಟುಕಾದ ಸಭಾಕಾರ್ಯಕ್ರಮ – ಪ್ರಶಸ್ತಿ ವಿತರಣೆ- ಸನ್ಮಾನ
6.15ಕ್ಕೆ ಪ್ರಸಂಗ ಪುನರಾರಂಭ
9.15ಕ್ಕೆ ಮಂಗಲಾಚರಣೆ -ಕಲಾವಿದರ ಪರಿಚಯ- ಅನ್ನ ಸಂತರ್ಪಣೆ.ಎಲ್ಲರೂ ಬನ್ನಿ – ಸ್ವಾಗತ.

Comments are closed.