UAE

ಯಕ್ಷ ಮಿತ್ರರು ದುಬೈಯ 21ನೇ ವರ್ಷದ ‘ಯಕ್ಷ ಸಂಭ್ರಮ-2024’ ಅಂಗವಾಗಿ ಪ್ರದರ್ಶನಗೊಳ್ಳಲಿರುವ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನದ ಮುಹೂರ್ತ ಪೂಜೆ

Pinterest LinkedIn Tumblr

ದುಬೈ: ಯಕ್ಷ ಮಿತ್ರರು ದುಬೈ ಇವರ 21ನೇ ವರ್ಷದ “ಯಕ್ಷ ಸಂಭ್ರಮ – 2024” ಕಾರ್ಯಕ್ರಮದ ಅಂಗವಾಗಿ ದುಬೈನಲ್ಲಿ ಪ್ರದರ್ಶನಗೊಳ್ಳಲಿರುವ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನದ ಮುಹೂರ್ತ ಪೂಜೆ ಇತ್ತೀಚೆಗೆ ನಗರದ ಒಮೇಗಾ ಹೋಟೆಲ್ ನ ಸಭಾಂಗಣದಲ್ಲಿ ನಡೆಯಿತು.

ವಾಸುದೇವ ಭಟ್ ಪುತ್ತಿಗೆ ಮತ್ತು ಲಕ್ಷ್ಮಿಕಾಂತ್ ಭಟ್ ಇವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಮೊಗವೀರ್ಸ್ ದುಬೈ ಭಜನ ತಂಡದವರಿಂದ ಭಜನೆ ಕಾರ್ಯಕ್ರಮ ನಡೆಯಿತು. ಯಕ್ಷಗಾನ ಪ್ರಸಂಗದ ಹೆಸರನ್ನು ವಾಸುದೇವ ಭಟ್ ಪುತ್ತಿಗೆಯವರು ಲೋಕಾರ್ಪಣೆಗೊಳಿಸಿ ಕಲಾವಿದರಿಗೆ ಶುಭವನ್ನು ಹಾರೈಸಿದರು.

ಗುರುಗಳಾದ ಕಿಶೋರ್ ಗಟ್ಟಿ ನೇತೃತ್ವದಲ್ಲಿ ಭಾಗವತರಾದ ಕೃಷ್ಣ ಪ್ರಸಾದ್ ರಾವ್ ಹಾಗೂ ವೆಂಕಟೇಶ್ ಶಾಸ್ತ್ರಿ, ಭಾವನಿ ಶಂಕರ್ ಶರ್ಮಾ ಇವರ ಹಿಮ್ಮೇಳ ಸಹಕಾರದೊಂದಿಗೆ ಯಕ್ಷಗಾನ ಪ್ರವೇಶ ಮತ್ತು ದೇವೆಂದ್ರನ ಒಡ್ಡೊಳಗದ ಪ್ರದರ್ಶನದ ಮೂಲಕ ಯಕ್ಷಗಾನ ಪ್ರಸಂಗ ಅಭ್ಯಾಸಕ್ಕೆ ಚಾಲನೆಯನ್ನು ನೀಡಿದರು.

ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಯುಎಇಯ ಯಕ್ಷ ಅಭಿಮಾನಿಗಳು ಹಾಗೂ ಯಕ್ಷ ಮಿತ್ರರು ತಂಡದ ಚಿದಾನಂದ ಪೂಜಾರಿ ಮತ್ತು ಕಲಾವಿದರು, ಸದಸ್ಯರು, ಸದಸ್ಯೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಯಕ್ಷ ಸಂಭ್ರಮ- 2024 ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಸದ್ಯದಲ್ಲಿ ಪ್ರಕಟಿಸಲಾಗುವುದು ಕಾರ್ಯಕ್ರಮದ ಸಂಘಟಕರು ತಿಳಿಸಿದರು.

ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Comments are closed.