UAE

ಯೂನೂಸ್ ಖಾಝಿಯ ಭಟ್ಕಳ, ಮೊಹಮ್ಮದ್ ಆಸೀಫ್ ಕುಂದಾಪುರ ಅವರಿಗೆ ‘ವಿಶ್ವ ಮಾನ್ಯ ಅಂತರಾಷ್ಟ್ರೀಯ ಪ್ರಶಸ್ತಿ-2024’

Pinterest LinkedIn Tumblr

ಕುಂದಾಪುರ: ಸೆಂಟ್ ಸಾಂಸ್ಕೃತಿಕ ಸಂಸ್ಥೆ ದುಬೈ ಮತ್ತು ಅಂತರರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ( ಇಂಡಿ ) ಮಂಗಳೂರು ಸಂಯುಕ್ತವಾಗಿ 18 ಫೆಬ್ರವರಿ 2024 ರಂದು ದುಬೈನ ಅಲ್ ಕುಸಿಸ್ ನಲ್ಲಿರುವ ಫಾರ್ಚೂನ್ ಪ್ಲಾಝಾ ಸಭಾಂಗಣದಲ್ಲಿ 2 ನೇ ದಿನದ 17 ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ
ಇಬ್ಬರು ಉದ್ಯಮಿಗಳಿಗೆ ವಿಶ್ವ ಮಾನ್ಯ ಅಂತರರಾಷ್ಟ್ರೀಯ ಪ್ರಶಸ್ತಿ-2024 ನೀಡಿ ಗೌರವಿಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ.

ಯೂನೂಸ್ ಖಾಝಿಯ ಭಟ್ಕಳ:
ಅನಿವಾಸಿ ಭಾರತೀಯರಾಗಿರುವ ಭಟ್ಕಳದ
ಹೆಸರಾಂತ ಅಂಜುಮಾನ್ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಸದಸ್ಯರು, ಸನ್ ಸಿಟಿ ಅರೇಬಿಯ ಮತ್ತು ಪಾರ್ಟ್ ನರ್ಸ್ ಟ್ರೇಡಿಂಗ್ ಕಂಪೆನಿಯ ಮುಖ್ಯಸ್ಥರು, ಭಟ್ಕಳ ಕರಾವಳಿ ಕರ್ನಾಟಕ ಎನ್.ಆರ್.ಐ ಫೋರಂನ ಅಧ್ಯಕ್ಷರಾಗಿರುವ ಯೂನೂಸ್ ಖಾಝಿ ಅವರಿಗೆ ಸಮಾಜ ಸೇವೆ,ಶಿಕ್ಷಣ ಕ್ಷೇತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ ವಿಶ್ವ ಮಾನ್ಯ ಪ್ರಶಸ್ತಿ 2024 (ಗ್ಲೋಬಲ್ ಮ್ಯಾನ್ ಅವಾರ್ಡ್- 2024) ನೀಡಿ ಗೌರವಿಸಲಾಗುತ್ತದೆ ಎಂದು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷರಾದ ಕೆ.ಪಿ. ಮಂಜುನಾಥ ಸಾಗರ್ ತಿಳಿಸಿದ್ದಾರೆ.

ಮೊಹಮ್ಮದ್ ಆಸೀಫ್ ಕುಂದಾಪುರ:
ಸೌದಿ ಅರೇಬಿಯದ ಅಲ್ ಮಿರ್ಝ ಕಾಂಟ್ರಕ್ಟಿಂಗ್ ಕಂಪೆನಿಯ ವ್ಯವಸ್ಥಾಪಕ, ಮಿಜಾರು ಆದರ್ಶ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ, ಸೌದಿ ಅರೇಬಿಯದ ಹಿದಾಯ ಫೌಂಡೇಶನ್ ಸದಸ್ಯರಾಗಿರುವ ಮೊಹಮ್ಮದ್ ಆಸೀಫ್ ಅವರಿಗೆ ಬಡ ಹೆಣ್ಣು ಮಕ್ಕಳ ಉಚಿತ ಮದುವೆ, ಕೋವಿಡ್ ಸಮಯದಲ್ಲಿ ಮಾನವೀಯ ಸೇವೆ ಸೇರಿದಂತೆ ಸಮಾಜ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ ವಿಶ್ವ ಮಾನ್ಯ ಪ್ರಶಸ್ತಿ 2024 (ಗ್ಲೋಬಲ್ ಮ್ಯಾನ್ ಅವಾರ್ಡ್- 2024)ನ್ನು ನೀಡಿ ಗೌರವಿಸಲಾಗುತ್ತದೆ ಎಂದು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷರಾದ ಕೆ.ಪಿ ಮಂಜುನಾಥ ಸಾಗರ್ ತಿಳಿಸಿದ್ದಾರೆ.

ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆಯನ್ನು ಅನಿವಾಸಿ ಕನ್ನಡಿಗರಲ್ಲಿ ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಕರ್ನಾಟಕದಿಂದ ಕಲಾವಿದರು, ಸಾಹಿತಿಗಳು ಭಾಗವಹಿಸುತ್ತಿದ್ದು ಈ ಸಮ್ಮೇಳನವನ್ನು 2004 ರಿಂದ ವಿವಿಧ ದೇಶಗಳಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಮ್ಮೇಳನ ಸಮಿತಿ ತಿಳಿಸಿದೆ.

Comments are closed.