ಕರಾವಳಿ

19ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಕೋಟ ಏಜುಕೇರ್ ಅಬಾಕಸ್ ಸೆಂಟರ್‌ನ ವಿದ್ಯಾರ್ಥಿ ಅಧ್ವಿತ್ ಪಿ. ಹಂದಟ್ಟು ಪ್ರಥಮ ಸ್ಥಾನ

Pinterest LinkedIn Tumblr

ಕುಂದಾಪುರ: ಐಡಿಯಲ್ ಪ್ಲೇ ಅಭಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕೊಯಮುತ್ತೂರಿನಲ್ಲಿ ನಡೆದ 19ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು 15 ನೇ ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ಕೋಟ ಎಜುಕೇರ್ ಅಬಾಕಸ್ ಸೆಂಟರ್ ವಿದ್ಯಾರ್ಥಿ ಅಧ್ವಿತ್ ಪಿ. ಹಂದಟ್ಟು ಇವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಈ ಸ್ಪರ್ಧಾ ಕೂಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ 2200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಅಧ್ವಿತ್ ಪಿ ಹಂದಟ್ಟು ತಮ್ಮ ವಯಸ್ಸಿನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

2023ರ ಅಕ್ಟೋಬರ್ 29ರಂದು ಹಾಸನದಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಅಧ್ವಿತ್ ಪಿ. ಹಂದಟ್ಟು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇದೀಗ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಬ್ರಹ್ಮಾವರದ ಜಿ.ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನ ಒಂದನೇ ತರಗತಿ ವಿದ್ಯಾರ್ಥಿ ಆಗಿರುವ ಅಧ್ವಿತ್ ಪಿ. ಹಂದಟ್ಟುವಿಗೆ ಐಡಿಯಲ್ ಪ್ಲೇ ಅಭಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಕೋಟ ಎಜುಕೇರ್ ಅಬಾಕಸ್ ಸೆಂಟರ್ ನ ಶಿಕ್ಷಕರಾದ ಪ್ರಸನ್ನ ಕೆ.ಬಿ ಹಾಗೂ ಸುಪ್ರೀತಾ ಎಸ್. ಮೊಗವೀರ ಇವರು ತರಬೇತಿ ನೀಡಿದ್ದು, ಕೋಟ ಎಜುಕೇರ್ ಅಬಾಕಸ್ ಸೆಂಟರ್ ಸ್ಥಾಪಕ ಅಧ್ಯಕ್ಷ ಚೇತನ್ ಎಮ್. ಇವರು ಸಹಕಾರ ನೀಡಿದ್ದಾರೆ.

Comments are closed.