ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಪ್ರಾಯೋಜಿತ 2023-24ನೇ ಸಾಲಿನ “ನೂತನ ಯಕ್ಷಗಾನ ಅಭ್ಯಾಸ ತರಗತಿಗಳ ಶುಭಾರಂಬ ಮತ್ತು ಗುರುಪೂಜೆ – ಗುರುವಂದನೆ” ಕಾರ್ಯಕ್ರಮವು ಜುಲೈ 9 ರಂದು ಗೀಸೈಸ್ ನ ಫಾರ್ಚೂನ್ ಪ್ಲಾಝದ ಬಾಂಕ್ವೆಟ್ ಸಭಾಂಗಣದಲ್ಲಿ ಜರುಗಿತು. 

ಪುತ್ತಿಗೆ ವೆಂಕಟೇಶ ಶಾಸ್ತ್ರೀ ಮತ್ತು ಶಿವ ಭಟ್ಟ್ ಪೌರೋಹಿತ್ಯದಲ್ಲಿ ಚೌಕಿ ಪೂಜೆಯೊಂದಿಗೆ ಮತ್ತು ಅಭ್ಯಾಸ ಕೇಂದ್ರದ ಸದಸ್ಯರ ಸದಸ್ಯೆಯರಿಂದ ಭಜನೆ ಕಾರ್ಯಕ್ರಮದ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.
ನೂತನ ಯಕ್ಷಗಾನ ಅಭ್ಯಾಸ ತರಗತಿಯ ಉದ್ಘಾಟನೆಯನ್ನು ಭೀಮಾ ಜ್ಯುವೆಲರ್ಸ್ ನ ಯಂ.ನಾಗರಾಜ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ 2023-24 ನೇ ಸಾಲಿನ ತರಗತಿಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಗುರುಗಳಿಗೆ ಶುಭವನ್ನು ಹಾರೈಸಿದರು.
ಯಕ್ಷಗಾನ ಅಭ್ಯಾಸ ಕೇಂದ್ರದ ವೆಂಕಟೇಶ ಶಾಸ್ತ್ರೀ, ಭವಾನಿಶಂಕರ ಶರ್ಮಾ, ಗಿರೀಶ್ ನಾರಾಯಣ್, ಬಾಲಕೃಷ್ಣ ಶೆಟ್ಟಿ ಮಾಡೂರು, ಯಕ್ಷಗಾನ ಗುರುಗಳಾದ ಶೇಖರ್ ಶೆಟ್ಟಿಗಾರ್, ಶರತ್ ಕುಡ್ಲ ಉಪಸ್ಥಿತರಿದ್ದರು.
ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಶಿಷ್ಯ ವೃಂದದವರಿಂದ ಗುರು ಶೇಖರ್ ಶೆಟ್ಟಿಗಾರ್ ರವರಿಗೆ ಗುರು ವಂದನೆ ಕಾರ್ಯಕ್ರಮ ನಡೆಯಿತು. ನಂತರ “ಆದಿ ಕಾವ್ಯದ ಭೌಮಗುರು” ಎಂಬ ಯಕ್ಷಗಾನ ನಾಟ್ಯವೈಭವ, ಗಾನ ವಂದನೆ- ಗುರುಸ್ತುತಿ ಮತ್ತು ಪೂರ್ವರಂಗದ ಪದ್ಯಗಳು- ಭಾಗವತಿಕೆ ವಿದ್ಯಾರ್ಥಿಗಳಿಂದ ಜರುಗಿತು. ಕೊನೆಗೆ ಮಹಾ ಮಂಗಳಾರತಿ, ಅನ್ನ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಗಿರೀಶ್ ನಾರಾಯಣ್ ಧನ್ಯವಾದವಿತ್ತರು.
ಬೇರೆ,ಬೇರೆ ಹಂತಗಳಲ್ಲಿ ನುರಿತ ಅಧ್ಯಾಪಕರಿಂದ ತರಬೇತಿ. ಯುಎಇ ಕರಾವಳಿಯ ನಿವಾಸಿಗಳಿಗೆ ಸುವರ್ಣಾವಕಾಶ:
ಯಕ್ಷಗಾನ ಹಿಮ್ಮೇಳ – ಮುಮ್ಮೇಳ ವಿಶೇಷ ಅಭ್ಯಾಸ ತರಗತಿಗಳು:
ಪ್ರಾಥಮಿಕ ಹೆಜ್ಜೆಗಳು-ಪ್ರೌಢ ನಾಟ್ಯ-ಅಭಿನಯ ತರಬೇತಿ,ಪೂರ್ವರಂಗ-ಉತ್ತರರಂಗ ವೈವಿಧ್ಯಗಳ ತರಬೇತಿ,ವಿಶೇಷ ರಂಗಕ್ರಮಗಳ ಪ್ರಾತ್ಯಕ್ಷಿಕೆ,ಆಯ್ದ ಪ್ರಸಂಗ-ರಂಗಪಠ್ಯಗಳ ತರಬೇತಿ,ಭಾಗವತಿಕೆ ಮತ್ತು ಚೆಂಡೆ- ಮದ್ದಳೆ ತರಬೇತಿ,ಪ್ರಸಾಧನ(ಮೇಕಪ್)-ವೇಷಭೂಷಣ ತರಬೇತಿ,ತಾಳಮದ್ದಳೆ ಅಭ್ಯಾಸ ಕೂಟ,ಭಜನಾ (ಯಕ್ಷಕುಣಿತ ಭಜನೆ ಸಹಿತ) ತರಗತಿಗಳು
ರಜಾಕಾಲದ ಚಿತ್ರಕಲೆ ಇತ್ಯಾದಿ ವಿಶೇಷ ತರಗತಿಗಳು:
ಕನ್ನಡ ಅಭ್ಯಾಸ ವಿಶೇಷ ತರಗತಿಗಳು,ಅಕ್ಷರಾಭ್ಯಾಸ- ಬರವಣಿಗೆ, ಪಠಣ,ವ್ಯಾಕರಣ,ಪ್ರಬಂಧ – ಆಶುಭಾಷಣ ಮತ್ತಿತರ ಸಾಹಿತ್ಯ ಪ್ರಕಾರಗಳ ಅಭ್ಯಾಸ,ಛಂದಸ್ಸು – ಪ್ರಾಥಮಿಕ ಅಭ್ಯಾಸ,ಭಗವದ್ಗೀತೆ,ರಾಮಾಯಣ, ಮಹಾಭಾರತ, ಪಂಚತಂತ್ರದ ಕಥೆಗಳು
ಸಂಪರ್ಕಿಸಿ :052 915 7825, 050 896 8565
ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
Comments are closed.