ಕರಾವಳಿ

ಅಪ್ರಾಪ್ತ ಮಲಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ: ಕುಂದಾಪುರ ಪೊಲೀಸರಿಂದ ಆರೋಪಿ ಬಂಧನ

Pinterest LinkedIn Tumblr

ಕುಂದಾಪುರ: ಹೊರ ರಾಜ್ಯದ ಮಹಿಳೆಯೋರ್ವರೊಂದಿಗೆ ಪ್ರೇಮಿಸಿ ಆಕೆಯೊಂದಿಗೆ ಮದುವೆಯಾಗಿ ಕುಂದಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ವ್ಯಕ್ತಿಯೋರ್ವ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ವರದಿಯಾಗಿದೆ.

ಈ ಬಗ್ಗೆ ದೂರು ದಾಖಲಾದ ಹಿನ್ನೆಲೆ ತನಿಖೆ ಕೈಗೊಂಡ ಕುಂದಾಪುರ ಪೊಲೀಸ್ ನಿರೀಕ್ಷಕರ ನೇತೃತ್ವದ ಪೊಲೀಸರ ತಂಡ ಆರೋಪಿ ಸೊಹೇಲ್ ಎಂಬಾತನನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಇಬ್ಬರು ಮಕ್ಕಳಿದ್ದ ಹೊರ ರಾಜ್ಯದ ಮಹಿಳೆಯೊಬ್ಬರು ಪತಿಯನ್ನು ತ್ಯಜಿಸಿದ್ದು ಅಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದ ವೇಳೆ ಕಳೆದ 11 ವರ್ಷಗಳ ಉಡುಪಿಯ ಬೈಂದೂರಿನ ನಿವಾಸಿಯೆಂದು ಪರಿಚಿತನಾದ ಸೊಹೇಲ್ ಆಕೆಯನ್ನು ಪ್ರೇಮಿಸಿದ್ದು ಮದುವೆಯಾಗಿ ಮನೆಯಾದ ಕುಂದಾಪುರದ ನಗರ ಠಾಣೆಗೊಳಪಡುವ ಗ್ರಾಮಕ್ಕೆ ಕರೆತಂದಿದ್ದ. ಬಳಿಕ ಮಹಿಳೆಯ ಮಗಳಿಗೆ ಸುಹೇಲ್ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದು, ಆಕೆ ಆತನಿಂದ ದೂರ ಹೋಗಿ ಬೇರೆಡೆ ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದರು.

ಜೂ.10ರಂದು ಬಾಡಿಗೆ ಮನೆಯಲ್ಲಿದ್ದ ಆಕೆ ಹಾಗೂ ಅವಳ ಮಗಳನ್ನು ಆತನ ಮನೆಗೆ ಕರೆದೊಯ್ದು ಇಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿ, ಅಪ್ರಾಪ್ತ ಬಾಲಕಿಯಾದ ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಮಹಿಳೆಯು ತನ್ನ ಮಗಳನ್ನು ಆತನಿಂದ ಬಿಡಿಸಲು ಹೋದಾಗ ಆರೋಪಿ ಸುಹೇಲ್ ಆಕೆ ಕುತ್ತಿಗೆಯನ್ನು ಒತ್ತಿ ಹೊಡಿದು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದ. ಬಳಿಕ ಮಹಿಳೆ ಆರೋಪಿ ಪತಿಯನ್ನು ದೂಡಿ ತನ್ನ ಮಗಳನ್ನು ಆತನಿಂದ ತಪ್ಪಿಸಿಕೊಂಡು ಬಂದಿದ್ದಳು.

ತಾಯಿ, ಮಗಳನ್ನು ಕೊಲ್ಲುವುದಾಗಿ ಬೆದರಿಸಿ ಆರೋಪಿ ಸೊಹೇಲ್ ಈ ಹಿಂದೆಯು ಮಲ ಮಗಳಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಎಂದು ಸಂತ್ರಸ್ತ ಬಾಲಕಿ ವಿಚಾರಣೆ ವೇಳೆ ತಿಳಿದುಬಂದಿದೆ.

ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Comments are closed.