UAE

ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ.ಕೆ. ಗಣೇಶ್ ರೈ ಅವರಿಗೆ ಪ್ರತಿಷ್ಠಿತ ‘ವಿಶ್ವ ಮಾನ್ಯ ಶಿಲ್ಪ ಕಲಾರತ್ನ ಅಂತರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

Pinterest LinkedIn Tumblr

ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಸಾಲಿನಲ್ಲಿ ಅಲ್ ಐನ್ ವಿಭಾಗದಲ್ಲಿ ಕಳೆದ 19 ವರ್ಷಗಳಿಂದ ಅನಿವಾಸಿ ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಕನ್ನಡ ಭಾಷೆ ಕಲೆ ಸಂಸ್ಕ್ರತಿಯನ್ನು ವೈಭವೀಕರಿಸಿ ಕೊಂಡು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ.

2023ಮೇ 13ನೇ ತಾರೀಕಿನಂದು ಬ್ಲು ರಾಡಿಸ್ಸನ್ ಹೋಟೆಲ್ ಅಲ್ ಐನ್ ನ ಬಾಲ್ ರೂಂ ನಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ನಡೆದ ಅದ್ಧೂರಿ ಸಮಾರಂಭವನ್ನು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ.ಯ ಅಧ್ಯಕ್ಷರು ಹಾಗೂ ಫಾರ್ಚೂನ್ ಗ್ರೂಪ್ ಅಫ್ ಹೋಟೆಲ್ ಚೇರ್ಮನ್ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಎ.ಜೆ. ಗ್ರೂಪ್ ಆಫ್ ಸ್ಕೂಲ್ಸ್ ಚೇರ್ಮನ್ ಅರ್ಶದ ಶರೀಫ್ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದು ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು.

ಬಿ. ಕೆ. ಗಣೇಶ್ ರೈಯವರಿಗೆ ಪ್ರತಿಷ್ಠಿತ “ವಿಶ್ವ ಮಾನ್ಯ ಶಿಲ್ಪ ಕಲಾರತ್ನ ಅಂತರಾಷ್ಟ್ರೀಯ ಪ್ರಶಸ್ತಿ” ಪ್ರದಾನ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಎರಡುವರೆ ದಶಕಗಳಿಂದ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಸಮಾಕ ಸೇವೆ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಬಿ. ಕೆ. ಗಣೇಶ್ ರೈ ಯವರ ಶಿಲ್ಪ ಕಲೆ, ಚಿತ್ರ ಕಲೆ, ಲೇಖ ಬರಹಗಾರರಾಗಿ, ಕಾರ್ಯಕ್ರಮ ನಿರೂಪಕರಾಗಿ, ರಕ್ತದಾನ ಶಿಬಿರಗಳ ಆಯೋಜಕರಾಗಿ, ಸಮಾಜ ಸೇವಕರಾಗಿ ಇವರ ಬಹುಮುಖ ಪ್ರತಿಭೆಯನ್ನು ದುಬಾಯಿ ಸರ್ಕಾರದ ಕಲ್ಚರಲ್ ಮಿನಿಸ್ಟ್ರೀಯಿಂದ ಕಲ್ಚರಲ್ ಗೋಲ್ಡನ್ ವೀಸಾ ನೀಡಿ ಗೌರವಿಸಿರುವ ಗಣೇಶ್ ರೈಯವರು ಪ್ರಸ್ಥುತ ದುಬಾಯಿಯಲ್ಲಿ ಅನಿವಾಸಿ ಭಾರತೀಯನಾಗಿ ನೆಲೆಸಿದ್ದಾರೆ. ಗಣೇಶ್ ರೈಯವರು ತಮ್ಮ ಜನ್ಮಭೂಮಿ ಸುಂದರ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ನಿರ್ಮಿಸಿರುವ ಹಲವಾರು ಶಿಲ್ಪ ಕಲಾಕೃತಿಗಳು, ತೈಲವರ್ಣ ಜಲವರ್ಣ ಕಲಾಕೃತಿಗಳು, ಪತ್ರಿಕೆಗಳಲ್ಲಿ ಅಂಕಣಗಾರರಾಗಿ, ಹಲವಾರು ದೇವತಾ ಚಿತ್ರಗಳು, ಪ್ರವಾಸಿ ಬ್ರೋಶರ್ ಗಳನ್ನು ಮುದ್ರಿಸಿ ಪ್ರಕಟಿಸಿದ್ದಾರೆ. ದುಬಾಯಿಯಲ್ಲಿ ಭಾರತ ಮತ್ತು ಗಲ್ಫ್ ನಾಡಿಗೆ ಸಾಂಸ್ಕೃತಿಕವಾಗಿ ಕನ್ನಡ ಭಾಷೆಯನ್ನು ವೈಭವೀಕರಿಸುತ್ತಾ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನ ಮೂಲಕ ಕನ್ನಡ ಭಾಷೆಯಲ್ಲಿ ವೈವಿಧ್ಯಮಯ ವೀಡಿಯೋಗಳನ್ನು ನಿರ್ಮಿಸಿ ಅಪ್ಲೊಡ್ ಮಾಡುತ್ತಾ ಕನ್ನಡ ಸೇವೆಯನ್ನು ಮಾಡುತ್ತಿರುವ ಹಾಗೂ ದುಬಾಯಿ ಸರ್ಕಾರದ ಕಲ್ಚರಲ್ ಗೋಲ್ಡನ್ ವೀಸಾ ಪುರಸ್ಕೃತರಾಗಿರುವುದನ್ನು ಅಭಿನಂದಿಸಿ, ಸಮಸ್ಥ ಅನಿವಾಸಿ ಕನ್ನಡಿಗರು, ಭಾರತೀಯರ ಪರವಾಗಿ “ವಿಶ್ವ ಮಾನ್ಯ ಶಿಲ್ಪಕಲಾರತ್ನ ಅಂತರಾಷ್ಟ್ರೀಯ ಪ್ರಶಸ್ತಿ” ಪ್ರಧಾನಿಸಿ ಗೌರವಿಸಲಾಯಿತು. ಸನ್ಮಾನ ಪ್ರಕ್ರಿಯೆಯಲ್ಲಿ ಮುಖ್ಯ ಅತಿಥಿಗಳಾದ ಪ್ರವೀಣ್ ಕುಮಾರ್ ಶೆಟ್ಟಿಯವರು, ಅರ್ಶದ್ ಶರೀಫ್ ಹಾಗೂ ಕನ್ನಡ ಸಂಘ ಅಲ್ ಐನ್ ಕಾರ್ಯಕಾರಿ ಸಮಿತಿಯ ಮುಖ್ಯಸ್ಥರು ವಿಮಲ್ ಕುಮಾರ್, ಕೆ. ಬಿ. ರಮೇಶ್ ಹಾಗೂ ಸಮಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು.

ಪ್ರಶಸ್ತಿ ಸನ್ಮಾನ ಗೌರವನ್ನು ಸ್ವೀಕರಿಸಿದ ಬಿ. ಕೆ. ಗಣೇಶ್ ರೈ ಯವರು ತಮ್ಮ ವಂದನಾ ಸಮರ್ಪಣೆಯಲ್ಲಿ ತಮ್ಮ ಕಲಾ ಪ್ರಯಾಣದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಲು ಬೆಂಬಲ ಪ್ರೋತ್ಸಾಹ ನೀಡಿದ ಸರ್ವರನ್ನು ಹಾಗೂ ಕನ್ನಡ ಸಂಘ ಅಲ್ ಐನ್ ಸಂಘಟನೆಗೆ ತಮ್ಮ ಕೃಜ್ಞತೆಯನ್ನು ಸಲ್ಲಿಸಿದರು.

 

Comments are closed.