UAE

ಬಂಟ್ಸ್ ಫ್ಯಾಮಿಲಿ ಯುಎಇ ವತಿಯಿಂದ 10 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ

Pinterest LinkedIn Tumblr

ದುಬೈ: ಬಂಟ್ಸ್ ಫ್ಯಾಮಿಲಿ ಯುಎಇ ಇದರ ವತಿಯಿಂದ 10 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಜರಗಿತು.

ನಗರದ ಜೆ.ಎಸ್.ಎಸ್ ಸ್ಕೂಲ್ ಅಲ್ ಸಫದಲ್ಲಿ ನಡೆದ ಯುಎಇಯಾ (ಅಬುಧಾಬಿ, ದುಬೈ,ಅಜ್ಮಾನ್ ಶಾರ್ಜಾ, ಅಲ್ ಐನ್,ರಾಸಲ್ ಖೈಮಾ,ಫುಜೇರಾ,ಉಮಲ್ ಕುಯಿನ್) ಪ್ರದೇಶದ ಸಾವಿರಾರು ಬಂಟ ಬಾಂಧವರಲ್ಲದೆ ಯುಎಇ ಯ ಎಲ್ಲಾ ಸಮಾಜದ ಬಾಂಧವರು ಪೂಜೆಯಲ್ಲಿ ಪಾಲ್ಗೊಂಡು ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾಗಿರುವುದು ವಿಶೇಷತೆಯಾಗಿದೆ.

ಶ್ರೀ ಭವಾನಿ ಶಂಕರ ಶರ್ಮಾರವರ ಪೌರೋಹಿತ್ಯದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ದೇವರ ಸಂಕಲ್ಪ,ಗಣಪತಿ ಪೂಜಾ,ಕಲಸ ಪ್ರತಿಷ್ಠಾಪನೆ, ನವಗ್ರಹ ಪೂಜೆ, ಸತ್ಯನಾರಾಯಣ ಕಲ್ಪೊಕಥ ಪೂಜೆ,ಸತ್ಯನಾರಾಯಣ ದಶೋತ್ತರ ನಾಮ ಅರ್ಚನೆ ಮಹಾಲಕ್ಷ್ಮಿ ಅಷ್ಟೋತ್ತರ ಅರ್ಚನೆ,ವಿಷ್ಣು ಸಹಸ್ರ ನಾಮ,ಸತ್ಯನಾರಾಯಣ ವೃತ ಕಥೆ, ಮಹಾ ಮಂಗಳಾರತಿ, ಮಂತ್ರ ಪುಷ್ಪ ಮತ್ತು ನಾರಾಯಣ ಸಂಕಿರ್ತನೆ, ಅಷ್ಟಾವಧನ ಇನ್ನಿತರ ವೈದಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ ಶ್ರದ್ಧಾ ಪೂರ್ವಕ ಜರುಗಿತು. ಯುಎಇ ಬಂಟ್ಸ್ ಮಹಿಳಾ ಘಟಕದ ಸದಸ್ಯೆಯರಿಂದ ಕುಣಿತ ಭಜನೆ ಹಾಗೂ ರಾಜಾ ರಾಜೇಶ್ವರಿ ಭಜನಾ ಮಂಡಳಿ ಯುಎಇ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಯುಎಇ ಬಂಟ್ಸ್ ಫ್ಯಾಮಿಲಿಯ ಸತ್ಯನಾರಾಯಣ ಪೂಜಾ ಸಂಚಾಲಕರಾದ ರವಿರಾಜ್ ಶೆಟ್ಟಿ ಮತ್ತು ಶಶಿ ರವಿರಾಜ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಸರ್ವೋತ್ತಮ ಶೆಟ್ಟಿ, ಉಷ ಸರ್ವೋತ್ತಮ ಶೆಟ್ಟಿ ಮತ್ತು ಮಹೇಶ್ ಶೆಟ್ಟಿ, ಚೈತ್ರ ಮಹೇಶ್ ಶೆಟ್ಟಿ ದಂಪತಿಗಳು ಪೂಜಾ ಪ್ರತಿನಿಧಿಯಾಗಿ ಕುಳಿತು ಪೂಜೆಯ ಯಶಸ್ವಿಗೆ ಸಾಥ್ ನೀಡಿದರು.

ಮಹಿಳಾ ವಿಭಾಗದ ಸದಸ್ಯೆಯರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಮತ್ತು ಬಿ.ಕೆ.ಗಣೇಶ್ ರೈ ಸಂಘದ ಬಗ್ಗೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ ಧನ್ಯವಾದವಿತ್ತರು.

ಸತ್ಯನಾರಯಣ ಪೂಜೆಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಬಾಲಕೃಷ್ಣ ಶೆಟ್ಟಿ (ಬಾಲು), ಜಯಶ್ರೀ ಶೆಟ್ಟಿ, ಶ್ರೀಮತಿ ಶೊಭ ಶೆಟ್ಟಿ, ನಂದಿತ ಸುಜತ್ ಶೆಟ್ಟಿ, ಶ್ರೀಮತಿ ಮೋನಿಷ ಶರತ್ ಶೆಟ್ಟಿ, ಸಂಗೀತ ಸತೀಶ್ ಶೆಟ್ಟಿ,ಸಜನ್ ಶೆಟ್ಟಿ, ರೇಷ್ಮಾ ದೆವೀಶ್ ಶೆಟ್ಟಿ, ಸೀಮಾ ವಾಸು ಶೆಟ್ಟಿ, ರೂಪ ಪ್ರವೀಣ್ ಶೆಟ್ಟಿ, ರಮಾನಂದ ಶೆಟ್ಟಿ, ಶಶಿ ರವಿರಾಜ್ ಶೆಟ್ಟಿ, ಆರತಿ ದಿನೇಶ್ ಶೆಟ್ಟಿ, ವಸಂತ್ ಶೆಟ್ಟಿ ಮತ್ತು ಮಾಧ್ಯಮ ಮಿತ್ರರನ್ನು ಗೌರವಿಸಲಾಯಿತು.

ಯುಎಇ ಬಂಟ ಸದಸ್ಯರು ಮತ್ತು ಸದಸ್ಯೆಯರು ಸ್ವಯಂಸೇವಕರಾಗಿ ಸಹಕರಿಸಿ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು.

Comments are closed.