UAE

ವಾವ್ ಪವರ್ ಯೋಗ ಕನ್ನಡಿಗರು ಯು.ಎ.ಇ. ಆಶ್ರಯದಲ್ಲಿ ‘ವಿಶ್ವ ಯೋಗ ದಿನ-2022’

Pinterest LinkedIn Tumblr

ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ “ವಾವ್ ಪವರ್ ಯೋಗ ಕನ್ನಡಿಗರು ಯು.ಎ.ಇ.” ಆಶ್ರಯದಲ್ಲಿ “ವಿಶ್ವ ಯೋಗ ದಿನ 2022” ಝೂಮ್ ವರ್ಚುವಲ್ ವೇದಿಕೆಯ ಮೂಲಕ ಆಯೋಜಿಸಲಾಗಿತ್ತು.

ವಾವ್ ಪವರ್ ಯೋಗ ಕನ್ನಡಿಗರು ಯು.ಎ.ಇ. ಸ್ಥಾಪಕರು ಹಾಗೂ ಮುಖ್ಯಸ್ಥರು ಯೋಗ ಗುರುಗಳಾದ, ಗುರುಮಾ ಡಾ. ಭಾಗೀರಥಿ ಕನ್ನಡತಿಯವರು ಧ್ಯಾನದೊಂದಿಗೆ ಯೋಗ ಪ್ರಾರಂಭಿಸಿ ನಂತರ ಪ್ರಧಾನ ಕಾರ್ಯದರ್ಶಿ ಶಶಿಧರ್ ಮುಂಡರಗಿಯವರು ಯೋಗಭ್ಯಾಸ ತರಗತಿಯನ್ನು ನಡೆಸಿಕೊಟ್ಟರು. ನಂತರದ ಸಭಾ ಕಾರ್ಯಕ್ರಮವನ್ನು ಗೌರವ ಸಲಹೆಗಾರರಾದ ಬಿ. ಕೆ. ಗಣೇಶ್ ರೈ ಯವರು ಕಾರ್ಯಕ್ರಮ ನಿರೂಪಕರಾಗಿ ನಡೆಸಿಕೊಟ್ಟರು. ಜ್ಯೋತಿ ಬೆಳಗುವುದರೊಂದಿಗೆ ಪ್ರಾರಂಭಿಸಿ ಅನುಷಾ ಉಮಾಕಾಂತ್ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ವಾವ್ ಪವರ್ ಯೋಗ ಕನ್ನಡಿಗರು ಯು.ಎ.ಇ. ಕಾರ್ಯಕಾರಿ ಸಮಿತಿಯ ಸಲಹೆಗಾರರು ಶಿವರಾಂ ಭಟ್ ಸರ್ವರನ್ನು ಸ್ವಾಗತಿಸಿದರು. ಅಧ್ಯಕ್ಷರಾದ ಅನಂದ್ ಬೈಲೂರು ರವರು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸುದೀಪ್ ದಾಸ್, ಡಾ. ವಂದನಾ, ಮಿನಿ ಶುಭಾಶ್, ಡಾ. ರೇಶ್ಮಾ, ಗ್ರೀಶ್ಮಾ ರವರು ತಮ್ಮ ಯೋಗಾಭ್ಯಾಸದ ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು.

ವಾವ್ ಪವರ್ ಯೋಗ ಕನ್ನಡಿಗರು ಯು.ಎ.ಇ. ಬಗ್ಗೆ ತ್ರಿವೇಣಿ ಪ್ರಹ್ಲಾದ್ ಪೂರ್ಣ ವಿವರಗಳನ್ನು ನೀಡಿದರು. ಸದಸ್ಯರಾದ ತ್ರಿವೇಣಿ ಮತ್ತು ಪ್ರಹ್ಲಾದ್ ಶಿವ ಶಕ್ತಿ ಯೋಗ ಪ್ರದರ್ಶನ ಹಾಗೂ ಕು. ವೀಕ್ಷಾ ಯೋಗ ಪ್ರದರ್ಶನ ನೀಡಿದರು.

ಮುಖ್ಯ ಅತಿಥಿಗಳಾಗಿ ನಾಡೋಜ ಡಾ. ಮಹೇಶ್ ಜೋಷಿಯವರು ಅನಿವಾರ್ಯ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗುವುದ ಕಾರಣ ಅವರ ಶುಭಾಶಯ ಧ್ವನಿ ಸಂದೇಶದ ಮೂಲಕ ಪ್ರಸಾರ ಮಾಡಲಾಯಿತು. ಅತಿಥಿಗಳಾಗಿ ಆಗಮಿಸಿದ್ದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ವಾವ್ ಪವರ್ ಯೋಗ ಕನ್ನಡಿಗರು ಯು.ಎ.ಇ.ಯ ಮಹಾ ಪೊಷಕರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಪೋಷಕರಾದ ಶಶಿಧರ್ ನಾಗರಾಜಪ್ಪ ಹಾಗೂ ಮೋಹನ್ ನರಸಿಂಹ ಮೂರ್ತಿ ಯವರು ಶುಭ ಸಂದೇಶವನ್ನು ನೀಡಿದರು.

ಗುರುಮಾ ಡಾ. ಭಾಗೀರಥಿ ಕನ್ನಡತಿಯವರ ಬಗ್ಗೆ ಗಣೇಶ್ ರೈವರು ನಿರ್ಮಿಸಿದ್ದ ಹೆಜ್ಜೆ ಗುರುತುಗಳ ಪರಿಚಯದ ವೀಡಿಯಾ ಪ್ರಸಾರವಾದ ನಂತರ ಗುರುಮಾರವರು ಕಾರ್ಯಕ್ರಮದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿ, ಅಶೀರ್ವಚನ ಸಂದೇಶ ನೀಡಿದರು.

ವಾವ್ ಪವರ್ ಯೋಗ ಕನ್ನಡಿಗರು ಯು.ಎ.ಇ.ಯ ಮುಂಬರುವ ಕಾರ್ಯಯೋಜನೆಗಳ ಬಗ್ಗೆ ಅಧ್ಯಕ್ಷ ಆನಂದ್ ಬೈಲೂರ್ ರವರು ಮಾಹಿತಿ ನೀಡಿದರು.

ವಾವ್ ಪವರ್ ಯೋಗ ಕನ್ನಡಿಗರು ಯು.ಎ.ಇ. ಪ್ರಧಾನ ಕಾರ್ಯದರ್ಶಿ ಶಶಿಧರ್ ಮುಂಡರಗಿಯವರು ವಂದಿಸಿದರು.

Comments are closed.