ಕರಾವಳಿ

ಪ್ರಧಾನಮಂತ್ರಿಗಳ ಕೂದಲು‌ ಮುಟ್ಟಲು ಸಾಧ್ಯವಿಲ್ಲ | ಗೊಡ್ಡು ಬೆದರಿಕೆಗೆ ಜಗ್ಗಲ್ಲ, ಬಗ್ಗಲ್ಲ: ಸಚಿವ ಅಶ್ವಥ್ ನಾರಾಯಣ್

Pinterest LinkedIn Tumblr

ಕುಂದಾಪುರ: ಪ್ರಧಾನಿ‌ ಮೋದಿಯವರು ತಮ್ಮ ಆಡಳಿತಾವಧಿಯಲ್ಲಿ ಇಂತಹ ನೂರಾರು-ಸಾವಿರಾರು ಸವಾಲುಗಳನ್ನು ಎದುರಿಸಿದ್ದಾರೆ. ಉದಯಪುರ ಹತ್ಯೆಕೋರರು ಪ್ರಧಾನಿಯವರಿಗೆ ಬೆದರಿಕೆಯೊಡ್ಡಿದ್ದಾರೆ. ಇಂತಹ ಗೊಡ್ಡು ಬೆದರಿಕೆ ಹೀನ,‌ದೌರ್ಬಲ್ಯ, ಕೀಳು‌ ಮನಸ್ಥಿತಿ, ಸಂಸ್ಕ್ರತಿ ತೋರಿಸುತ್ತದೆ. ಇದ್ಯಾವುದಕ್ಕೂ ಜಗ್ಗಲ್ಲ, ಬಗ್ಗಲ್ಲ. ಅವರಿಂದ ಪ್ರಧಾನಿಯವರ ಕಣ್ಣು ಹಾಗೂ ಕೂದಲು ಕೂಡ ಮುಟ್ಟಲು ಸಾಧ್ಯವಿಲ್ಲ. ಇಂತಹ ಬೆದರಿಕೆಗಳ ಹಾಕುವ ಮೂಲಕ ದುಷ್ಟರು ತಮ್ಮ ವಿನಾಶವನ್ನು ಎದುರು ಕಾಣುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ. ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಧರ್ಮದ ಪರವಾಗಿ ಒಳ್ಳೆಯ ಸಂದೇಶ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲಾ ರೀತಿಯಾದ ಭಾವನೆ, ಸಂಸ್ಕೃತಿ, ಧರ್ಮವನ್ನು ಕಾಪಾಡಲು, ಅನುಷ್ಠಾನ ಮಾಡಿ ನಡೆಸಿಕೊಂಡು ಹೋಗಲು ಅವಕಾಶವಿದೆ. ಈ ರೀತಿ ಕಾನೂನಿನ ಕ್ರಮವನ್ನು ಕೈಗೆತ್ತಿಕೊಳ್ಳಲು ಯಾವುದೇ ಧರ್ಮದಲ್ಲಿ ಹೇಳುವುದಿಲ್ಲ. ಅಧರ್ಮಿಗಳು, ಮೂಢರು, ಮುಟ್ಟಾಳರ ಇಂತಹ ಕೃತ್ಯಗಳನ್ನು ಖಂಡಿಸುತ್ತೇವೆ. ಭಾರತೀಯರು ಶಾಂತಿಯುತವಾಗಿ ವಸುದೈವ ಕುಟುಂಬಕಂ ಕಲ್ಪನೆಯೊಂದಿಗೆ ಬಾಳುತ್ತಿದ್ದೇವೆ.
ಇಂತಹ ಕೌರ್ಯ ಮರುಕಳಿಸದಂತೆ ಕಾನೂನು ಕ್ರಮವನ್ನು ಕೈಗೊಂಡು ಸಂಬಂಧಪಟ್ಟ ರಾಜ್ಯ ಸರಕಾರ ಮಾಡಬೇಕು. ಆ ಮೂಲಕ ಪ್ರಜೆಗಳಿಗೆ ಒಳ್ಳೆಯ ಸಂದೇಶ ನೀಡಬೇಕು ಎಂದರು.

Comments are closed.