UAE

ಲೋಕಲ್‌ವುಡ್ ಅಪ್ಲಿಕೇಶನ್‌ನಲ್ಲಿ ಸದ್ದು ಮಾಡಲು ಹೊರಟಿದೆ ‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’

Pinterest LinkedIn Tumblr

ಮಂಗಳೂರು: ತುಳು ಸಿನಿಮಾ ‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಇಂದು (ಮಾರ್ಚ್ 25 ರಿಂದ) ಏಪ್ರಿಲ್ 4 ರವರೆಗೆ ಹತ್ತು ದಿನಗಳ ಕಾಲ ಒಟಿಟಿ ಫ್ಲಾಟ್ ಪಾಮ್ ಲೋಕಲ್‌ವುಡ್ ಅಪ್ಲಿಕೇಶನ್‌ನಲ್ಲಿ ಪ್ರದರ್ಶನಗೊಂಡು ಸದ್ದು ಮಾಡಹೊರಟಿದೆ.

ಆಕ್ಮೆ ಮೂವೀಸ್ ಬ್ಯಾನರ್ ಅಡಿಯಲ್ಲಿ ದುಬೈ ಮೂಲದ ಖ್ಯಾತ ಉದ್ಯಮಿ, ದಾನಿ ಮತ್ತು ಸಿನಿಮಾ ನಿರ್ಮಾಪಕರಾಗಿ ಗುರುತಿಸಿಕೊಂಡ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಅವರು ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನಿಮಾ ನಿರ್ಮಿಸಿದ್ದಾರೆ. ಕಳೆದ ವರ್ಷ ಈ ಸಿನೆಮಾ ಬಿಡುಗಡೆಯಾಗಿತ್ತು. ರಾಜ್ಯ ಸೇರಿದಂತೆ‌ ವಿದೇಶದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ವೇಳೆ ಕೋವಿಡ್ ಹಿನ್ನೆಲೆ ಚಿತ್ರಮಂದಿರ ಸಮಸ್ಯೆ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನಕ್ಕೆ ಹೊಡೆತ ಬಿದ್ದಿತ್ತು. ಇದೀಗಾ ಲೋಕಲ್‌ವುಡ್ ಅಪ್ಲಿಕೇಶನ್‌ನಲ್ಲಿ ಸಿನೆಮಾ ಮತ್ತೆ ಕಾಣಸಿಗಲಿದ್ದು ಮೊದಲ ದಿನವೇ ಉತ್ತಮ ರೆಸ್ಫಾನ್ಸ್ ಸಿಕ್ಕಿದೆ ಎಂದು ತಿಳಿದುಬಂದಿದೆ.

ಚಿತ್ರದಲ್ಲಿ ಪೃಥ್ವಿ ಅಂಬಾರ್ ಮತ್ತು ನವ್ಯಾ ಪೂಜಾರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ವಿಸ್ಮಯ ವಿನಾಯಕ್ ಮತ್ತು ದೀಪಕ್ ರೈ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಖ್ಯಾತ ನಟ ಅನಂತ್ ನಾಗ್ ಅವರು ‘ಇಂಗ್ಲಿಷ್’ ಮೂಲಕ ತುಳು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದು‌ ಸ್ಮರಣೀಯ. ಚಿತ್ರಕ್ಕೆ ಕೃಷ್ಣ ಸಾರಥಿ ಛಾಯಾಗ್ರಹಣವಿದೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ.

ಕೆಳಗಿನ ಲಿಂಕ್‌ಗಳನ್ನು ಬಳಸಿಕೊಂಡು ಲೋಕಲ್‌ವುಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

Android ಬಳಕೆದಾರರು:

https://play.google.com/store/apps/details?id=biz.atconline.localwood

ಐಒಎಸ್ ಬಳಕೆದಾರರು:

https://apps.apple.com/in/app/localwood-daijiworld/id1563895115

Comments are closed.