UAE

ಯು.ಎ.ಇ.ಯಲ್ಲಿ ಗರಿಗೆದರಿದ ಕ್ರೀಡಾ ಚಟುವಟಿಕೆ: ಮಾ.27ಕ್ಕೆ ಕರ್ನಾಟಕ ಸಂಘ ಶಾರ್ಜಾದ ‘ಮಯೂರ ಕಪ್’ ಥ್ರೋಬಾಲ್, ವಾಲಿಬಾಲ್ ಪಂದ್ಯಾಟ

Pinterest LinkedIn Tumblr

ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕರ್ನಾಟಕ ಪರ ಸಂಘಟನೆಗ ಆಶ್ರಯದಲ್ಲಿ ನಡೆಯುತ್ತಿದ್ದ ಕ್ರೀಡಾ ಚಟುವಟಿಕೆಗಳು ಕಳೆದ ಎರಡು ವರ್ಷಗಳಿಂದ ಸ್ಥಬ್ಧವಾಗಿದ್ದು, ಇದೀಗ ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಪ್ರತಿಷ್ಠಿತ “ಮಯೂರ ಕಪ್” ಮಹಿಳೆಯರ ಮತ್ತು ಪುರುಷರ ಥ್ರೋಬಾಲ್ ಹಾಗೂ ಪುರುಷರ ವಾಲಿಬಾಲ್ ಪಂದ್ಯಾಟಗಳು ಇದೆ ತಿಂಗಳು ಮಾರ್ಚ್ 27ನೇ ತಾರೀಕು ಭಾನುವಾರ ಬೆಳಗಿನಿಂದ ಸಂಜೆಯವರೆಗೆ ಆಜ್ಮಾನ್ ಅಕಾಡೆಮಿ ಸ್ಕೂಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ “ಮಯೂರ ಕಪ್” ತಮ್ಮದಾಗಿಸಿ ಕೊಳ್ಳಲು ಯು.ಎ.ಇ. ಯ ಕರ್ನಾಟಕ ಪರ ಸಂಘಟನೆಗಳ ಮಹಿಳೆಯರ ಮತ್ತು ಪುರುಷರ ಥ್ರೋಬಾಲ್ ಹಾಗೂ ವಾಲಿಬಾಲ್ ಪ್ರತಿಷ್ಠಿತ ತಂಡಗಳ ನುರಿತ ಆಟಗಾರರು ಪೈಪೋಟಿ ನಡೆಸಲಿದ್ದಾರೆ. ಯು.ಎ.ಇ.ಯ ವಿವಿಧ ಭಾಗಗಳಿಂದ ತಂಡಗಳು ಆಗಮಿಸಲಿದ್ದು ಹೆಚ್ಚಿನ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದೆ. ಯು.ಎ.ಇ. ಸರ್ಕಾರದ ಆರೋಗ್ಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಶಿಸ್ತುಬದ್ಧವಾಗಿ ಪಂದ್ಯಾಟಗಳನ್ನು ಆಯೋಜಿಸಲಾಗಿದ್ದು ಕ್ರೀಡಾ ಸಮಿತಿಯ ಸರ್ವಸದಸ್ಯರು ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

ಯು.ಎ.ಇ. ಯಲ್ಲಿ ಕಳೆದ ಎರಡು ಮೂರು ದಶಕಗಳಿಂದ ಅದ್ಧೂರಿಯಾಗಿ ನಡೆಯುತ್ತಿದ ಪಂದ್ಯಾಟಗಳನ್ನು ಆಯೋಜಿಸುತ್ತಿದ್ದ ವಿವಿಧ ಸಂಘ ಸಂಸ್ಥೆಗಳ ಸಾಲಿನಲ್ಲಿ ಕರ್ನಾಟಕ ಸಂಘ ಶಾರ್ಜಾ ಹಲವು ಬಾರಿ ಪಂದ್ಯಾಟಗಳನ್ನು ಯಶಸ್ವಿಯಾಗಿ ನಡೆಸಿರುವುದು ಹೆಗ್ಗಳಿಕೆಯಾಗಿದೆ.

ಈ ವರ್ಷದ ಪ್ರಥಮ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟಗಳ ಎಲ್ಲ ತಂಡದವರಿಗೆ ಹಾಗೂ ವೀಕ್ಷಕರಿಗೆ ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಎಂ. ಇ. ಮೂಳೂರ್ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳು ಮಾಧ್ಯಗಳ ಮೂಲಕ ಆತ್ಮೀಯ ಆಹ್ವಾನವನ್ನು ನೀಡಿದ್ದಾರೆ.

ವರದಿ- ಬಿ. ಕೆ. ಗಣೇಶ್ ರೈ, ಯು.ಎ.ಇ.

Comments are closed.