ಶಿರಸಿ: ಸಾಮಾಜಿಕ ಜಾಲತಾಣದಲ್ಲಿ ತಾನೂ ಫೇಮಸ್ ಆಗಬೇಕು ಅಂತ ಹಾವುಗಳೊಂದಿಗೆ ಆಟವಾಡುವ ಹುಚ್ಚು ಸಾಹಸ ಮಾಡಿ ಪ್ರಾಣಕ್ಕೇ ಅಪಾಯ ತಂದುಕೊಂಡ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಯುವಕನೊಬ್ಬ ಮಾಡಿದ್ದನೆನ್ನಲಾದ ವಿಡಿಯೋ ಈಗ ವೈರಲ್ ಆಗಿದೆ.
ಮೂರು ಹಾವುಗಳೊಂದಿಗೆ ಕಾಡಿನಲ್ಲಿ ಹುಚ್ಚಾಟ ಆಡಿರುವ ಯುವಕನನ್ನು ಮೇಜ್ ಸಯೀದ್ ಎಂದು ಗುರುತಿಸಲಾಗಿದೆ.

ಅರಣ್ಯ ಅಧಿಕಾರಿ ಸುಶಾಂತ್ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಯೀದ್ ಎಂಬ ಯುವಕ ಹೆಡೆ ಎತ್ತಿದ ಮೂರು ನಾಗರಹಾವುಗಳ ಎದುರು ಕುಳಿತಿರುವ ದೃಶ್ಯವನ್ನು ಕಾಣಬಹುದು.
ಇನ್ನು ಯುವಕ ಹಾವುಗಳ ಮುಂದೆ ಕುಣಿಯುತ್ತಿದ್ದು, ಆಗ ಒಂದು ನಾಗರಹಾವು ಪ್ರತಿದಾಳಿ ನಡೆಸಿ, ಆತನ ಕಾಲನ್ನು ಕಚ್ಚಲು ಯತ್ನಿಸುತ್ತದೆ.
Comments are closed.