UAE

ಐಪಿಎಲ್: ಮುಂಬೈ ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್; 20 ರನ್​ಗಳಿಂದ ಗೆದ್ದ ಧೋನಿ ಪಡೆ

Pinterest LinkedIn Tumblr

ದುಬೈ: ಮುಂಬೈ ವಿರುದ್ಧದ ಗೆಲುವು ಸಾಧಿಸುವ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಪಂದ್ಯಾಟದಲ್ಲಿ ಭರ್ಜರಿ ಮರು ಆರಂಭ ಮಾಡಿದೆ.

30ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌, ಗಾಯಕ್ವಾಡ್‌ ಅವರ ಅಮೋಘ 88 ರನ್‌ಗಳ ನೆರವಿನಿಂದ 6 ವಿಕೆಟ್‌ಗೆ 156 ರನ್‌ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಮುಂಬೈ ತಂಡ 20 ಓವರ್‌ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 136 ರನ್‌ ಗಳಿಸಿ 20 ರನ್‌ಗಳ ಸೋಲು ಅನುಭವಿಸಿತು.

ಮುಂಬೈ ಟೀಂನಲ್ಲಿ ಸೌರಭ್‌ ತಿವಾರಿ ಅವರು ಅರ್ಧ ಶತಕ ಬಾರಿಸಿದರು. ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಚೆನ್ನೈಗೆ ಅಂಥ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ಡು ಪ್ಲೆಸಿಕ್ಸ್‌ ಶೂನ್ಯಕ್ಕೆ ಔಟಾದರು. ನಂತರ ಬಂದ ಮೊಯಿನ್‌ ಅಲಿ ಮತ್ತು ಅಂಬಾಟಿ ರಾಯುಡು ಕೂಡ ಶೂನ್ಯ ಗಳಿಸಿದರು. ಆದರೆ, ಮತ್ತೂಂದು ಕಡೆಯಲ್ಲಿದ್ದ ಗಾಯಕ್ವಾಡ್‌ ಅಜೇಯ 88 ರನ್‌ ಗಳಿಸಿ ಸಾಧಾರಣ ಮೊತ್ತ ಪೇರಿಸುವಲ್ಲಿ ಸಫ‌ಲರಾದರು.

ಚೆನ್ನೈ ಮೊದಲ ಪಂದ್ಯಕ್ಕೆ ಡು ಪ್ಲೆಸಿಸ್‌, ಕರನ್‌ ಇಲ್ಲ
ಇದರಲ್ಲಿ ಗಾಯಕ್ವಾಡ್‌ ಕೊಡುಗೆ ಅಜೇಯ 88 ರನ್‌ (58 ಎಸೆತ, 9 ಬೌಂಡರಿ, 4 ಸಿಕ್ಸರ್‌). ಇದು ಮುಂಬೈ ವಿರುದ್ಧ ಚೆನ್ನೈ ಕ್ರಿಕೆಟಿಗನ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. 2013ರಲ್ಲಿ ಮೈಕಲ್‌ ಹಸ್ಸಿ ಅಜೇಯ 86, 2010ರಲ್ಲಿ ಸುರೇಶ್‌ ರೈನಾ ಅಜೇಯ 83 ರನ್‌ ಬಾರಿಸಿದ್ದರು. ಒಂದೆಡೆ ವಿಕೆಟ್‌ ಉರುಳುತ್ತ ಹೋದರೂ ವಿಚಲಿತರಾಗದ ಗಾಯಕ್ವಾಡ್‌ ಮುಂಬೈ ಬೌಲರ್ ಮೇಲೆರಗಿ ಹೋಗಿ ತಂಡದ ಪಾಲಿಗೆ ಆಪತ್ಬಾಂಧವನೆನಿಸಿದರು. ಇವರಿಗೆ ರವೀಂದ್ರ ಜಡೇಜ, ಡ್ವೇನ್‌ ಬ್ರಾವೊ ಉತ್ತಮ ಬೆಂಬಲ ನೀಡಿದರು.

Comments are closed.