ಕರ್ನಾಟಕ

ವಿಡಿಯೋದಲ್ಲಿರುವುದು ನಾನಲ್ಲ, ವಿರೋಧಿಗಳ ಕೆಲಸವಿದು, ಫಾರ್ವರ್ಡ್ ಮಾಡಿದರೆ ಕೇಸು: ಡಿವಿ ಸದಾನಂದಗೌಡ

Pinterest LinkedIn Tumblr

ಬೆಂಗಳೂರು: ಅವಹೇಳನಕಾರಿ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದ್ದು ಈ ಬಗ್ಗೆ ಸೈಬರ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.

ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿರುವ ಸದಾನಂದ ಗೌಡ ಅವರು, ತಿರುಚಿದ ನಕಲಿ ವಿಡಿಯೋ ಒಂದು ಹರಿದಾಡುತ್ತಿರುವುದು ತಿಳಿದು ಬಂದಿದೆ. ಆ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ. ನನ್ನ ತೇಜೋವಧೆ ಮಾಡಲು ಇಂಥ ವಿಡಿಯೋ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ. ಸೈಬರ್ ಅಪರಾಧ ದಳಕ್ಕೆ ದೂರು ನೀಡಿದ್ದೇನೆ. ಈ ಕೆಲಸ ಮಾಡಿದ ಕಿರಾತಕರ ಬಂಧಿಸಲಾಗುತ್ತದೆ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದಂತೆ ಈ ವಿಡಿಯೋ ಅಪ್ ಲೋಡ್ ಮಾಡುವುದು ಮತ್ತು ಫಾರ್ವ್ ವರ್ಡ್ ಮಾಡುವುದು ಸಹ ಶಿಕ್ಷಾರ್ಹ ಅಪರಾಧವಾಗುತ್ತದೆ. ಇಂಥ ಕೃತ್ಯದಲ್ಲಿ ಯಾರಾದರೂ ತೊಡಗಿದ್ದು ಕಂಡರೆ ನನಗೆ ಮಾಹಿತಿ ನೀಡಿ ಎಂದು ಕೇಳಿಕೊಂಡಿದ್ದಾರೆ.

 

Comments are closed.