ಉಡುಪಿ: ಕೊರೋನಾ ಮಹಾಮಾರಿ ಹಿಮ್ಮೆಟ್ಟಿಸುವ ಹಿನ್ನೆಲೆ ಸಂಘಟಿತ ಶಕ್ತಿ ಪ್ರದರ್ಶನದ ಸಲುವಾಗಿ ಭಾನುವಾರಾ ರಾತ್ರಿ 9 ಗಂಟೆಗೆ ದೀಪ ಬೆಳಗಲು ಪ್ರಧಾನಿ ಮೋದಿ ಕರೆ ಕೊಟ್ಟಿದ್ದು ಇದಕ್ಕೆ ಅನಿವಾಸಿ ಭಾರತಿಯರು ಕೂಡ ಬೆಂಬಲ ಸೂಚಿಸಿದ್ದಾರೆ.
ಅನಿವಾಸಿ ಭಾರತೀಯ ದುಬೈ ಉದ್ಯಮಿ ಕುಂದಾಪುರದ ವಕ್ವಾಡಿ ಮೂಲದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ತಮ್ಮ ಕುಟುಂಬದವರ ಜೊತೆ ದೀಪ ಪ್ರಜ್ವಲನೆಗೈದು ಮೋದಿಯವರ ಕರೆಗೆ ಸ್ಪಂದನೆ ನೀಡಿದ್ದಾರೆ.
ದೇಶದ ಜನರು ಸರಕಾರದ ಆದೇಶಗಳನ್ನು ಪಾಲಿಸಿ, ಕೊರೋನಾ ಹರಡದಂತೆ ಎಚ್ಚರಿಕೆ ವಹಿಸಿ ಎಂದು ಅವರು ಇದೇ ಸಂದರ್ಭ ಕರೆ ನೀಡಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)