UAE

ಮತದಾನಕ್ಕಾಗಿ ಊರಿಗೆ ಬಂದ NRI ಪ್ರವೀಣ್ ಕುಮಾರ್ ಶೆಟ್ಟಿ ದಂಪತಿ!

Pinterest LinkedIn Tumblr

ಕುಂದಾಪುರ: ದುಬೈನಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದರೂ ಕೂಡ ಮತದಾನ ಮಾಡುವುದು ಕರ್ತ್ಯವ್ಯ ಹಾಗೂ ಹಕ್ಕು ಎಂಬ ನಿಟ್ಟಿನಲ್ಲಿ ಎಲ್ಲಾ ಚುನಾವಣೆಗೂ ಊರಿಗೆ ಆಗಮಿಸುವ ಪರಿಪಾಠ ಹೊಂದಿದವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ವಕ್ವಾಡಿ ಮೂಲದ ದುಬೈ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ.

ಅಂತೆಯೇ ಶನಿವಾರ ನಡೆದ ವಿಧಾನಸಭಾ ಚುನಾವಣೆಗೂ ಕೂಡ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಅವರ ಪತ್ನಿ ರೂಪಾಲಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ವಕ್ವಾಡಿಗೆ ಆಗಮಿಸಿ ಮತದಾನದಲ್ಲಿ ಪಾಲ್ಘೊಂಡರು. ಪ್ರವೀಣ್ ಶೆಟ್ಟಿಯವರು ಬೆಳಿಗ್ಗೆ ವಕ್ವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಅವರಿಗೆ ಸ್ನೇಹಿತ ಹಾಗೂ ವಕ್ವಾಡಿ ಮೂಲದ ಬೆಂಗಳೂರು ಉದ್ಯಮಿ ಹಾಗೂ ನಿರ್ಮಾಪಕ ವಿ.ಕೆ. ಮೋಹನ್ ಸಾಥ್ ನೀಡಿದರು.

Comments are closed.