ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಅಭ್ಯರ್ಥಿಗಳು ಹಾಗೂ ಗಣ್ಯರಿಂದ ಮತದಾನ

Pinterest LinkedIn Tumblr

ಉಡುಪಿ: ಕರಾವಳಿಯ ಜಿಲ್ಲೆಯಾದ ಉಡುಪಿಯಲ್ಲಿ ಸಂಜೆಯವರೆಗೆ (4 ಗಂಟೆ) ತನಕವೂ ಉತ್ತಮ ಮತದಾನವಾಗುತ್ತಿದೆ. ಬೆಳಿಗ್ಗೆನಿಂದಲೇ ಸಮಾನ್ಯ ಮತದಾರರು ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಮಠಾಧಿಪತಿಗಳು ಮತ ಚಲಾಯಿಸಿದ್ದಾರೆ.

ಉಡುಪಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಕಾಪು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ, ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್, ಕುಂದಾಪುರ ಕ್ಷೇತ್ರ ಬಿಜೆಪಿ ಅಬ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ, ಬೈಮ್ಡುಋ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ, ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಶ್ರೀನಿವಾಸ್ ಪೂಜಾರಿ ತಾಯಿಯೊಂದಿಗೆ ಆಗಮಿಸಿ ಮತ ಚಲಾಯಿಸಿದ್ದು ವಿಶೇಶವಾಗಿತ್ತು.

ಮತದಾನ ಎಲ್ಲರ ರಾಷ್ಟ್ರೀಯ ಕರ್ತವ್ಯ: ಪೇಜಾವರ ಶ್ರೀ
ಇನ್ನು ಉಡುಪಿಯ ಪೇಜಾವರ ಶ್ರೀಗಳು ಉಡುಪಿಯ ನಾರ್ತ್ ಸ್ಕೂಲ್ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಮತದಾನ ಎಲ್ಲರ ರಾಷ್ಟ್ರೀಯ ಕರ್ತವ್ಯ. ಹೀಗಾಗಿ ಬಂದು ಮತ ಚಲಾಯಿಸಿದ್ದೇನೆ. ದೇವರ ಇಚ್ಚೆಯಂತೆ ,ಜನರ ಇಚ್ಚೆಯಂತೆ ಸರಕಾರ ಬರಲಿದೆ. ಯಾವ ಸರಕಾರ ಬರಲಿದೆ ಅಂತ ಭವಿಷ್ಯ ನುಡಿಯುವುದಿಲ್ಲ. ಆದರೆ ಎಲ್ಲರೂ ಮತ ಚಲಾಯಿಸಬೇಕು. ಗೌಪ್ಯ ಮತದಾನ ಸರಕಾರದ ಉದ್ದೇಶ. ಹೀಗಾಗಿ ಯಾರಿಗೆ ಮತ ಹಾಕಿದೆ ,ಯಾವ ಸರಕಾರ ಬರಲಿದೆ ಅಂತ ಹೇಳಲಾರೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಗಲಿದೆ.ರಾಜ್ಯದ ಜನರ ಒಲವು ಕಾಂಗ್ರೆಸ್ ಪಕ್ಷಕ್ಕಿದೆ.ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮತದಾನದ ಬಳಿಕ ಉಡುಪಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಹೇಳಿಕೆ ನೀಡಿದ್ದಾರೆ.

Comments are closed.