UAE

Dubai: Kannada Koota’s refreshing & relaxing picnic to Khorfakan & Friday Market

Pinterest LinkedIn Tumblr

kk picnic (18)

Dubai: Kannada Koota UAE  organised a refreshing & relaxing family picnic to scenic east coast city  Khorfakan & famed tourist heritage place popularly known as Friday Market. The Picnic which was held on 15th Feb 2013 was attended by enterprising more than 25 family of  Kannadigas and every one enjoyed every bit of it.

ಕನ್ನಡ ಕೂಟ ದುಬೈಯಿಂದ ಯಶಸ್ವಿಯಾಗಿ ಆಯೋಜನಗೊಂಡ ಕೊರ್ಫಾಖಾನ್ ಹಾಗು  ಶುಕ್ರವಾರ ಸಂತೆ ಪ್ರವಾಸ.

  kk picnic (7)

ತಾರೀಕು ೧೫-೨-೨೦೧೩ರ ಶುಕ್ರವಾರದಂದು  ಕನ್ನಡ ಕೂಟ ದುಬೈಯು   ಕೊರ್ಫಾಖಾನ್ ಹಾಗು ಶುಕ್ರವಾರ ಸಂತೆ ( friday market ) ಗೆ  ಒಂದು ದಿನದ ಪ್ರವಾಸವನ್ನು  ಆಯೋಜಿಸಿದ್ದರು. ದುಬೈ ಕನ್ನಡ ಬಂಧುಗಳು ಬೆಳಗ್ಗೆ ೮:೦೦ ಕ್ಕೆ  ಸರಿಯಾಗಿ  ಭಾರತೀಯ  ರಾಯಭಾರಿ  ಕಛೇರಿ  ವಲಯದಿಂದ  ಬಸ್  ಏರಿದರೆ ಶಾರ್ಜಾ ಕನ್ನಡ ಬಂಧುಗಳು ೮:೪೫ ಕ್ಕೆ  ಸಿಟಿ ಸೆಂಟರ್ ವಲಯದಿಂದ ಬಸ್ ಏರಿದರು

ಸುಮಾರು ೨೫ಕ್ಕೂ ಮಿಕ್ಕ ಕುಟುಂಬಗಳ ೭೦ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ಕನ್ನಡಿಗರ ತಂಡ ಶಾರ್ಜಾ  ನ್ಯಾಷನಲ್ ಪಾರ್ಕ್ ಬಳಿ ಸಾಮೂಹಿಕ ಉಪಹಾರ ಸವಿದು ಪ್ರಯಾಣವನ್ನು ಮುಂದುವರಿಸಿದರು. ಪ್ರಯಾಣದುದ್ದಕ್ಕೂಎಡೆಬಿಡದೆ ನಡೆದ  ವಿವಿಧ ಮನೋರಂಜನಾ  ಕಾರ್ಯಕ್ರಮಗಳು ವಾರ ಪೂರ್ತಿ ದುಡಿದು ಬಸವಳಿದ ಕನ್ನಡಿಗರಲ್ಲಿ ಚಿಣ್ಣರ ಶಾಲಾ  ಪ್ರವಾಸದ ಉತ್ಸಾಹವನ್ನು ತುಂಬಿತ್ತು . ಅವುಗಳಲ್ಲಿ  ಪ್ರಮುಖವಾದುವು ಶ್ರೀ ಗುರುರಾಜ್,ಶ್ರೀ  ಉದಯ್ ನಂಜಪ್ಪ, ಶ್ರೀ ಶರತ್ , ದೀಪ, ಶ್ರೀ ಅಬ್ದುಲ್ ರಜಾಕ್ ಮತ್ತು ಶ್ವೇತ ನಡೆಸಿಕೊಟ್ಟ ಕನ್ನಡ ಹಾಡುಗಳ ಕಾರ್ಯಕ್ರಮ, ಪ್ರಯಾಣಿಕರನ್ನು ನಗೆಗಡಲಲ್ಲಿ ತೇಲಿಸಿದ ಆರತಿ ಘಟಿಕರ್ ಅವರ ಹನಿಗವನ ವಾಚನ ಹಾಗು ಎಲ್ಲಾ ಕನ್ನಡಿಗರು ಪಾಲ್ಗೊಂಡು ನಡೆಸಿದ ಅಂತಾಕ್ಷರಿ ಕ್ರಮಿಸಿದ ೧೦೦ ಕಿಲೋಮಿಟೆರ್ ದೂರವನ್ನು ಅನಾಯಾಸಗೊಳಿಸಿತ್ತು.

kk picnic (11)

kk picnic (16)

ಮೊದಲಿಗೆ  friday market ಸುತ್ತಿ , ಕೆಲವರ ಖರೀದಿಗಳ ನಂತರ ತಲುಪಿದ್ದು ಕೊರ್ಫಾಖಾನ್ ಎಂಬ ಸುಂದರ ಸಮುದ್ರ ಕಿನಾರೆಯನ್ನು. ಅಭಾಲ ವೃದ್ದರು ಎಂದು ಭೇದಭಾವವಿಲ್ಲದೆ ಎಲ್ಲರನ್ನೂ ಮುದಗೊಳಿಸುವ ಸಮುದ್ರ ತೆರೆಗಳಲ್ಲಿ ಕೆಲವರು ಆಟವಾಡಿದರೆ ಕೆಲವು ಧೈರ್ಯವಂತರು jet ski ಮಾಡಿದರು ಇನ್ನು ಕೆಲವರು  para sailing ಮಾಡಿ ಪ್ರವಾಸದ ಮಜವನ್ನು ಅನುಭವಿಸಿದರು. ಮದ್ಯಾಹ್ನದ ಊಟದವನ್ನು ಸ್ಥಳೀಯ ಹೋಟೆಲ್ನವರು ಒದಗಿಸಿದ್ದರು . ಸಂಜೆಯ ತನಕವೂ ಸಮುದ್ರ ಕಿನಾರೆಯಲ್ಲಿ ಕಳೆದ ಬಂಧುಗಳು ವಾರಾಂತ್ಯದ ರಜೆಯನ್ನು ತಮ್ಮ ಊರಿನ, ತಮ್ಮ ರಾಜ್ಯದ ಗೆಳೆಯ ಗೆಳತಿಯರೊಂದಿಗೆ ಕಳೆದ ಖುಷಿ ಹಾಗು ಉತ್ಸಾಹದಿಂದ ಮತ್ತೆ ಶಾರ್ಜಾ/ದುಬೈ ಕಡೆ ಪ್ರಯಾಣ ಬೆಳೆಸಿದರು.

kk picnic (14)

ಈ ಪ್ರವಾಸ ಬರಿಯ ಮೋಜು ಮಸ್ತಿಗೆ ಮೀಸಲಾಗದೆ, ಮೈಸೂರಿನ ಮೋಹನ್ ಅವರಿಗೆ ತನ್ನ ತಂದೆಯ ಚಿಕಿತ್ಸೆಯ ವೆಚ್ಚವನ್ನು ಬರಿಸಲು ನೆರೆದ ಕನ್ನಡಿಗರೆಲ್ಲರೂ  ತನ್ನ ಕೈಲಾದ ಸಹಾಯವನ್ನು ನೀಡಿ ಮಾನವೀಯತೆ ಮೆರೆದುದಲ್ಲದೆ ಕನ್ನಡಿಗರ ಉದಾತ್ತ ಗುಣವನ್ನು ಎತ್ತಿ ಹಿಡಿದರು.

ಈ ಕಾರ್ಯಕ್ರಮವನ್ನು ಕನ್ನಡ ಕೂಟ ದುಬೈಯ ಅಧ್ಯಕ್ಷರಾದ  ಶ್ರೀ ಸಾಧನ್ ದಾಸ್ ಹಾಗು ಇತರ ಪದಾಧಿಕಾರಿಗಳಾದ ಶ್ರೀ ಅರುಣ ಮುತ್ತುಗದರ್ , ಶ್ರೀ ಮಲ್ಲಿಕಾರ್ಜುನ ಗೌಡ , ಶ್ರೀ ವೀರೇಂದ್ರ ಬಾಬು ಮತ್ತು ಶ್ರೀಮತಿ ಉಮ ವಿಧ್ಯಾದರ್ ಅವರ ಸಹಕಾರದೊಂದಿಗೆ ಶ್ರೀ ಸಂದೀಪ್ ಕುಮಾರ್ ವಾಲೆ ಯವರು ಆಯೋಜಿಸಿದ್ದರು.

 ವರದಿ ನಿರೂಪಣೆ: ಆರತಿ ಅಡಿಗ

He is a Software Engineer from Moodbidri currently living in Kuwait. He likes to travel and post interesting things about technology. He is the designer of Kannadigaworld.com. You may follow him on FB at fb.com/alanpaladka

Write A Comment