ಕುಂದಾಪುರ: ನಗರದ ಪ್ರತಿಷ್ಟಿತ ಕಾಲೇಜಿನ ಮಾಜಿ ವಾಲಿಬಾಲ್ ಆಟಗಾರ ಕುಂದಾಪುರ ಖಾರ್ವಿಕೇರಿ ನಿವಾಸಿಯೊಬ್ಬರು ಕುವೈಟ್ ನಲ್ಲಿ ಜು.16ರಂದು ನಿಧನರಾದ ಬಗ್ಗೆ ವರದಿಯಾಗಿದೆ.
(ಸಾಂದರ್ಭಿಕ ಚಿತ್ರ)
ಕುವೈಟ್ ಕಂಪೆನಿಯಲ್ಲಿಯೊಂದರಲ್ಲಿ ಉದ್ಯೋಗಿಯಾಗಿದ್ದ ಇವರು ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದು ತಪಾಸಣೆ ನಡೆಸಿದಾಗ ಕೋವಿಡ್ ಸೋಂಕು ತಗಲಿರುವುದು ದೃಢವಾಗಿದೆ ಎನ್ನಲಾಗಿದ್ದು ಮೂರು ವಾರಗಳಿಂದ ಕುವೈಟ್ ನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಮೃತ ದೇಹದ ಅಂತಿಮ ಕಾರ್ಯವನ್ನು ಕುವೈಟ್ ನಲ್ಲಿಯೇ ನಡೆಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕುಂದಾಪುರದಲ್ಲಿ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದ ಅವರ ಸಾವಿನ ಬಗ್ಗೆ ಆತ್ಮೀಯವಾಗಿದ್ದ ಗೆಳೆಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.
Comments are closed.