Kuwait

ಕೊರೊನಾ ಎಫೆಕ್ಟ್: ಕುವೈಟ್‌ ಸಂಪೂರ್ಣ ಸ್ತಬ್ಧ: ಮಾಲ್ ಬಂದ್(Video)

Pinterest LinkedIn Tumblr

ಕುವೈಟ್: ಕೊರೊನಾ ವೈರಸ್ ಎಂಬ ಮಹಾಮಾರಿ ವಿಶ್ವದಾದ್ಯಂತ ಸಂಚಲನ ಮೂಡಿಸಿದ್ದು, ಕುವೈಟ್‌ನಲ್ಲಿ ವ್ಯವಹಾರ ಸಂಪೂರ್ಣ ಸ್ತಬ್ದಗೊಂಡಿದೆ. ಇದರ ಪರಿಣಾಮ ಉದ್ಯೋಗಕ್ಕಾಗಿ ಕುವೈಟ್‌ಗೆ ತೆರಳಿದ ಕನ್ನಡಿಗರು ಸೇರಿದಂತೆ ಭಾರತೀಯರು ಆತಂಕದಲ್ಲಿದ್ದಾರೆ.

ಭಾರತೀಯ ರಾಯಭಾರಿ ಕಚೇರಿ ಮೂಲದ ಪ್ರಕಾರ ಕುವೈಟ್‌ನಲ್ಲಿ ಸುಮಾರು 9 ಲಕ್ಷ ಮಂದಿ ಭಾರತೀಯರಿದ್ದು, ಇವರಲ್ಲಿ 50 ಸಾವಿರ ಮಂದಿ ಕನ್ನಡಿಗರೇ ಇದ್ದಾರೆ. ಅದರಲ್ಲೂ 25 ಸಾವಿರಕ್ಕೂ ಅಧಿಕ ಮಂದಿ ಕರಾವಳಿಗರಾಗಿದ್ದಾರೆ. ಕುವೈಟ್‌ನಲ್ಲಿ ಮಾ.12ರಿಂದ ಮಾ.29ರವರೆಗೆ ಸರಕಾರಿ ಸಂಸ್ಥೆಗಳಿಗೆ, ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಮಾತ್ರವಲ್ಲದೆ ಮಾ.13ರ ರಾತ್ರಿಯಿಂದ ಎಲ್ಲದೇಶಗಳ ವಿಮಾನಯಾನ ಸಂಪೂರ್ಣ ಸ್ಥಗಿತಗೊಳಿಸಿ ಅಲ್ಲಿನ ಸರಕಾರ ಆದೇಶ ಮಾಡಿದೆ. ಈ ಮೂಲಕ ಕುವೈಟ್‌ ರಾಷ್ಟ್ರದ ವ್ಯವಹಾರ ಸಂಪೂರ್ಣ ಸ್ತಬ್ದಗೊಂಡಿದೆ.

ಜನರಿಗೆ ಹೊಟೇಲ್‌ಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದ್ದು ಮಾಲ್‌ಗಳ ಪ್ರವೇಶಕ್ಕೂ ನಿರ್ಬಂಧಿಸಲಾಗಿದೆ.ಹಾಗೆಯೇ ಆರೋಗ್ಯ ಕೇಂದ್ರಗಳು, ಕ್ಲಬ್‌ಗಳಲ್ಲಿ ಜನರು ಹೆಚ್ಚಾಗಿ ಗುಂಪುಗೂಡುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರಗಳು, ಕ್ಲಬ್‌ಗಳನ್ನು ಕೂಡಾ ಮುಚ್ಚಲು ಆದೇಶಿಸಲಾಗಿದೆ.

Comments are closed.