ಕರಾವಳಿ

ಕೊರೊನಾ ಭೀತಿ: ಕುಂದಾಪುರದ ವಾರದ ಸಂತೆಯಲ್ಲೂ ಜನರಿಲ್ಲ…ವ್ಯಾಪಾರವೂ ಕಮ್ಮಿ

Pinterest LinkedIn Tumblr

ಕುಂದಾಪುರ: ಕೊರೊನಾ ಭೀತಿಯಿಂದ ರಾಜ್ಯಾದ್ಯಂತ ಒಂದು ವಾರಗಳ ಕಾಲ ಮಾಲ್, ಕ್ಲಬ್, ಅಮ್ಯೂಸ್ ಮೆಂಟ್ ಪಾರ್ಕ್’ಗಳು ಬಂದ್ ಮಾಡಿ ರಾಜ್ಯ ಸರಕಾರ ಆದೇಶ ನೀಡಿದ ಬೆನ್ನಲ್ಲೆ ಜಿಲ್ಲೆಯಲ್ಲಿ ಪ್ರಮುಖ ಸಂತೆ ಎನಿಸಿಕೊಂಡಿರುವ ಕುಂದಾಪುರದ ವಾರದ ಸಂತೆಯಲ್ಲಿ ಶನಿವಾರ ಜನರೂ ಕಡಿಮೆ ಸಂಖ್ಯೆಯಲ್ಲಿದ್ದು ವ್ಯಾಪಾರ ವ್ಯವಹಾರ ಬಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಕುಂದಾಪುರ ಸಂತೆ ಪ್ರತಿ ಶನಿವಾರ ನಡೆಯುತ್ತದೆ. ದೂರದೂರುಗಳಿಂದ ಸಂತೆಗೆ ವ್ಯಾಪಾರಸ್ಥರು ಆಗಮಿಸುತ್ತಿದ್ದು ತಾಲೂಕಿನ ವಿವಿದೆಡೆಗಳಿಂದ ಖರೀದಿದಾರರು ಬರುತ್ತಾರೆ. ಆದರೆ ಈ ವಾರ ಸಂತೆಗೆ ಮಾತ್ರ ಗಣನೀಯ ಸಂಖ್ಯೆಯಲ್ಲಿ ಗ್ರಾಹಕರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದು ವ್ಯಾಪಾರ ಕಡಿಮೆಯಾಗಿತ್ತು. ಎಪಿಎಂಸಿ ವತಿಯಿಂದ ಕುಡಿಯುವ ನೀರು ಹಾಗೂ ಸ್ವಚ್ಚತೆಗೆ ಒತ್ತು ನೀಡಲಾಗಿತ್ತು. ಗ್ರಾಹಕರಿಲ್ಲದೆ ವ್ಯಾಪಾರಸ್ಥರು ತಲೆಮೇಲೆ ಕೈಹೊತ್ತು ಕೂರುವಂತಾಗಿತ್ತು.

(ಕುಂದಾಪುರ ಮೀನು ಮಾರುಕಟ್ಟೆ)

ಇನ್ನು ಕುಂದಾಪುರದ ಏಕೈಕ ಸಿನೆಮಾ ಮಂದಿರ ವಿನಾಯಕ ಚಿತ್ರಮಂದಿರವೂ ಮುಚ್ಚಿತ್ತು. ಮೀನು ಮಾರುಕಟ್ಟೆಯಲ್ಲಿ ಎಂದಿನಂತೆ ಗ್ರಾಹಕರು ಇರಲಿಲ್ಲ. ಎರಡನೇ ಶನಿವಾರದ ಕಾರಣ ಸರಕಾರಿ ಕಚೇರಿಗಳು ಮುಚ್ಚಿದ್ದು ಜನರ ಓಡಾಟವೂ ಕಮ್ಮಿಯಾಗಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.