Bahrain

ಒಮಾನ್ ಬಿಲ್ಲವಾಸ್ ಕೂಟದಿಂದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ನಾರಾಯಣ ಗುರು ಪೂಜೆ ಆಚರಣೆ

Pinterest LinkedIn Tumblr

ಮಸ್ಕತ್’ನ “ಒಮಾನ್ ಬಿಲ್ಲವಾಸ್” ಕೂಟದಿಂದ ದಾರ್ಸೈಟ್ ಶ್ರೀ ಕೃಷ್ಣ ದೇವಸ್ಥಾನದ ವಠಾರದಲ್ಲಿ  ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ನಾರಾಯಣ ಗುರು ಪೂಜೆ ಬಹಳ ಅದ್ದೂರಿಯಾಗಿ ನಡೆಯಿತು. ಮಸ್ಕತಿನ ಸರ್ವ ಜಾತಿ ಬಂಧವರು ಭಾಗವಹಿಸಿ, ಭಜನೆ, ಚೆಂಡೆ ವಾದನ, ಮಹಾಪೂಜೆ, ನಂತರ ಮಹಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರದರು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಣ್ಮಣ ಸೆಳೆದದ್ದು ವಿಶ್ವ ವಿಖ್ಯಾತ ಮಂಗಳೂರು ದಸರಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತುಳುನಾಡಿನ ಪುಣ್ಯ ಕ್ಷೇತ್ರವಾದ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವನ್ನು ಹೋಲುವಂತಹ ಶ್ರೀ ನಾರಾಯಣ ಗುರುವರ್ಯರ ಮುಖಮಂಟಪದ ಚಿತ್ರಣ.

ಅದಲ್ಲದೆ ಸಮಾಜ ಮುಖಿ ಕೆಲಸ ಮಾಡುವ ಓಮನ್ ಬಿಲ್ಲವ ಕೂಟ ಕಳೆದ ಜುಲೈ ತಿಂಗಳಲ್ಲಿ ವಾರ್ಷಿಕ ಸ್ಕಾಲರ್ಶಿಪ್ ಕಾರ್ಯಕ್ರಮವನ್ನು ಮಾಡಿ ಸುಮಾರು ನೂರು ಬಡ ವಿಧ್ಯಾರ್ಥಿಗಳಿಗೆ ಸಹಾಯ ಧನ ವಿತರಿಸಲಾಯಿತು. ಮಸ್ಕತಿನ ಸಮುದಾಯ ವ್ಯಕ್ತಿಗಳ ತುರ್ತು ಸ್ಪಂದನೆಯನ್ನು ನೀಡುತ್ತಾ ಬಂದಿದೆ.

ಬರುವ ತಿಂಗಳ ನವರಾತ್ರಿ ಹಬ್ಬದ ಸಮಯದಲ್ಲಿ ಪೂಜಾ ಹಾಗೂ ದಾಂಡ್ಯಯ ನ್ರತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Oman Bilawas celebrates Shri Satyanarayana Pooja and Sri Narayana Guru Pooja

Oman Bilawas celebrated annual Shri Satyanarayana Pooja and Sri Narayana Guru Pooja in a grand manner at Sri Krishna Temple, Darsait, Muscat. People of all communities participated in the event in large numbers and sought blessings of the almighty. They offered Bhajan, Kende Vadana, Mahapooja and accepted Mahaprasadam.

A beautifully created miniature replica of a the entrance gopuram of Kudroli Sri Gokarnanatha Temple bearing the image of Sri Narayan Guru was the prime attraction of the occasion. This is part of Oman Bilawas’ efforts to bring together the Mangalorean community residing in Sultanate of Oman and preserve the community’s age old traditions.

As an organization with socially commitment, Oman Billawas has also recently extended its annual scholarship program and provided financial assistance to over one hundred poor students. It has also rendered timely help to the community members during emergencies and in times of adversity.

Oman Billawas plans to organize Pooja and Dandiya dance programme during the Navarathri festival.

Comments are closed.