ಸಿಂಹಾದ್ರಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾದ ಚಿತ್ರಮಹಾಕಾಳಿ. ಈ ಚಿತ್ರವನ್ನು ಎಸ್ ಮಹೇಂದರ್ ಅವರು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ, ಇನ್ನು ಹತ್ತು ಹಲವಾರು ಸಂಗತಿಗಳಿಗೆ ಸಂಬಂಧಪಟ್ಟಂತೆ ಅನೇಕ ಅಡೆತಡೆಗಳನ್ನು ಚಿತ್ರತಂಡ ಎದುರಿಸಿದರೂ ಅವುಗಳೆಲ್ಲ ಈಗ ದೂರವಾಗಿ ಚಿತ್ರವು ತನ್ನ ಕೆಲಸ ಪೂರ್ಣ ಮಾಡಿದೆ.
ಇತ್ತೀಚಿಗೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ದೊರೆತಿದೆ. ಮಹಾಕಾಳಿಯನ್ನು ಬೆಂಗಳೂರು, ಮೈಸೂರು, ಲಡಕ್ ಹಾಗೂ ಇನ್ನು ಹಲವಾರು ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ.
ಎಸ್.ಮಹೇಂದರ್ ಚಿತ್ರಕಥೆ ಮತ್ತು ನಿರ್ದೇಶನದ ಚಿತ್ರ ಮಹಾಕಾಳಿಯ ಕಥೆಯನ್ನು ಅಜಯ್ ಕುಮಾರ್ ಅವರು ಬರೆದಿದ್ದಾರೆ. ಅನಿಲ್ ಕುಮಾರ್ ಅವರು ಇದಕ್ಕೆ ಸಂಭಾಷಣೆ ಬರೆದಿದ್ದಾರೆ.
ಅದ್ಧೂರಿ ಚಿತ್ರವಾಗಿರುವ ಮಹಾಕಾಳಿಯನ್ನು ರಮೇಶ್ ಅವರು ನಿರ್ಮಾಣ ಮಾಡಿದ್ದಾರೆ. ಶ್ರೀನಿವಾಸ ಮೂರ್ತಿ, ಎಂ.ಎನ್.ಲಕ್ಷ್ಮಿದೇವಿ, ದಿಲೀಪ್, ಜೈಜಗದೀಶ್ ಮುಂತಾದವರು ಅಭಿನಯಿಸಿದ್ದಾರೆ.