ಕನ್ನಡಿಗ ಸ್ಪೆಷಲ್ , ಮಾರ್ಚ್.16: ಹಿಂದೂ ಅವಿಭಕ್ತ ಕುಟುಂಬಕ್ಕೆ ಸಂಬಂಧಿಸಿದ ಆದಾಯ ತೆರಿಗೆ ನೀತಿಯ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಅಗತ್ಯವಾಗುತ್ತದೆ. ದಶಕಗಳ ಹಿಂದಿನ ಅವಿಭಕ್ತ ಕುಟುಂಬಕ್ಕೂ ಇಂದಿನ ಅವಿಭಕ್ತ ಕುಟುಂಬಕ್ಕೂ ಅನೇಕ ವ್ಯತ್ಯಾಸಗಳಾಗಿರುವುದನ್ನು ಕಾಣುತ್ತೇವೆ. ತಂದೆ ತಾಯಿ ಜತೆ ಮಕ್ಕಳು ಮತ್ತು ಅವರ ಹೆಂಡತಿ ಒಟ್ಟಿಗೆ ವಾಸವಿದ್ದರೆ ಎಲ್ಲರಿಗೂ ಏಕರೂಪವಾದ ಕಾನೂನು ಅನ್ವಯವಾಗುತ್ತದೆ. ಹಿಂದು ಅವಿಭಕ್ತ ಕುಟುಂಬ ಕಾನೂನು(ಎಚ್ ಯುಎಫ್) ಅನ್ವಯ ಕುಟುಂಬದ ಮಹಿಳಾ ಸದಸ್ಯರು ತಮ್ಮ ಆಸ್ತಿ ಹಂಚಿಕೆ ಮಾಡುವ ಸ್ವಾತಂತ್ರ್ಯ ಹೊಂದಿರುತ್ತಾರೆ. ಇಲ್ಲಿ ಪುರುಷ ಮತ್ತು ಮಹಿಳೆಗೆ ಸಮಾನ ಹಕ್ಕುಗಳಿರುತ್ತದೆ
ಹಿಂದೂ ಅವಿಭಕ್ತ ಕುಟುಂಬ ಕಾನೂನಿಗೆ ಸಂಬಂಧಿಸಿದ ಕೆಲ ಸಂಗತಿಗಳು:
1. ಕುಟುಂಬದ ಹಿರಿಯ ಸದಸ್ಯನನ್ನು ಮನೆಯ ಯಜಮಾನ ಎಂದು ಕರೆಯಲಗುವುದು ಅಥವಾ ಆ ರೀತಿ ಗುರುತಿಸಲಾಗುವುದು. ಒಂದು ವೇಳೆ ಆತ ಸಾವನ್ನಪ್ಪಿದರೆ ಆತನ ಹೆಂಡತಿಯ ಬದಲು ಅಧಿಕಾರ ನಂತರದ ತಮ್ಮನಿಗೆ ದೊರೆಯುತ್ತದೆ.
2. ಕುಟುಂದ ಎಲ್ಲ ಪುರುಷ ಸದಸ್ಯರಿಗೆ ಆಸ್ತಿಯ ಮೇಲೆ ಸಮಾನ ಹಕ್ಕಿರುತ್ತದೆ. ಮಹಿಳೆಯರನ್ನು ಕುಟುಂಬದ ಸದಸ್ಯರು ಎಂದು ಪರಿಗಣನೆ ಮಾಡಲಾಗುತ್ತದೆ.
3. ಆದಾಯ ತೆರಿಗೆ ನೀತಿ ಅನ್ವಯ ಅವಿಭಕ್ತ ಕುಟುಂಬವನ್ನು ಪ್ರತ್ಯೇಕ ವ್ಯಕ್ತಿ ಎಂದು ಪರಿಗಣನೆ ಮಾಡಲಾಗುತ್ತದೆ. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಕುಟುಂಬದ ಖಾತೆಗೆ ತನ್ನ ಆದಾಯದ ಭಾಗವನ್ನು ಸಂದಾಯ ಮಾಡಬೇಕಾಗುತ್ತದೆ.
4. ಕುಟುಂಬದ ಹಿರಿಯನಿದ್ದಲ್ಲಿ ಕಿರಿಯ ಯಜಮಾನನಾಗುವುದಿಲ್ಲ. ಆದರೆ ಉಳಿದ ಎಲ್ಲ ಪುರಿಷ ಸದಸ್ಯರು ಒಪ್ಪಿಗೆ ನೀಡಿದಲ್ಲಿ ಕಿರಿಯನಾದರೂ ಮನೆಯ ಮುಂದಾಳತ್ವ ವಹಿಸಿಕೊಳ್ಳಬಹುದು.
5. ಹೊಸ ಕಾನೂನಿನ ಅನ್ವಯ ಎಚ್ ಯುಎಫ್ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು. ಆದರೆ ಈ ಬಗ್ಗೆ ಸ್ಟಾಂಪ್ ಪೇಪರ್ ನಲ್ಲಿ ಅಫಿಡವಿಟ್ ಮಾಡಿಕೊಳ್ಳಬೇಕಾಗುತ್ತದೆ.
6. ಕುಟುಂಬದ ಹಿರಿಯ ಸದಸ್ಯ ಅವಿಭಕ್ತ ಕುಟುಂಬಕ್ಕೆ ಸಂಬಂಧಿಸಿದ ಪ್ಯಾನ್ ಕಾರ್ಡ್ ಪಡೆಯಬೇಕಾದರೆ ತಂದೆಯ ಹೆಸರು, ಕುಟುಂಬದ ಎಲ್ಲ ಪುರುಷ ಸದಸ್ಯರ ಹೆಸರು ಮತ್ತು ವಿಳಾಸ, ದಿನಾಂಕ ಎಲ್ಲವನ್ನು ಸ್ಪಷ್ಟವಾಗಿ ನಮೂದು ಮಾಡಬೇಕಾಗುತ್ತದೆ.
7. ಅಫಿಡವಿಟ್ ಫಾರ್ಮೆಟ್ ಈ ತಾಣದಲ್ಲಿ ಲಭ್ಯವಿರುತ್ತದೆ.
8. ಈ ಬಗೆಯ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಅಥವಾ ಕುಟುಂಬದ ಯಜಮಾನ ಎಲ್ಲ ದಾಖಲೆಗಳನ್ನು ನೀಡಬೇಕಾಗುತ್ತದೆ.
9. ಕುಟುಂಬದ ಸದಸ್ಯರಲ್ಲಿ ಯಾರಾದರೊಬ್ಬ ಪಾಲು ಬಯಸಿದರೆ ಅಥವಾ ಬೇರೆಯಾಗಲು ಬಯಸಿದರೆ ಆಗ ಸಮಸ್ಯೆ ಉಂಟಾಗುತ್ತದೆ.
