ವಾಣಿಜ್ಯ

‘ಚಿನ್ನ’ ಪ್ರಿಯರಿಗೆ ಸಿಹಿ ಸುದ್ದಿ ! ಚಿನ್ನದ ದರದಲ್ಲಿ ಭಾರೀ ಇಳಿಕೆ

Pinterest LinkedIn Tumblr

ಮುಂಬೈ : ಜಾಗತಿಕವಾಗಿ ಚಿನ್ನದ ದರದಲ್ಲಿ ನಿರಂತರವಾಗಿ ಏರಿಳಿತವಾಗುತ್ತಿದ್ದು, ಇದೀಗ ಬಂಗಾರ ಕೊಳ್ಳುವವರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಕಾದಿದೆ. ಭಾರೀ ಪ್ರಮಾಣದಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ.

10 ಗ್ರಾಂ ಚಿನ್ನದ ದರದ ಮೇಲೆ 365 ರು. ಇಳಿಕೆ ಯಾಗಿದೆ. ಇದರಿಂದ 10 ಗ್ರಾಂ ಚಿನ್ನದ ಬೆಲೆ 30,435 ರು.ನಷ್ಟಾಗಿದೆ. ಜಾಗತಿಕ ಮಟ್ಟದಲ್ಲಿ ಚಿನ್ನದ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ದರದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಇನ್ನು ಇದೇ ವೇಳೆ ಬೆಳ್ಳಿಯ ದರವೂ ಕೂಡ ಇಳಿಕೆಯಾಗಿದೆ. ಚಿನ್ನದ ದರದ ಮೇಲೆ ಡಾಲರ್ ಬೆಲೆ ಏರಿಕೆಯೂ ಪ್ರಭಾವ ಬೀರಿದೆ ಎಂದು ಬಂಡವಾಳಗಾರರು ಹೇಳುತ್ತಾರೆ.

Comments are closed.