ವಾಣಿಜ್ಯ

ಚಿನ್ನ ಖರೀದಿಸುವ ಮುನ್ನ ಇತ್ತ ನೋಡಿ…!

Pinterest LinkedIn Tumblr

ನವದೆಹಲಿ : ಇನ್ನೇನು ಮದುವೆ ಸೀಸನ್ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಬಂಗಾರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಸದ್ಯ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

ಪ್ರತೀ 10 ಗ್ರಾಂ ಚಿನ್ನದ ಬೆಲೆಯಲ್ಲಿ 170 ರು ಏರಿಕೆಯಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಏರಿಕೆಯಾದ ಬೇಡಿಕೆಗೆ ಅನುಗುಣವಾಗಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಸದ್ಯ 10 ಗ್ರಾಂ ಚಿನ್ನದ ಬೆಲೆಯು 31,820 ರು.ಗಳಾಗಿದೆ.

ಅಲ್ಲದೇ ಸದ್ಯ ಗ್ರಾಹಕರನ್ನು ಸೆಳೆಯಲು ಹೆಚ್ಚಿನ ಆಫರ್’ಗಳನ್ನೂ ಕೂಡ ನೀಡಲಾಗುತ್ತಿದೆ. ಆದರೆ ಬೆಳ್ಳಿಯ ಬೆಲೆಯು ಮಾತ್ರ ವಾರದಲ್ಲಿ ಇಳಿಕೆಯಾಗಿದೆ. ಪ್ರತೀ ಕೆಜಿ ಬೆಳ್ಳಿಯ ಬೆಲೆಯಲ್ಲಿ 580 ರು. ಇಳಿಕೆಯಾಗಿದ್ದು, ಪ್ರತೀ ಕೆಜಿ ಬೆಲೆಯು 39,380 ಇದೆ.

Comments are closed.