ಕರಾವಳಿ

ಕುಂದಾಪುರ ತಾಲೂಕು ಪಂಚಾಯತ್ ಸಭೆಯಲ್ಲಿ ‘ಹೊಟೇಲ್’ ವಿಚಾರದಲ್ಲಿ ಜಟಾಪಟಿ!

Pinterest LinkedIn Tumblr

ಕುಂದಾಪುರ: ಹೊಟೇಲ್ ಒಂದು ತಾಪಂ ಆಸ್ತಿ ಪರಬಾರೆ ಮಾಡಿದ್ದು ತಾ.ಪಂ. ಇ‌ಒ ಕರ್ತವ್ಯ ಲೋಪವೆಸಗಿದ್ದಾರೆಂದು ಆಡಳಿತ ಪಕ್ಷ ಸದಸ್ಯರ ನಡುವೆಯೇ ಪರ,ವಿರೋಧ ವ್ಯಕ್ತವಾಗಿತ್ತು. ಲೋಕಾಯುಕ್ತ ತನಿಖೆ ಸರ್ವಾನುಮತ ನಿರ್ಣಯ ಅಜೆಂದಾದಲ್ಲಿ ಕಾಣೆಯಾದ ಬಗ್ಗೆ ಆಕ್ರೋಷ ಒಂದೆಡೆಯಾದರೇ ಮಂಡಿಸಿದ ನಿರ್ಣಯ ಅಂಗೀಕರಿಸದಿದ್ದರೆ ಬಾವಿಗಿಳಿದು ಪ್ರತಿಭಟನೆ ಎಚ್ಚರಿಕೆ. ಒಂದೇ ವಿಷಯ ಹಿಡಿದುಕೊಂಡ ಬೇರೆ ವಿಷಯ ಚರ್ಚೆಗೆ ಅವಕಾಶ ಕೊಡದಿದ್ದರೆ ಪ್ರತಿಭಟನೆ ಮಾಡುವವರ ವಿರುದ್ಧವೇ ಪ್ರತಿಭಟನೆ ಎಚ್ಚರಿಕೆ…..ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಂಡುಬಂದ ಪ್ರಮುಖ ವಿಷಯ.

ಕಳೆದ ಸಾಮಾನ್ಯ ಸಭೆಯಲ್ಲಿ ಹೊಟೇಲ್ ಒಂದರ ಬಾಡಿಗೆ ಹಾಗೂ ಜಾಗದ ಒತ್ತುವರಿ ಬಗ್ಗೆ ಲೋಕಾಯುಕ್ತ ತನಿಖೆಗೆ ಸರ್ವಾನುಮತದ ನಿರ್ಣಯ ಮಾಡಲಾಗಿತ್ತು. ಆದರೆ ಅಜೆಂಡಾದಲ್ಲಿ ವಿಷಯವೇ ಇಲ್ಲ. ತಾಪಂ ಆಸ್ತಿ ಪರಬಾರೆ ಮಾಡಲು ಹೊಟೇಲ್ ಜೊತೆ ಅಧಿಕಾರಿಗಳು ಶ್ಯಾಮೀಲಾಗಿದ್ದಾರೆ. ಒತ್ತುವರಿ ಜಾಗ ಹಿಂದಕ್ಕೆ ಪಡೆಯಬೇಕು. ಹೊಟೇಲ್ ಬಾಡಿಗೆ ಸ್ಥಳ ಒತ್ತುವರಿ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಒತ್ತಾಯಿಸಿದರು.
ಹೊಟೇಲ್ ಜಾಗ ಒತ್ತುವರಿ ತಾಪಂ ವರಮಾನ ನಷ್ಟ ಮಾಡುತ್ತಿದೆ. ಜಾಗ ಹಿಂದಕ್ಕೆ ಪಡೆಯುವಂತೆ ಜ್ಯೋತಿ ಪುತ್ರನ್, ಕರಣ್ ಕುಮಾರ್ ಪೂಜಾರಿ ಒತ್ತಾಯಿಸಿದರು.

ಈ ಸಂದರ್ಭ ಆಡಳಿತ ಪಕ್ಷದ ನಡೆವೆ ಒಮ್ಮತವಿಲ್ಲದೆ ಲೋಕಾಯಕ್ತ ತನಿಖೆ ಬೇಕು ಎನ್ನುವವರ ಒಂದು ಕಡೆಯಾದರೆ, ಎಲ್ಲವನ್ನೂ ಲೋಕಾಯುಕ್ತ ತನಿಖೆ ನಡೆಸಲಿ ಎಂದು ಆಡಳಿತ ಪಕ್ಷದ ಸದಸ್ಯರೇ ಒತ್ತಾಯಿಸಿದರು. ಸಮಿತಿ ರಚಿಸಿ, ತನಿಖೆ ನಡೆಸಿ ನಂತರ ಕ್ರಮ ಕೈಗೊಳ್ಳುವಂತೆ ನಾರಾಯಣ ಗುಜ್ಜಾಡಿ, ರಾಮಕಿಶನ್ ಹೆಗ್ಡೆ ಸಲಹೆ ಮಾಡಿದರು. ಕುಂದಾಪುರ ತಾಪಂ ಎಲ್ಲಾ ಬಾಡಿಗೆ ಕಟ್ಟಡಗಳ ಬಗ್ಗೆ ತನಿಖೆ ನಡೆಸುವಂತೆ ಇಂದಿರಾ ಶೆಟ್ಟಿ, ದಸ್ತಗೀರ್ ಮೌಲಾನಾ ಒತ್ತಾಯಿಸಿದರು.

ಲೋಕಾಯುಕ್ತ ತನಿಖೆ ಮಂಡನೆ ಬಗ್ಗೆ ನಿರ್ಣಯ ದಾಖಲು ಮಾಡಬೇಕು. ಪರ,ವಿರೋಧವಿದ್ದರೆ ಮತದಾನದ ಮೂಲಕ ಅಳೆಯಲಿ. ನಿರ್ಣಯ ದಾಖಲಾಗದಿದ್ದರೆ ಬಾವಿಗಿಳಿದು ಪ್ರತಿಭಟನೆ ಮಾಡುವುದಾಗಿ ಮಹೇಂದ್ರ ಪೂಜಾರಿ ಎಚ್ಚರಿಸಿದರೆ, ತಾಪಂ ಸಭೆಯಲ್ಲಿ ಹೊಟೇಲ್ ವಿಷಯ ಹಿಡಿದು ಸಮಯ ಕೊಲ್ಲಲಾಗುತ್ತಿದೆ. ಬೇರೆ ವಿಷಯ ಚರ್ಚೆಗೆ ಅವಕಾಶ ಮಾಡಿಕೊಡದಿದ್ದರೆ, ಪ್ರತಿಭಟಿಸುವ ಎಚ್ಚರಿಕೆ ನೀಡಿದವರ ವಿರುದ್ಧ ನಾವು ಪ್ರತಿಭಟಿಸುತ್ತೇವೆ ಎಂದು ಜಗದೇಶ ದೇವಾಡಿಗ, ಉದಯ ಪೂಜಾರಿ ಹಕ್ಕಾಡಿ ಎಚ್ಚರಿಸಿದರು. ಲೋಕಾಯುಕ್ತ ತನಿಖೆ ಪರ ಮಹೇಂದ ಪೂಜಾರಿ ನಿಂತಿದ್ದು, ಪಷ್ಪರಾಜ್ ಶೆಟ್ಟಿ ವಿರೋಧಿಸಿದರು. ಒಟ್ಟಾರೆ ತಾಪಂ ಸಾಮಾನ್ಯ ಸಭೆ ಬಿಲ್ಲವ ವರ್ರ್‍ಸಸ್ ಬಂಟ ಎಂಬಂತೆ ಬಿಂಬಿತವಾಯಿತು.

ಕುಂದಾಪುರ ತಾಲೂಕ್ ಪಂಚಾಯಿತಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕಡ್ಕೆ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಇ‌ಒ ಕಿರಣ್ ಫಡ್ನೇಕರ್ ಇದ್ದರು.

ತಾಪಂ ಸಭೆಯಲ್ಲಿ ನಿಮಿಷ ಬ್ರೇಕ್..!
ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿ ಐದು ನಿಮಿಷ ಚರ್ಚಿಸಲು ಸಭಾಧ್ಯಕ್ಷರು ಅವಕಾಶ ಮಾಡಿಕೊಟ್ಟರು. ಖಾಸಗಿ ಹೊಟೇಲ್ ಒಂದರ ಜಾಗ ಒತ್ತುವರಿ ಹಿನ್ನೆಲೆಯಲ್ಲಿ ಹೊಟೇಲ್ ಬಾಡಿಗೆ ಕೊಟ್ಟ ದಿನದಿಂದ ಎಲ್ಲವನ್ನೂ ಲೋಕಾಯುಕ್ತ ತನಿಖೆಗೆ ಕೊಡಲು ಒತ್ತಾಯಿಸಿದ್ದು, ಅದಕ್ಕೆ ಆಡಳಿತ ಪಕ್ಷದ ಸದಸ್ಯರು ವಿರೋಧಿಸಿದರು.ಈ ಸಂದರ್ಭ ಸಭೆಯಲ್ಲಿ ಮಾತಿಗೆ ಮಾತು ಬೆಳೆಯಿತು. ಕೆಲವರು ಹೊಟೇಲ್ ಬಾಡಿಗೆ ರದ್ದು ಮಾಡಬಾರದು ಎಂದರೆ ಮತ್ತೆ ಕೆಲವರು ಲೋಕಾಯುಕ್ತ ತನಿಖೆ ಮಂಡನೆ ನಿರ್ಣಯ ಆಗಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಪರ, ವಿರೋಧ ಮತಾಭಿಪ್ರಾಯಕ್ಕೆ ಬರಲಾಯಿತು. ಪರ ವಿರೋಧ ಚರ್ಚಿಸಲು ಅಧ್ಯಕ್ಷರು ಐದು ನಿಮಿಷ ಅವಕಾಶ ಮಾಡಿಕೊಟ್ಟರು.

ರಟ್ಟಾಡಿ ಹಲ್ಲೆ ತನಿಖೆಗೆ ವಿಶೇಷ ಪೊಲೀಸ್ ತಂಡ
ಕಳೆದ ಆರೇಳು ತಿಂಗಳ ಹಿಂದೆ ರಟ್ಟಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ, ನಡೆಸಿ ಹಣ ದೋಚಿದ ಪ್ರಕರಣ ಹಾಗೂ ಕುಂದಾಪುರ ಕಾಲೇಜ್ ಒಂದರ ಬದಿ ನಡೆಯುತ್ತಿರುವ ಗಾಂಜಾ ಮಾರಾಟದ ಬಗ್ಗೆ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಗಮನ ಸೆಳೆಸಿದ್ದು, ಕುಂದಾಪುರ ಡಿ‌ವೈಎಸ್ಪಿ ಪ್ರವೀಣ್ ಹೆಚ್.ನಾಯ್ಕ್ ಉತ್ತರಿಸಿ, ರಟ್ಟಾಡಿ ಹಲ್ಲೆ ಪ್ರಕರಣ ತನಿಖೆಗೆ ವಿಶೇಷ ಪೊಲೀಸ್ ತಂಡ ರಚಿಸಿದ್ದು, ಇನ್ಸ್‌ಪೆಕ್ಟರ್ ಒಬ್ಬರಿಗೆ ತಂಡದ ನೇತೃತ್ವ ವಹಿಸಲಾಗಿದೆ. ಶಾಲಾ, ಕಾಲೇಜಿಗೆ ಪೊಲೀಸ್ ತೆರಳಿ ಮಾದಕ ವಸ್ತು ಸೇವನೆ ವಿರುದ್ಧ ಜಾಗೃತಿ ಮೂಡಿಸುತ್ತಿದ್ದು, ಮಾಧಕ ಸೇವನೆ ಒಂದು ಪ್ರಕರಣ ದಾಖಲು ಮಾ ಡಲಾಗಿದೆ. ಕುಂದಾಪುರ ಕಾಲೇಜ್ ಬಳಿ ನಡೆಯುತ್ತಿರುವ ಗಾಂಜಾ ವಹಿವಾಟು ಮೇಲೂ ಹದ್ದಿನ ಕಣ್ಣಿಡಲಾಗಿದೆ ಎಂಬ ಮಾಹಿತಿ ನೀಡಿದರು.

Comments are closed.